ಸೆಪ್ಟೆಂಬರ್ 5ರಂದು ರಾಜ್ಯಾದ್ಯಂತ ಕರಾಳ ದಿನಾಚರಣೆ
Team Udayavani, Jun 23, 2017, 3:15 PM IST
ಹುಬ್ಬಳ್ಳಿ: ಅನುದಾನಿತ ಶಾಲಾ-ಕಾಲೇಜು ನೌಕರರಿಗೆ ಸರಕಾರ ಪಿಂಚಣಿ ಯೋಜನೆ ಜಾರಿಗೊಳಿಸದಿದ್ದರೆ ಸೆಪ್ಟಂಬರ್ 5ರ ಶಿಕ್ಷಕರ ದಿನಾಚರಣೆಯಂದು ರಾಜ್ಯಾದ್ಯಂತ ಕರಾಳ ದಿನ ಹಾಗೂ ಆಗಸ್ಟ್ 16ರಂದು ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ತೀರ್ಮಾನಿಸಿದೆ.
ನಗರದ ಸಿದ್ಧಾರೂಢ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಘದ ರಾಜ್ಯ ಕಾರ್ಯಕಾರಣಿಯಲ್ಲಿ ಸದಸ್ಯರು ಈ ತೀರ್ಮಾನ ಕೈಗೊಂಡರು. 1-4- 2006ರ ಪೂರ್ವದಲ್ಲಿ ನೇಮಕಗೊಂಡು ನಂತರ ಅನುದಾನಕ್ಕೊಳಪಟ್ಟ ಹಾಗೂ 1-4-2006ರ ನಂತರ ಅಧಿಕೃತವಾಗಿ ನೇಮಕಗೊಂಡು ವೇತನ ಪಡೆಯುತ್ತಿರುವ ಯಾವೊಬ್ಬ ಅನುದಾನಿತ ಶಾಲಾ-ಕಾಲೇಜಿನ ನೌಕರನಿಗೆ ಸರಕಾರ ಪಿಂಚಣಿ ಯೋಜನೆ ಜಾರಿಗೊಳಿಸಿರುವುದಿಲ್ಲ.
ಈ ಯೋಜನೆ ಜಾರಿಗಾಗಿ ಸಂಘಟನೆಯು ಅನೇಕ ಬಾರಿ ಹೋರಾಟ ಮಾಡಿತು. ಆದರೂ ಇದುವರೆಗೆ ಸರಕಾರ ಸಂಘದ ಬೇಡಿಕೆಗಳನ್ನು ಈಡೇರಿಸಿಲ್ಲ. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ.
ಈ ಎರಡು ಹಂತಗಳ ಪ್ರತಿಭಟನೆಗೆ ಸರಕಾರ ಸ್ಪಂದಿಸದಿದ್ದರೆ ಅಕ್ಟೋಬರ್ ನಲ್ಲಿ ರಾಜ್ಯಮಟ್ಟದಲ್ಲಿ ಪಿಂಚಣಿ ವಂಚಿತ ನೌಕರರ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ಅನಿದಿಷ್ಟಾವಧಿಯ ಹೋರಾಟ ಮಾಡಲು ಹಾಗೂ ಸಮಾವೇಶದ ದಿನಾಂಕವನ್ನು ನಂತರ ನಿಗದಿಪಡಿಸಲು ತೀರ್ಮಾನಿಸಿದರು.
ಸಭೆಯಲ್ಲಿ ರಾಜ್ಯಾಧ್ಯಕ್ಷ ಜಿ. ಹನಮಂತಪ್ಪ ಮಾತನಾಡಿ, ಸರಕಾರ ಅನುದಾನಿತ ನೌಕರರ ಸೇವೆಗೆ ಸೇರಿದ ದಿನಾಂಕ ಪರಿಗಣಿಸಿ ಅಖಂಡ ಸೇವೆ ಆಧಾರದ ಮೇಲೆ ವೇತನ ನಿಗದಿಗೊಳಿಸಿ ಪಿಂಚಣಿ ನೀಡಬೇಕು. 1-4-2006ರ ನಂತರ ನೇಮಕಗೊಂಡ ಪ್ರತಿಯೊಬ್ಬ ನೌಕರನಿಗೂಹಳೆಯ ನಿಶ್ಚಿತ ಪಿಂಚಣಿಯನ್ನೆ ನೀಡಬೇಕು.
ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಭವಿಷ್ಯದಲ್ಲಿ ನೇಮಕವಾಗುವ ಅನುದಾನಿತ ನೌಕರನಿಗೆ ಸರಕಾರಿ ನೌಕರರಿಗೆ ಇರುವಂತೆ ನೂತನ ಪಿಂಚಣಿ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಅನುದಾನಿತ ನೌಕರರು ಒಗ್ಗಟ್ಟಾಗಿ ಹೋರಾಟ ಮಾಡಿದಿದ್ದರೆ ಸರಕಾರ ನಮ್ಮ ಸಮಸ್ಯೆ ಪರಿಹರಿಸಲಾರದು ಎಂದರು.
ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಂಘಟನೆ ಮುಖಂಡರಾದ ಕೆ.ವೈ. ಹಡಗಲಿ, ಆರ್.ಎ. ಸನದಿ, ಎಚ್.ಎಂ. ಶಶಿಕುಮಾರ, ಆರ್. ಎಸ್. ಗಂಗನಹಳ್ಳಿ, ಅಜಮೀರ ನಂದಾಪುರ, ಗಣೇಶ ಶೆಟ್ಟಿಗಾರ, ಆಂಜನೇಯ, ಗಂಗೂರ, ಡಾ| ಸರ್ವಮಂಗಳಾ ಕುದರಿ, ಮಲ್ಲಿಕಾರ್ಜುನ ಬಿರಾದಾರ, ಬಿ.ಜಿ. ಕೊರಗ, ದಳವಾಯಿ, ಚಂದಪ್ಪ ಯಾದವ, ಅಂತ್ಯಪ್ಪ ಬಿರಾದಾರ, ಡಿ.ಕೆ. ಬಳಗಾನೂರ, ವಿನಾಯಕ ಶೇಟ್ ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.