ಭದ್ರಕೋಟೆ ಗೆದ್ದು ಬೀಗಿದ ಕಮಲ ಪಡೆ
Team Udayavani, May 24, 2019, 10:40 AM IST
ಧಾರವಾಡ: ರಾಜ್ಯದಲ್ಲಿಯೇ ಮೊದಲು ಜನಸಂಘ ನಂತರ ಬಿಜೆಪಿಯ ಭದ್ರಕೋಟೆಯಾಗಿ ನೆಲೆನಿಂತ ಧಾರವಾಡ ಜಿಲ್ಲೆಯಲ್ಲಿ ಮತ್ತೂಮ್ಮೆ ಕಮಲ ಪಡೆ ಕಮಾಲ್ ಮಾಡಿ ಭರ್ಜರಿ ಜಯಭೇರಿ ಬಾರಿಸಿದೆ.
ಇತ್ತ ಕೈ ಪಡೆ ಆಂತರಿಕ ಜಂಜಾಟದಿಂದ ನೆಲಕ್ಕಪ್ಪಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸುನಾಮಿ ಅಲೆ ಮತ್ತೂಮ್ಮೆ ಧಾರವಾಡದಲ್ಲಿ ಕಮಲ ಕಿಲ ಕಿಲ ನಗುವಂತೆ ಮಾಡಿದೆ. ಸತತ 23 ವರ್ಷಗಳಿಂದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜಯ ಗಳಿಸುತ್ತಲೇ ಬಂದಿರುವ ಬಿಜೆಪಿ ಇದೀಗ ಮತ್ತೆ ಐದು ವರ್ಷಗಳ ಅವಧಿಗೆ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಂಡಂತಾಗಿದೆ.
ಕೈ ಪಡೆಯಲ್ಲಿನ ಟಿಕೆಟ್ ಹಂಚಿಕೆ ವಿಳಂಬ, ಅಲ್ಪಸಂಖ್ಯಾತರ ಒಳ ಮುನಿಸು, ಇತರ ಸಮುದಾಯಗಳು ಮೋದಿಗೆ ಮತ ಚಲಾಯಿಸಿದ್ದು, ಲಿಂಗಾಯತರು ಕಮಲವನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದುಕೊಂಡಿದ್ದು ಸೇರಿದಂತೆ ಅನೇಕ ಅಂಶಗಳು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಜಯದ ಬಾಗಿಲಿಗೆ ತಂದು ನಿಲ್ಲಿಸಿದವು. ಅದರಲ್ಲೂ ವಿಶೇಷವಾಗಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಮತದಾರರು ಅತೀ ಹೆಚ್ಚಿನ ಪ್ರಮಾಣದಲ್ಲಿ ಮೋದಿ ಮತ್ತು ಕಮಲ ಪಾಳೆಯಕ್ಕೆ ಜೈಕಾರ ಹಾಕಿದ್ದು, ಬಿಜೆಪಿಯನ್ನು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವಿಗೆ ಒಯ್ದು ನಿಲ್ಲಿಸಿದವು.
ಕಮಲ ಬಿಡಲಿಲ್ಲ ಲಿಂಗಾಯತರು: ಕ್ಷೇತ್ರದಲ್ಲಿ 6 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಲಿಂಗಾಯತ ಮತದಾರರು ಬಿಜೆಪಿಯನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದುಕೊಂಡಿದ್ದು ಫಲಿತಾಂಶದ ರೂಪದಲ್ಲಿ ಗೋಚರಿಸಿತು. ಕಾಂಗ್ರೆಸ್‌ನ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದರಿಂದ ಈ ಬಾರಿಯಾದರೂ ಲಿಂಗಾಯತರು ವಿನಯ್ ಬೆಂಬಲಿಸುತ್ತಾರೆ ಎನ್ನುವ ಲೆಕ್ಕಾಚಾರವನ್ನು ಕಾಂಗ್ರೆಸ್ ಹಾಕಿತ್ತು. ಆದರೆ ಕೈ ನಿರೀಕ್ಷೆ ಸುಳ್ಳಾಗಿ ಮತ್ತೂಮ್ಮೆ ಲಿಂಗಾಯತರು ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ.
ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಿಂದ ವರ್ಚಸ್ಸು ಹೆಚ್ಚಿಸಿಕೊಂಡಿದ್ದ ವಿನಯ್ ಕುಲಕರ್ಣಿ ಅವರಿಗೆ ಈ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಲಭಿಸುತ್ತವೆ ಎನ್ನುವ ನಿರೀಕ್ಷೆ ಇತ್ತು. ಆದರೆ ದಶಕಗಳ ಕಾಲ ಬಿಜೆಪಿ ಧ್ವಜ ಹಿಡಿದು ಓಡಾಡಿದ ಲಿಂಗಾಯತರು ಇದ್ದಕ್ಕಿದ್ದಂತೆ ಪಕ್ಷ ತೊರೆದು ಕೈ ಹಿಡಿಯುವುದು ಕಷ್ಟವಾಗಿ ಕೊನೆಗೂ ಕೈ ಕೊಟ್ಟರು. ಇದೇ ಬಿಜೆಪಿಯ ದೊಡ್ಡ ಗೆಲುವಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಕೈ ಹಿಡಿಯಲಿಲ್ಲ ಹಳ್ಳಿಗರು: ಕ್ಷೇತ್ರ ವ್ಯಾಪ್ತಿಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ಹು-ಧಾ ಪೂರ್ವ ಕ್ಷೇತ್ರ ಹೊರತು ಪಡಿಸಿದರೆ ಇನ್ನುಳಿದ ಎಲ್ಲ ಏಳೂ ವಿದಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಭಾರಿ ಮುನ್ನಡೆ ಕಾಯ್ದುಕೊಂಡಿದ್ದೇ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣವಾಯಿತು. ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹೊರತು ಪಡಿಸಿದರೆ ಇನ್ನುಳಿದ ಎಲ್ಲ ಗ್ರಾಮೀಣ ಕ್ಷೇತ್ರಗಳಲ್ಲೂ ವಿನಯ್ ಕುಲಕರ್ಣಿ ಮುನ್ನಡೆ ಸಾಧಿಸುತ್ತಾರೆ ಎಂದು ಮತೋತ್ತರ ಸಮೀಕ್ಷೆಯಲ್ಲಿ ವಿಶ್ಲೇಷಿಸಲಾಗಿತ್ತು. ಆದರೆ ಹಳ್ಳಿಗರು ಕೂಡ ಮೋದಿ ಮೋಡಿಗೆ ಬೆರಗಾಗಿದ್ದು, ಅಲ್ಲಿಯೂ ಕಾಂಗ್ರೆಸ್ ಹಿನ್ನಡೆ ಅನುಭವಿಸಿತು. ಅಷ್ಟೇಯಲ್ಲ, ಸ್ವತಃ ಮಾಜಿ ಸಚಿವ ವಿನಯ್ ಅವರು ಸ್ಪರ್ಧಿಸುವ ವಿಧಾನಸಭಾ ಕ್ಷೇತ್ರ ಧಾರವಾಡ ಗ್ರಾಮೀಣ ಮತ್ತು ಅವರ ತವರು ಕ್ಷೇತ್ರ ನವಲಗುಂದದಲ್ಲಿ ಕೈ ಪಡೆ ಹಿನ್ನಡೆ ಅನುಭವಿಸಿದೆ.
1ನೇ ಸುತ್ತು: ಮೊದಲ ಸುತ್ತಿನಲ್ಲಿ ಬಿಜೆಪಿ ಒಟ್ಟು 41,193 ಮತಗಳನ್ನು ಪಡೆದುಕೊಂಡರೆ ಕಾಂಗ್ರೆಸ್ 28,431 ಮತಗಳನ್ನು ಪಡೆದುಕೊಂಡಿತು. ಇಲ್ಲಿ ಬಿಜೆಪಿ ಒಟ್ಟು 13762 ಮತಗಳ ಮುನ್ನಡೆ ಕಾಯ್ದುಕೊಂಡಿತು.
2ನೇ ಸುತ್ತು: ಈ ಸುತ್ತಿನಲ್ಲಿ ಬಿಜೆಪಿ 41,880 ಮತಗಳನ್ನು ಹಾಗೂ ಕಾಂಗ್ರೆಸ್ 28,929 ಮತಗಳನ್ನು ಪಡೆದುಕೊಂಡವು. ಇಲ್ಲಿ ಬಿಜೆಪಿ 12,951 ಮತಗಳ ಮುನ್ನಡೆ ಸಾಧಿಸಿತು.
3ನೇ ಸುತ್ತು: ಇಲ್ಲಿ ಬಿಜೆಪಿ 51,115 ಮತಗಳನ್ನು ಹಾಗೂ ಕಾಂಗ್ರೆಸ್ 31,536 ಮತಗಳನ್ನು ಪಡೆದುಕೊಂಡವು. ಬಿಜೆಪಿ 19,579 ಮತಗಳ ಅಂತರದಿಂದ ಮುನ್ನಡೆ ಸಾಧಿಸಿತು.
4ನೇ ಸುತ್ತು: ಈ ಸುತ್ತಿನಲ್ಲಿ ಬಿಜೆಪಿ 34,111 ಹಾಗೂ ಕಾಂಗ್ರೆಸ್ 26,192 ಮತಗಳನ್ನು ಪಡೆದವು. ಇಲ್ಲಿ ಬಿಜೆಪಿ 7,917 ಮತಗಳ ಮುನ್ನಡೆ ಕಾಯ್ದುಕೊಂಡಿತು.
5ನೇ ಸುತ್ತು: ಇಲ್ಲಿ ಬಿಜೆಪಿ 42,365 ಹಾಗೂ ಕಾಂಗ್ರೆಸ್ 24,497 ಮತಗಳನ್ನು ಪಡೆದುಕೊಂಡಿತು. ಈ ಸುತ್ತಿನಲ್ಲಿ ಬಿಜೆಪಿ 17,868 ಮತಗಳ ಮುನ್ನಡೆ ಸಾಧಿಸಿತು.
6ನೇ ಸುತ್ತು: ಈ ಸುತ್ತಿನಲ್ಲಿ ಬಿಜೆಪಿ 45,583 ಹಾಗೂ ಕಾಂಗ್ರೆಸ್ 25,377 ಮತಗಳನ್ನು ಪಡೆದುಕೊಂಡವು. ಇಲ್ಲಿ ಬಿಜೆಪಿ 20,206 ಮತಗಳ ಮುನ್ನಡೆ ಸಾಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.