ಬೇಂದ್ರೆ ಅರ್ಥೈಸಿಕೊಳ್ಳಲು ಇನ್ನೂ ದೂರದ ದಾರಿ ಬೇಕು
Team Udayavani, Mar 8, 2021, 4:46 PM IST
ಧಾರವಾಡ: ನಾವಿಂದು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಲ್ಲಿ ನಮ್ಮತನದ ಬೇರು, ಪರಂಪರೆಗಳನ್ನು ಕಳೆದುಕೊಂಡು ಬಿಟ್ಟಿದ್ದೇವೆ. ಅವುಗಳನ್ನು ಪುನಃ ಪಡೆದುಕೊಳ್ಳಬೇಕಾದರೆ ಅದಕ್ಕೆ ಬೇಂದ್ರೆಯವರ ಕಾವ್ಯಗಳೇ ದಾರಿಯಾಗಬಲ್ಲವು ಎಂದು ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಹೇಳಿದರು.
ಕೆಸಿಡಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದ.ರಾ. ಬೇಂದ್ರೆಯವರ 125ನೇ ಜನ್ಮದಿನದಪ್ರಯುಕ್ತ ನಾಡಿನ 65 ಸಾಹಿತಿಗಳು ಬೇಂದ್ರೆ ಕುರಿತು ಬರೆದಿರುವ ಲೇಖನಗಳ ಸಂಗ್ರಹ ಕೃತಿ “ಕಂಡವರಿಗಷ್ಟೇ’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತೀಯ ಪರಂಪರೆ ಪ್ರಕಾರ ಯಾರು 125ನೇ ಜನ್ಮದಿನದ ನಂತರ ನೆನಪಿನಲ್ಲಿ ಉಳಿಯುತ್ತಾರೆಯೋ ಅವರು ಚಿರಂಜೀವಿ ಆಗುತ್ತಾರೆ ಎನ್ನುತ್ತಾರೆ. ಹಾಗೆಯೇ ಬೇಂದ್ರೆಯವರು ಈಗ ಚಿರಂಜೀವಿ ಆಗಿದ್ದಾರೆ. ಬೇಂದ್ರೆ ಓರ್ವ ಭಕ್ತ ಕವಿ ಆಗಿದ್ದರು. ಅವರಲ್ಲಿದೊಡ್ಡ ಪ್ರಮಾಣದ ಭಕ್ತಿ ಇತ್ತು. ವೇದವನ್ನು ತುಂಬಾ ಚೆನ್ನಾಗಿ ಅನುಸರಿಸಿಕೊಂಡು ಬಂದಿದ್ದರು. ಅವರನ್ನು ಕಾವ್ಯ ಮತ್ತು ಶಾಸ್ತ್ರದ ದೃಷ್ಟಿಯಿಂದ ತುಂಬಾ ಕಡಿಮೆ ಅರ್ಥೈಸಿಕೊಂಡಿದ್ದೇವೆ. ಅವರನ್ನು ಅರ್ಥೈಸಿಕೊಳ್ಳಲು ಇನ್ನೂ ದೂರದ ದಾರಿ ಬೇಕು ಎಂದರು.
ಹಿರಿಯ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಬೇಂದ್ರೆ ಪುಸ್ತಕಗಳನ್ನು ಅನಂತಕಾಲ ಪ್ರಕಟಿಸಿದ ಹಾಗೂ ಇನ್ನೂ ಅನೇಕ ವರ್ಷ ಪ್ರಕಟಿಸುವ ಶಕ್ತಿವುಳ್ಳವರು ನಮ್ಮಲ್ಲಿದ್ದಾರೆ. ಅಂಥವರು ಯಾರೂ ನಾವೇ ಇಂತಹ ಪುಸ್ತಕಪ್ರಕಟಿಸುತ್ತೇವೆ ಬನ್ನಿ ಎಂದು ಆಹ್ವಾನ ನೀಡದೇ ಇರುವುದು ಬೇಸರದ ಸಂಗತಿ. ಅದೇನೇ ಆಗಿರಲಿ ಬೇಂದ್ರೆಯವರ ಸ್ವಾಭಿಮಾನದ ಆಶಯಭಾವದಂತೆಯೇ ಸ್ವಂತ ಪುಸ್ತಕ ಪ್ರಕಟಿಸಿ, ಸ್ವಂತ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಕಂಡವರಿಗಷ್ಟೇ ಕೃತಿಯ ಸಂಪಾದಕರಾದ ಡಾ| ಗೀತಾ ವಸಂತ, ಡಾ| ರಾಜಕುಮಾರ ಮಡಿವಾಳರ ಇದ್ದರು.
ಕನ್ನಡ ಸಾಹಿತ್ಯಕ್ಕೆ ಬೇಂದ್ರೆ ಅಗಾಧ ಶಕ್ತಿ ಇದ್ದಂತೆ. ಅವರ ಸಮಾನರಾದ ಕವಿ ಮತ್ತೂಬ್ಬರಿಲ್ಲ. ಹಿಂದಿ, ಇಂಗ್ಲಿಷ್‌ನಲ್ಲಿಯೂ ಬೇಂದ್ರೆಯವರ ಮಾದರಿಯಲ್ಲಿ ಬರೆಯುವ ಕವಿಗಳ ಕಾವ್ಯಗಳನ್ನು ನಾನು ಓದಿದ್ದೇನೆ. ಆದರೆ ಅವರ್ಯಾರೂ ಸಹ ಬೇಂದ್ರೆಯವರಿಗೆ ಸಮಾನರಾಗುವುದೇ ಇಲ್ಲ. – ಡಾ| ಗುರುಲಿಂಗ ಕಾಪಸೆ, ಹಿರಿಯ ಸಾಹಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.