ಬೆಂಗೇರಿ ರಾಷ್ಟ್ರಧ್ವಜ: ಛತ್ತೀಸ್‌ಗಡ ಫಸ್ಟ್-ಗುಜರಾತ್ ಸೆಕೆಂಡ್
Team Udayavani, Aug 15, 2017, 11:57 AM IST
ಹುಬ್ಬಳ್ಳಿ: ಇಲ್ಲಿನ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ತಯಾರಾದ ರಾಷ್ಟ್ರಧ್ವಜಗಳು ಈ ಬಾರಿ ಛತ್ತೀಸ್‌ಗಡ ರಾಜ್ಯಕ್ಕೆ ಅತಿ ಹೆಚ್ಚು ರವಾನೆಯಾಗಿದ್ದು, ಗುಜರಾತ್ ಎರಡನೇ ಸ್ಥಾನದಲ್ಲಿದೆ. ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಉತ್ತರ ಪ್ರದೇಶವನ್ನು ಹಿಂದಿಕ್ಕಿ ಛತ್ತೀಸ್‌ಗಡ ಹೆಚ್ಚಿನ ಮೌಲ್ಯದ ಧ್ವಜಗಳನ್ನು ಖರೀದಿಸಿದೆ. ಛತ್ತೀಸ್‌ಗಡ ರಾಜ್ಯಕ್ಕೆ ಅಂದಾಜು 6.86ಲಕ್ಷ ರೂ. ಮೌಲ್ಯದ ರಾಷ್ಟ್ರಧ್ವಜಗಳು ಮಾರಾಟವಾಗಿವೆ.
ಗುಜರಾತ್ 5.37ಲಕ್ಷ ರೂ., ಕೇರಳ 5.35ಲಕ್ಷ ರೂ., ಉತ್ತರ ಪ್ರದೇಶ 4.77ಲಕ್ಷ ರೂ., ಪಶ್ವಿಮ ಬಂಗಾಳ 4.57ಲಕ್ಷ ರೂ., ಮಧ್ಯಪ್ರದೇಶ 4.35ಲಕ್ಷ ರೂ., ಬಿಹಾರ 4.04ರೂ., ಉತ್ತರಾಖಂಡ 3.50ಲಕ್ಷ ರೂ., ಮಹಾರಾಷ್ಟ್ರ 3.37ಲಕ್ಷ ರೂ., ಹರಿಯಾಣ 2.41ಲಕ್ಷ ರೂ., ರಾಜಸ್ಥಾನ 2.07ಲಕ್ಷ ರೂ., ಹಿಮಾಚಲ ಪ್ರದೇಶ 1.73ಲಕ್ಷ ರೂ., ಸಿಕ್ಕಿಂ 1.61ಲಕ್ಷ ರೂ., ಪಾಂಡಿಚೇರಿ 1.38ಲಕ್ಷ ರೂ.
ತಮಿಳುನಾಡು 1.33 ಲಕ್ಷ ರೂ., ಗೋವಾ 1.27ಲಕ್ಷ ರೂ., ಆಂಧ್ರಪ್ರದೇಶ 1.09ಲಕ್ಷ ರೂ., ಒಡಿಶಾ 93,300ರೂ., ಮಿಜೋರಾಂ 91,300 ರೂ., ಮೇಘಾಲಯ 19,500 ರೂ. ಮೌಲ್ಯದ ರಾಷ್ಟ್ರ ಧ್ವಜಗಳನ್ನು ಖರೀದಿ ಮಾಡಿವೆ. ಇದೇ ಮೊದಲ ಬಾರಿ 1.5 ಲಕ್ಷ ರೂ. ಮೌಲ್ಯದ ರಾಷ್ಟ್ರಧ್ವಜಗಳನ್ನು ರಾಂಚಿಗೆ ವಿಮಾನದ ಮೂಲಕ ಕಳುಹಿಸಿಕೊಡಲಾಗಿದೆ.
ರಾಜ್ಯದಲ್ಲಿ ಹೆಚ್ಚಿದ ಬೇಡಿಕೆ: ಬೆಂಗೇರಿಯ ರಾಷ್ಟ್ರಧ್ವಜಗಳಿಗೆ ರಾಜ್ಯದಲ್ಲೂ ಸಹ ಉತ್ತಮ ಬೇಡಿಕೆಯಿದೆ. ರಾಜ್ಯದಲ್ಲಿ ಬೆಳಗಾವಿ ಮತ್ತು ಬೆಂಗಳೂರು ಜಿಲ್ಲೆಗಳು ಅತೀ ಹೆಚ್ಚು ರಾಷ್ಟ್ರಧ್ವಜಗಳನ್ನು ಖರೀದಿಸಿವೆ. ಹಾಗೆಯೇ ಮೈಸೂರು, ದಾವಣಗೆರೆ, ಚಿತ್ರದುರ್ಗ, ಧಾರವಾಡ, ವಿಜಯಪುರ, ಬೀದರ, ಕಲಬುರಗಿ, ದಕ್ಷಿಣ ಕನ್ನಡ, ಚಾಮರಾಜನಗರ ಸೇರಿದಂತೆ ಇತರ ಜಿಲ್ಲೆಗಳಿಂದಲೂ ಹೆಚ್ಚಿನ ಖರೀದಿಯಾಗಿದೆ.
ಬೆಂಗೇರಿಯಲ್ಲಿ ಸುಮಾರು 9 ವಿವಿಧ ಅಳತೆಯ ರಾಷ್ಟ್ರಧ್ವಜಗಳು ತಯಾರಾಗುತ್ತವೆ. 2/3 ಅಡಿ, 3/4.5 ಅಡಿ, 4/6 ಅಡಿ ರಾಷ್ಟ್ರಧ್ವಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. 21/14 ಅಡಿಯ ರಾಷ್ಟ್ರಧ್ವಜ ಒಂದಕ್ಕೆ 17,800ರೂ. ಬೆಲೆಯಿದ್ದು, ಸಂಸ್ಥೆಯಲ್ಲಿ ತಯಾರಾಗುವ ಅತೀ ಹೆಚ್ಚಿನ ಬೆಲೆಯ ರಾಷ್ಟ್ರಧ್ವಜವಾಗಿದೆ. ಇಲ್ಲಿ ತಯಾರಾಗುವ ಅತಿ ದೊಡ್ಡದಾದ ರಾಷ್ಟ್ರಧ್ವಜ ಕೊಲ್ಲಾಪುರ, ರಾಯಗಢ ಕೋಟೆ, ನರಗುಂದ ಗುಡ್ಡ ಸೇರಿದಂತೆ ವಿವಿಧೆಡೆ ಹಾರಾಡಲಿದೆ.
ಜಿಎಸ್‌ಟಿ ಇಫೆಕ್ಟ್: ಜಿಎಸ್‌ಟಿ ಜಾರಿಯಿಂದ ರಾಷ್ಟ್ರಧ್ವಜಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಖಾದಿ ಬಟ್ಟೆಗಳ ಮೇಲೆ ಶೇ. 5ರಿಂದ ಶೇ. 18ರಷ್ಟು ತೆರಿಗೆ ವಿಧಿಸಲಾಗಿದೆ.
* ನಾಗಪ್ಪ ಮಾದರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.