ಲಯನ್ಸ್ ಕ್ಲಬ್ ನಿಂದ ಉತ್ತಮ ಕಾರ್ಯ: ಲಾವಂಡೆ
Team Udayavani, Jun 17, 2018, 5:48 PM IST
ಭಟ್ಕಳ: ಮುರುಡೇಶ್ವರ ಲಯನ್ಸ್ ಕ್ಲಬ್ ಕಳೆದ 10 ವರ್ಷಗಳಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದು ಕೇವಲ ಹತ್ತೇ ವರ್ಷದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಶಾಯೀಸ್ ಲಾವಂಡೆ ಹೇಳಿದರು.
ಅವರು ಮುರ್ಡೇಶ್ವರದ ಆರ್ ಎನ್‌ಎಸ್ ಗಾಲ್ಫ್ ಕ್ಲಬ್ ಸಭಾಂಗಣದಲ್ಲಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಮುರುಡೇಶ್ವರ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ನಾಗರಾಜ ಭಟ್, ಕಾರ್ಯದರ್ಶಿಗಳಾಗಿ ನಾಗೇಶ ಮಡಿವಾಳ ಹಾಗೂ ಕೋಶಾಧ್ಯಕ್ಷರಾಗಿ ಜಗದೀಶ ಜೈನ್, ಪ್ರಥಮ ಉಪಾಧ್ಯಕ್ಷರಾಗಿ ಗೌರೀಶ ನಾಯಕ, ದ್ವಿತೀಯ ಉಪಾಧ್ಯಕ್ಷರಾಗಿ ಬಾಬು ಮೊಗೇರ, ಸಹ ಕಾರ್ಯದರ್ಶಿಗಳಾಗಿ ಎಂ.ವಿ. ಹೆಗಡೆ, ಸದಸ್ಯತ್ವ ಅಭಿಯಾನ ಸಮಿತಿ ಅಧ್ಯಕ್ಷರಾಗಿ ಸುಬ್ರಾಯ ನಾಯ್ಕ, ಕ್ಲಬ್ ಸಮನ್ವಯಾಧಿಕಾರಿಯಾಗಿ ಡಾ| ವಾದಿರಾಜ ಭಟ್, ಸೇವಾ ಚಟುವಟಿಕೆಗಳ ಅಧ್ಯಕ್ಷರಾಗಿ ಆನಂದ ಶೆಟ್ಟಿ, ವ್ಯಾವಹಾರಿಕ ಸಂವಹನದ ಅಧ್ಯಕ್ಷರಾಗಿ ಮಂಜುನಾಥ ದೇವಡಿಗ, ಲಯನ್ ಟೇಮರ್ ಆಗಿ ಗಜಾನನ ಶೆಟ್ಟಿ, ಟೇಲ್ ಟ್ವಿಸ್ಟರ್ ಮುಖ್ಯಸ್ಥರಾಗಿ ಕೆ.ಬಿ. ಹೆಗಡೆ, ನಿರ್ದೇಶಕರಾಗಿ ಕಿರಣ ಮಾನಕಾಮೆ, ಡಾ| ರಾಜಗೋಪಾಲ ಭಟ್, ಡಾ| ಸುನೀಲ್ ಜತನ್, ವಿಶ್ವನಾಥ ಕಾಮತ್, ಶಿವಾನಂದ ದೈಮನೆ, ಫಿಲಿಪ್ ಅಲ್ಮೇಡಾ, ಡಾ| ಹರಿಪ್ರಸಾದ ಕಿಣಿ, ಸುರೇಶ ನಾಯ್ಕ, ರಾಮದಾಸ ಶೇಟ್, ಭಾಸ್ಕರ ಶೆಟ್ಟಿ, ಡಾ| ಮಂಜುನಾಥ ಶೆಟ್ಟಿ, ಎಸ್.ಎಸ್. ಕಾಮತ್, ನಾಗರಾಜ ಕಾಮತ್, ದಯಾನಂದ ಮೆಣಸಿನಮನೆ, ಮೋಹನ ನಾಯ್ಕ, ತಿಲಕ್ ರಾವ್, ಸಿ.ಆರ್.ನಾಯ್ಕ, ಡಾ| ವಿಶ್ವನಾಥ ನಾಯಕರನ್ನು ನಿಯುಕ್ತಿಗೊಳಿಸಲಾಯಿತು.
ಮುಖ್ಯ ಅತಿಥಿಗಳಾದ ಶ್ರೀಕುಮಾರ್ ಟ್ರಾವೆಲ್ಸ್‌ನ ಮಾಲಿಕ ವೆಂಕಟರಮಣ ಹೆಗಡೆ, ಲಯನ್ ಬಿಂದಗಿ ಮಾತನಾಡಿದರು. ಲಯನ್ಸ್ ನೂತನ ಅಧ್ಯಕ್ಷ ನಾಗರಾಜ ಭಟ್ಟ ಪ್ರಸ್ತುತ ವರ್ಷದಲ್ಲಿ ಲಯನ್ಸ್ ಸದಸ್ಯರ ಸಂಖ್ಯೆಯನ್ನು ಐವತ್ತಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದು, ಹಲವಾರು ಸಾಮಾಜಿಕ ಕಾರ್ಯಗಳೊಂದಿಗೆ ಸಮಾಜಮುಖೀಯಾಗಿ ಕೆಲಸ ಮಾಡಲು ತಯಾರಿರುವುದಾಗಿ ತಿಳಿಸಿದರು.
ನೂತನ ಕಾರ್ಯದರ್ಶಿ ನಾಗೇಶ ಮಡಿವಾಳ ಈ ವರ್ಷದ ಯೋಜನೆಗಳಲ್ಲಿ ಶಿಕ್ಷಣ, ಹಸಿವು ನಿವಾರಣೆ, ಶಾಶ್ವತ ಕಟ್ಟಡ
ನಿರ್ಮಾಣ, ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಕ್ರಮ, ವೈದ್ಯಕೀಯ ಶಿಬಿರಗಳು, ಸಮಾಜಕ್ಕೆ ಶಾಶ್ವತ ಕೊಡುಗೆಗಳು
ಸೇರಿದಂತೆ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ತಾಲೂಕಿಗೆ ಪಿಯುಸಿಯಲ್ಲಿ ಪ್ರಥಮ ಬಂದ ಸೌಂದರ್ಯಾ ನಾಯಕ, ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಬಂದ ಕೆ.ಕೆ. ಅನನ್ಯ ಹಾಗೂ ಲಯನ್ಸ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಮಂಜುನಾಥ ನಾಯ್ಕ, ಕಾರ್ಯದರ್ಶಿ ಫಿಲಿಪ್ ಅಲ್ಮೇಡಾ, ಖಜಾಂಚಿ ಶಿವಾನಂದ ದೆ„ಮನೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.