ಪುರಸಭೆ ಎದುರು ಬಿಜೆಪಿ ಧರಣಿ
ಮುತುವರ್ಜಿಯನ್ನು ಈಗಲೂ ತೋರಿಸಿ ಹೊಂದಾಣಿಕೆಯಂತೆ ನಮಗೆ ಅಧಿಕಾರವನ್ನು ಬಿಟ್ಟು ಕೊಡಬೇಕು
Team Udayavani, Mar 26, 2022, 6:17 PM IST
ನವಲಗುಂದ: ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿ 15 ತಿಂಗಳ ಅವ ಧಿ ನಂತರ ಒಪ್ಪಂದದಂತೆ ಬಿಟ್ಟುಕೊಡದೆ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ಸಿಗರು ವಚನ ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿ ಪುರಸಭೆ ಎದುರಿಗೆ ಬಿಜೆಪಿಯವರು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಬಿಜೆಪಿಯ ಆಶ್ರಯ ಸಮಿತಿ ಸದಸ್ಯ ರಾಯನಗೌಡ ಪಾಟೀಲ ಮಾತನಾಡಿ, ಅವ ಧಿ ಮುಗಿದು ಎರಡು ತಿಂಗಳು ಗತಿಸಿದರೂ ಬಿಜೆಪಿ-ಕಾಂಗ್ರೆಸ್ ಒಪ್ಪಂದದಂತೆ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾತಿನಂತೆ ನಡೆದುಕೊಂಡಿಲ್ಲ. ಯಾರು ಸಹ ಸರಿಯಾಗಿ ಪುರಸಭೆ ಒಪ್ಪಂದ ಕುರಿತು ಮಾತನಾಡದೆ ಇರುವುದರಿಂದ ಬಿಜೆಪಿ ಸದಸ್ಯರು ನ್ಯಾಯಕ್ಕಾಗಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಮುಖಂಡರು ಒಪ್ಪಂದ ಮಾಡಿಕೊಳ್ಳುವಾಗ ತೋರಿಸಿದ್ದ ಮುತುವರ್ಜಿಯನ್ನು ಈಗಲೂ ತೋರಿಸಿ ಹೊಂದಾಣಿಕೆಯಂತೆ ನಮಗೆ ಅಧಿಕಾರವನ್ನು ಬಿಟ್ಟು ಕೊಡಬೇಕು ಎಂದರು.
ನಗರದ ಘಟಕದ ಅಧ್ಯಕ್ಷ ಅಣ್ಣಪ್ಪ ಬಾಗಿ ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ 7 ಜನ ಕಾಂಗ್ರೆಸ್ ಸದಸ್ಯರು ಹಾಗೂ 6 ಜನ ಬಿಜೆಪಿ ಸದಸ್ಯರು ಸೇರಿ ಪುರಸಭೆ ಅಧಿಕಾರ ಹಿಡಿಯಲಾಗಿತ್ತು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ನವರಿಗೆ ಬಿಟ್ಟು ಕೊಟ್ಟು ಸ್ಥಾಯಿ ಸಮಿತಿಯ ಸ್ಥಾನ ನಮಗೆಂದು ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಅವಧಿ ಮುಗಿದರೂ ಕಾಂಗ್ರೆಸ್ ಪಕ್ಷದ ಸದಸ್ಯರು ಹಾಗೂ ಮುಖಂಡರು ಮಾತಿನಂತೆ ನಡೆದುಕೊಳ್ಳದೆ ಇರುವುದರಿಂದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟು ಮಾತಿನಂತೆ ನಡೆದುಕೊಳ್ಳುವವರಿಗೂ
ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದರು.
ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ಮೂಲಕ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು ಒಪ್ಪಂದದಂತೆ ನಡೆದುಕೊಳ್ಳದೆ ಅನ್ಯಾಯ ಮಾಡಿದ್ದಾರೆಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪುರಸಭೆಯ ಎದುರಿಗೆ ಧರಣಿ ಸತ್ಯಾಗ್ರಹಕ್ಕೆ ಕುಳಿತುಕೊಂಡರು. ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಕಟ್ಟಿಮನಿ, ಪುರಸಭೆ ಸದಸ್ಯರಾದ ಶರಣಪ್ಪ ಹಕ್ಕರಕಿ, ಮಹಾಂತೇಶ ಕಲಾಲ, ಪ್ರಭು ಇಬ್ರಾಹಿಂಪುರ, ಬಸವರಾಜ ಕಾತರಕಿ, ಎಂ.ಪಿ. ತೋಟಿ, ಅಡಿವೆಪ್ಪ ಶಿರಸಂಗಿ, ವಿಜಯಾ ಕಲಾಲ, ಸುಮಂಗಲಾ ಬೆಂಡಿಗೇರಿ, ಜ್ಯೋತಿ ಗೊಲ್ಲರ, ಗೀತಾ ಜಿನ್ನರ, ನಾಗೇಶ ಬೆಂಡಿಗೇರಿ, ಸಿದ್ದಪ್ಪ ಜಿನ್ನರ, ಪ್ರಕಾಶ ಪಾಚಂಗಿ, ದಾಡಿಬಾವಿ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.