ಅಣ್ಣಿಗೇರಿ ಎಪಿಎಂಸಿ ಬಿಜೆಪಿ ತೆಕ್ಕೆಗೆ
Team Udayavani, Mar 8, 2017, 1:28 PM IST
ಅಣ್ಣಿಗೇರಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ತಡಹಾಳ ಕ್ಷೇತ್ರದ ವಜ್ರಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಶಿರಕೋಳ ಕ್ಷೇತ್ರದ ಬಸವರಾಜ ನಾಯ್ಕರ ಮಂಗಳವಾರ ಅವಿರೋಧ ಆಯ್ಕೆಯಾದರು.
ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ 17 ಸದಸ್ಯರಲ್ಲಿ 16 ಸದಸ್ಯರು ಮಾತ್ರ ಹಾಜರಿದ್ದರು. ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಸಹಕಾರಿ ಸಂಘಗಳ ಕ್ಷೇತ್ರದಿಂದ ಆಯ್ಕೆಯಾದ ಹೇಮರಡ್ಡಿ ವೆಂಕರಡ್ಡಿ ಮಾಡಳ್ಳಿ ಗೈರು ಹಾಜರಿದರು.
ಒಟ್ಟು 17 ಸದಸ್ಯ ಬಲ ಹೊಂದಿರುವ ಅಣ್ಣಿಗೇರಿ ಎಪಿಎಂಸಿ ಬಿಜೆಪಿ-8, ಕಾಂಗ್ರೆಸ್-5, ಜೆಡಿಎಸ್-3 ಹಾಗೂ ಪಕ್ಷೇತರ-1 ಸ್ಥಾನ ಪಡೆದಿವೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 9 ಸದಸ್ಯರ ಬಹುಮತ ಬೇಕಾಗಿದ್ದರಿಂದ ಓರ್ವ ಪಕ್ಷೇತರ ಅಭ್ಯರ್ಥಿ ಮಹೇಶ್ವರ ಅಂಗಡಿ ಬೆಂಬಲ ಪಡೆಯುವ ಮೂಲಕ ಬಿಜೆಪಿ ಎಪಿಎಂಸಿ ಆಡಳಿತದ ಗದ್ದುಗೆ ಪಡೆಯಿತು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ನವೀನ ಹುಲ್ಲೂರ, ಸಹಾಯಕ ಚುನಾವಣಾಧಿಕಾರಿ ಎನ್.ಸಿ. ಕುರವತ್ತಿಮಠ ಘೋಷಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.