ಕಾಂಗ್ರೆಸ್‌ನಿಂದ ಮಾದಿಗ ಸಮಾಜಕ್ಕೆ ಅನ್ಯಾಯ: ಕಾರಜೋಳ
Team Udayavani, Jun 4, 2018, 5:31 PM IST
ಇಳಕಲ್ಲ: ಮಾದಿಗ ಸಮಾಜ ಶರಣ ಸಂಸ್ಕೃತಿಯಿಂದ ಬಂದಂತಹ ಸಮಾಜ. ಅಣ್ಣ ಬಸವಣ್ಣನವರ ಅತ್ಯಂತ ಆತ್ಮೀಯತೆಯಿಂದ ಅಪ್ಪ ಎಂದು ಕರೆದಿದ್ದು ನಮ್ಮ ಸಮಾಜದ ಮಾದಾರ ಚನ್ನಯ್ಯನವರನ್ನು ಮಾತ್ರ ಎನ್ನುವುದು ನಾವೆಲ್ಲರೂ ಹೆಮ್ಮೆಪಡುವ ಸಂಗತಿಯಾಗಿದೆ ಎಂದು ವಿರೋಧ ಪಕ್ಷದ ಉಪನಾಯಕ, ಮುಧೋಳ ಶಾಸಕ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಮಾದಿಗ ಸಮಾಜದ ವತಿಯಿಂದ ಜಿಲ್ಲೆಯಲ್ಲಿ ಆಯ್ಕೆಯಾದ ಹಾಗೂ ಇಳಕಲ್ಲ ನಗರದವರೇ ಆದ ಲಿಂಗಸುಗೂರು ಶಾಸಕರಿಗೆ ಹಮ್ಮಿಕೊಳ್ಳಲಾದ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶವನ್ನು ಸುಮಾರು 60 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷದಿಂದ ಸಮುದಾಯಕ್ಕೆ ಆದಷ್ಟು ಅನ್ಯಾಯ ಬೇರಾವ ಪಕ್ಷಗಳಿಂದಲೂ ಆಗಿಲ್ಲ, ಸಮಾಜದ ಡಾ. ಬಾಬು ಜಗಜೀವನರಾಂ ಅವರನ್ನು ಈ ದೇಶದ ಪ್ರಧಾನ ಮಂತ್ರಿಗಳನ್ನಾಗಿ ಮಾಡಬೇಕು ಎಂಬ ಮಹತ್ತರ ಕನಸು ಅಟಲಜೀ ವಾಜಪೇಯ ಅವರಿಗಿತ್ತು. ಆದರೆ ಇಂದಿರಾ ಗಾಂಧಿ, ರಾಜೀವ ಗಾಂಧಿಯವರು ಇದಕ್ಕೆ ಅವಕಾಶ ಕೊಡದೆ ಅನ್ಯಾಯವೆಸಗಿದರು. ಕೇವಲ 6ಜಾತಿಗಳಿಗೆ ಮಾತ್ರ ಮೀಸಲಾತಿಯಿದ್ದ ವ್ಯವಸ್ಥೆಯನ್ನು ತಮ್ಮ ವೋಟ್ ಬ್ಯಾಂಕ್ ಆಸೆಗೆ ಇಂದು 100 ಜಾತಿಗೆ ವಿಸ್ತರಿಸಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಯಲ್ಲಿ ಬಿಜೆಪಿ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ನಾವು ನಿರೀಕ್ಷಿಸದಷ್ಟು ಫಲಿತಾಂಶ ಬರಲಿಲ್ಲ. ಇದರಿಂದಾಗಿ ನಾವು ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಲಿಲ್ಲವಾದರೂ ನಿರಾಶೆಪಡುವ ಅವಶ್ಯಕತೆ ಇಲ್ಲ. ಇನ್ನು ಕೆಲವೇ ದಿನಗಳಲ್ಲಿ ನಮ್ಮ ಪಕ್ಷ ಅಧಿ ಕಾರಕ್ಕೆ ಬಂದೆ ಬರುತ್ತೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುತ್ತಾರೆ. ಹುನಗುಂದ ಮತಕ್ಷೇತ್ರದಿಂದ ದೊಡ್ಡನಗೌಡ ಪಾಟೀಲರಂಥ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಿರಿ. ಮುಂಬರುವ ಜಿಪಂ ಚುನಾವಣೆಯಲ್ಲಿ ನಮ್ಮ ಸಮುದಾಯದ ವ್ಯಕ್ತಿ ಜಿಪಂ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಜವಾಬ್ದಾರಿ ದೊಡ್ಡನಗೌಡ ಪಾಟೀಲರದು ಎಂದು ಹೇಳಿದರು.
ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಹಿಂದಿನ ಚುನಾವಣೆಯಲ್ಲಿ ಹಿರಿಯರ ಗೊಂದಲದ ನಡವಳಿಕೆಯಿಂದಾಗಿ ನಾವು ಸೋತಿದ್ದೇವೆ ಹೊರತು ಮತದಾರರು ನಮ್ಮನ್ನು ಸೋಲಿಸಲಿಲ್ಲ. ಐವರು ಶಾಸಕರು ಜಿಲ್ಲೆಯ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತೇವೆ. ಕಾರಜೋಳ ಅವರ ಮಾರ್ಗದರ್ಶನದಲ್ಲಿ ನೀವೆಲ್ಲರೂ ನಡೆದುಕೊಂಡರೆ ಸಾಕು ನಿಮ್ಮ ಸಮುದಾಯದ ಅಭಿವೃದ್ಧಿ ಖಂಡಿತವಾಗಿಯೂ ಆಗುತ್ತದೆ ಎಂದರು.
ದೊಡ್ಡನಗೌಡ ಪಾಟೀಲ ಮಾತನಾಡಿ, ಹಿಂದಿನ ಒಂಬತ್ತು ವರ್ಷದ ಅವಧಿ ಯ ನನ್ನ ಅಭಿವೃದ್ಧಿ ಕಾರ್ಯಗಳನ್ನು ಹಿರಿಯರಾದ ಗೋವಿಂದ ಕಾರಜೋಳ ಅವರ ಮಾರ್ಗದರ್ಶನದಲ್ಲೇ ಮಾಡಿದ್ದೇನೆ. ಮುಂಬರುವ ದಿನಗಳಲ್ಲೂ ಇಂತಹ ಹಿರಿಯರ ಮಾರ್ಗದರ್ಶನದಲ್ಲೇ ಕಾರ್ಯ ನಿರ್ವಹಿಸುತ್ತೇನೆ. ಈಗ ನಡೆಯುತ್ತಿರುವ ಸತ್ಕಾರ ನನಗಲ್ಲ, ಅದು ನಿಮಗೆ ಸಲ್ಲಬೇಕು ಎಂದು ಹೇಳಿದರು.
ಇದೇ ವೇಳೆ ಶಾಸಕರಾದ ವೀರಣ್ಣ ಚರಂತಿಮಠ, ಗೋವಿಂದ ಕಾರಜೋಳ, ದೊಡ್ಡನಗೌಡ ಪಾಟೀಲ ಹಾಗೂ ಡಿ.ಎಸ್. ಹೂಲಗೇರಿ ಅವರನ್ನು ಮಾದಿಗ ಸಮಾಜದ ವತಿಯಿಂದ ಗೌರವಿಸಿ ಸತ್ಕರಿಸಲಾಯಿತು. ಬಿಜೆಪಿ ರಾಜ್ಯಘಟಕದ ಕಾರ್ಯದರ್ಶಿ ಆರ್.ಟಿ. ಪಾಟೀಲ, ನಗರಸಭೆ ಸದಸ್ಯರಾದ ಶೋಭಾ ಆಮದಿಹಾಳ, ಮಂಜುನಾಥ ಹೊಸಮನಿ, ಮುಖಂಡರಾದ ಮೋಹನ ಹೊಸಮನಿ, ಲಕ್ಷ್ಮಣ ಚಂದರಗಿ, ಶ್ರೀಕಾಂತ ಹೊಸಮನಿ ಹಾಜರಿದ್ದರು. ಸಹನಾ ಸಾಕಾ ಪ್ರಾರ್ಥಿಸಿದರು. ಮಂಜುನಾಥ ಮಾದಾರ ಸ್ವಾಗತಿಸಿದರು. ಸಂಗಣ್ಣ ಗದ್ದಿ ನಿರೂಪಿಸಿದರು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.