ಎಚ್‌ಎಂಟಿ ಮಣಿಸಿದ ಬಿಎಂಟಿಸಿ
Team Udayavani, Feb 6, 2017, 12:33 PM IST
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಕಬಡ್ಡಿ ಪಂದ್ಯಾವಳಿಯ ದ್ವಿತೀಯ ದಿನವಾದ ರವಿವಾರ ಬಿಎಂಟಿಸಿ ಪುರುಷರ ತಂಡ 30 ಅಂಕಗಳ ಅಂತರದಿಂದ ಎಚ್‌ಎಂಟಿ ತಂಡವನ್ನು ಮಣಿಸಿತು. ಬಿಎಂಟಿಸಿ 40-10 ಅಂತರದಿಂದ ಎಚ್ ಎಂಟಿ ಬೆಂಗಳೂರು ತಂಡವನ್ನು ಸೋಲಿಸಿತು. ಪೂರ್ವಾರ್ಧದಲ್ಲಿ ಎಚ್‌ಎಂಟಿ ತಂಡ 4 ಅಂಕ ಗಳಿಸಿದ್ದರೆ ಎದುರಾಳಿ ತಂಡ 28 ಅಂಕ ಗಳಿಸಿತು.
ದ್ವಿತೀಯಾರ್ಧದಲ್ಲಿ ಎಚ್‌ಎಂಟಿ 6 ಅಂಕ ಪಡೆದರೆ ಬಿಎಂಟಿಸಿ 12 ಅಂಕ ಗಳಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿತು. ಲೀಗ್ ಹಂತದಲ್ಲಿ 3 ಪಂದ್ಯಗಳಲ್ಲಿ 2 ಗೆಲವು ಸಾಧಿಸುವ ಮೂಲಕ ಬಿಎಂಟಿಸಿ ಉಪಾಂತ್ಯಕ್ಕೆ ಸ್ಥಾನ ಭದ್ರಪಡಿಸಿಕೊಂಡಿತು. ಇನ್ನೊಂದು ಪಂದ್ಯದಲ್ಲಿ ಬಿವೈಎಸ್ ತಂಡ 23-20ರಿಂದ ಕರ್ನಾಟಕ ರಾಜ್ಯ ಪೊಲೀಸ್ ತಂಡವನ್ನು ಪರಾಭವಗೊಳಿಸಿತು.
ಮತ್ತೂಂದು ಪಂದ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತಂಡ 34-27ರಿಂದ ಧಾರವಾಡ ತಂಡವನ್ನು ಮಣಿಸಿತು. ಮಹಿಳೆಯರ ತಂಡದಲ್ಲಿ ಅಮೃತ ತಂಡ 36-17ರಿಂದ ಧಾರವಾಡ ತಂಡವನ್ನು ಸೋಲಿಸಿತು. ಪೂರ್ವಾರ್ಧದಲ್ಲಿ 8 ಹಾಗೂ ಉತ್ತರಾರ್ಧದಲ್ಲಿ 11 ಅಂಕಗಳ ಮುನ್ನಡೆ ಪಡೆದುಕೊಂಡ ಅಮೃತ ತಂಡ 19 ಅಂಕಗಳಿಂದ ಗೆಲವು ಸಾಧಿಸಿತು.
ಬೆಳಗಾವಿ ತಂಡ 29-21ರಿಂದ ಚಿಕ್ಕಮಗಳೂರು ತಂಡವನ್ನು ಸೋಲಿಸಿತು. ಇನ್ನೊಂದು ಪಂದ್ಯದಲ್ಲಿ ಬೆಂಗಳೂರಿನ ಕೆಎಸ್‌ಪಿ ತಂಡ 37-20ರಿಂದ ಚಿಕ್ಕಮಗಳೂರು ತಂಡವನ್ನು ಪರಾಭವಗೊಳಿಸಿತು. ಬೆಂಗಳೂರಿನ ಕೇಶವ ತಂಡ 38-26 ಅಂತರದಿಂದ ಧಾರವಾಡ ತಂಡವನ್ನು ಹೊಸಕಿತು. ಕರ್ನಾಟಕ ಸ್ಟೇಟ್ ಪೊಲೀಸ್ ತಂಡ 33-11ರಿಂದ ಬೆಳಗಾವಿ ತಂಡವನ್ನು ಪರಾಭವಗೊಳಿಸಿತು. ]
ವಾಲಿಬಾಲ್: ರವಿವಾರ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಕೋಲಾರ ಮಹಿಳಾ ತಂಡ ಹಾಗೂಪುರುಷರ ಚಾಮರಾಜನಗರ ತಂಡಗಳು ಜಯ ಸಾಧಿಸಿವೆ. ಕೋಲಾರ 3-0 ನೇರ ಸೆಟ್‌ಗಳಿಂದ ಬೆಳಗಾವಿ ತಂಡವನ್ನು ಸೋಲಿಸಿತು. ಪುರುಷರ ಚಾಮರಾಜನಗರ ತಂಡ 3-1ರಿಂದ ಮೈಸೂರು ತಂಡವನ್ನು ಮಣಿಸಿತು.
ಮಾತಿಕ ಚಕಮಕಿ: ಧಾರವಾಡ ಹಾಗೂ ಕೆಎಸ್‌ಪಿ ಪುರುಷರ ತಂಡಗಳ ಮಧ್ಯೆ ನಡೆಯುತ್ತಿದ್ದ ಸಂದರ್ಭದಲ್ಲಿ ಉಭಯತಂಡಗಳ ಆಟಗಾರರ ಮಧ್ಯೆ ತೀರ್ಪುಗಾರರ ನಿರ್ಣಯ ಕುರಿತು ಮಾತಿನ ಚಕಮಕಿ ನಡೆಯಿತು. ನಂತರ ಸಂಘಟಕರು ಪಂದ್ಯ ನಿಲ್ಲಿಸಿ ಉಭಯ ತಂಡಗಳ ಆಟಗಾರರನ್ನು ಸಮಾಧಾನಪಡಿಸಿ, ಬೇರೊಬ್ಬ ತೀರ್ಪುಗಾರರನ್ನು ನಿಯೋಜಿಸಿ ಪಂದ್ಯ ಮುಂದುವರಿಸಿದರು.
ಪ್ರಥಮ ಚಿಕಿತ್ಸೆ ಸಿಗಲಿಲ್ಲ: ಚಿಕ್ಕಮಗಳೂರು ಹಾಗೂ ಕೆಎಸ್‌ಪಿ ಮಹಿಳಾ ತಂಡಗಳ ಮಧ್ಯೆ ಕಬಡ್ಡಿ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ ಚಿಕ್ಕಮಗಳೂರು ತಂಡದ ಪಟು ಬಿದ್ದು ಕಾಲು ಉಳುಕಿಸಿಕೊಂಡ ಸಂದರ್ಭದಲ್ಲಿ ಅವಳಿಗೆ ಸಮರ್ಪಕ ತುರ್ತುಚಿಕಿತ್ಸೆ ಸಿಗಲಿಲ್ಲ. ಪೇನ್ ಕಿಲ್ಲರ್ ಸ್ಪ್ರೆ ಬೇಕೆಂದು ಕೋಚ್ ಹೋಗಿ ಸಂಘಟಕರಲ್ಲಿ ಹೇಳಿದರೂ ಸ್ಪ್ರೆ ಇಲ್ಲ ಎಂದು ಹೇಳಿ ಕಳಿಸಿದರು. ಆದರೂ ಕಾಲು ಕುಂಟುತ್ತಲೇ ಪಟು ಆಟ ಮುಂದುವರಿಸಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.