ಟ್ರೇನಿಂಗ್‌ಗೆ ಹಾಜರಾದ ಭೀಮಕ್ಕ
Team Udayavani, Dec 20, 2019, 11:03 AM IST
ಧಾರವಾಡ: ಭಾರತೀಯ ಸೇನೆಗೆ ಆಯ್ಕೆಗೊಂಡಿದ್ದ ತಾಲೂಕಿನ ಮದಿಕೊಪ್ಪ ಭೀಮಕ್ಕ ಚವ್ಹಾಣ ಒಂದು ವರ್ಷದ ಟ್ರೇನಿಂಗ್ ಗಾಗಿ ಬೆಂಗಳೂರಿನಲ್ಲಿರುವ ಸೇನಾ ಪೊಲೀಸ್ ತರಬೇತಿ ಕೇಂದ್ರಕ್ಕೆ ಹಾಜರಾಗಿದ್ದಾರೆ.
ಗ್ರಾಮಸ್ಥರು ಹಾಗೂ ಮನೆಯ ಕುಟುಂಬಸ್ಥರು ಭೀಮಕ್ಕಳಿಗೆ ಸನ್ಮಾನಿಸಿ, ಹಾರೈಸಿ ಕಳುಹಿಸಿದ್ದಾರೆ. ಡಿ.17ರಂದು ಬಸ್ ಮೂಲಕ ಮಂಗಳೂರು ವಿಭಾಗಕ್ಕೆ ಹಾಜರಾಗದ ಭೀಮಕ್ಕ, ಮುಂದಿನ ಟ್ರೇನಿಂಗ್ ಪಡೆಯಲು ಬೆಂಗಳೂರಿಗೆ ಹಾಜರಾಗಲು ಬೇಕಾದ ಪ್ರಕ್ರಿಯೆ ಮುಗಿಸಿದ್ದಾರೆ. ಇದಾದ ಬಳಿಕ ಮಂಗಳೂರಿನಿಂದ ಬೆಂಗಳೂರಿನ ಸೇನಾ ಪೊಲೀಸ್ ತರಬೇತಿ ಕೇಂದ್ರಕ್ಕೆ ಡಿ.18ಕ್ಕೆ ಹಾಜರಾಗಿದ್ದು, ಒಂದು ವರ್ಷದ ಟ್ರೇನಿಂಗ್ ಪಡೆಯಲಿದ್ದಾರೆ. ಡಿ.19ರಿಂದ ಟ್ರೇನಿಂಗ್ ಸಹ ಆರಂಭಗೊಂಡಿದೆ. ದೇಶದ ವಿವಿಧ ಭಾಗದಿಂದ ಆಯ್ಕೆಯಾದ 100 ಯುವತಿಯರು ಈ ಕೇಂದ್ರಕ್ಕೆ ಹಾಜರಾಗಿದ್ದು, ರಾಜ್ಯದಿಂದ ಹಾಜರಾಗಿರುವ 8 ಯುವತಿಯರ ಪೈಕಿ ಭೀಮಕ್ಕಳೂ ಒಬ್ಬರು. ಒಂದು ವರ್ಷದ ಅವಧಿಯ ಟ್ರೇನಿಂಗ್ ಮುಗಿದ ಬಳಿಕ ಸೇನೆಯಲ್ಲಿ ಸೇವೆ ಸಲ್ಲಿಸುವ ಭಾಗ್ಯ ಈ ಯುವತಿಯರ ಪಾಲಾಗಲಿದೆ.
ಬಡ ಕುಟುಂಬದ ಪ್ರತಿಭೆ: ಸರಕಾರಿ ಕನ್ನಡ ಶಾಲೆಯಲ್ಲಿ ಕಲಿತ ಭೀಮಕ್ಕಳದ್ದು ಬಡ ಕುಟುಂಬ. ತಂದೆ ಮಹದೇವಪ್ಪ, ತಾಯಿ ನೀಲಮ್ಮ ಕೂಲಿ ಮಾಡಿಯೇ ಮಕ್ಕಳು ಸಲಹುತ್ತಿದ್ದಾರೆ. ಶಾಲೆಯ ರಜೆ ದಿನಗಳಲ್ಲಿ ಪೋಷಕರೊಂದಿಗೆ ಕೂಲಿ ಕೆಲಸವನ್ನೂ ಮಾಡಿ ಪೋಷಕರ ಕಷ್ಟಗಳಿಗೆ ಕೈ ಜೋಡಿಸಿದ್ದ ಈ ಭೀಮಕ್ಕ, ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಬಿಕಾಂ ಪದವೀಧರೆ. ಮದಿಕೊಪ್ಪ ಗ್ರಾಮದಲ್ಲಿ ತಾನು ಕಲಿತ ಶಾಲೆಯಲ್ಲಿ ಕಷ್ಟಪಟ್ಟು ಮಾಡಿದ ವ್ಯಾಯಾಮ, ಪೋಷಕರ ಕಷ್ಟಗಳಿಗೆ ಕೈ ಜೋಡಿಸಲು ಮಾಡಿದ ಕೆಲಸಗಳೇ ಈಗ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್ ಹೋರಾಟ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.