ಕೈನಲ್ಲಿ ಕಾಣಿಸಿಕೊಂಡ ಬೂತ್ ಭಿನ್ನಮತ
Team Udayavani, Aug 11, 2017, 12:31 PM IST
ಧಾರವಾಡ: ಕಳೆದ ತಿಂಗಳಷ್ಟೇ ಅವಳಿ ನಗರದ ಎಲ್ಲ ಬೂತ್ ಮಟ್ಟದ ಪದಾಧಿಕಾರಿಗಳ ಹಾಜರಿ ಪಡೆದು ದೊಡ್ಡ ಸಮಾವೇಶ ಮಾಡಿದ್ದ ಕಾಂಗ್ರೆಸ್‌ನಲ್ಲಿ ಇದ್ದಕ್ಕಿದ್ದಂತೆ ಭಿನ್ನಮತ ನ್ಪೋಟಗೊಂಡಿದ್ದು, ಇದೀಗ ಕಾಂಗ್ರೆಸ್‌ನಲ್ಲಿನ ಹಾಲಿ ಮಾಜಿಗಳ ನಡುವೆ ಇರುವ ಗುದ್ದಾಟಕ್ಕೆ ಬೂತ್ ಸಮಾವೇಶವೇ ವೇದಿಕೆಯಾಯಿತು.
ಗುರುವಾರ ನಗರದಲ್ಲಿ ಹು-ಧಾ ಮಹಾನಗರ ಕಾಂಗ್ರೆಸ್ ಸಮಿತಿಯ ರಾಣಿಚನ್ನಮ್ಮ ಮತ್ತು ನವನಗರ ಬ್ಲಾಕ್ ಸಮಿತಿಯ ಬೂತ್‌ಮಟ್ಟದ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಣಿಕ್ಯಂ ಟ್ಯಾಗೋರ್ ಎದುರಿನಲ್ಲಿಯೇ ಪಕ್ಷದಲ್ಲಿನ ಆಂತರಿಕ ಕಚ್ಚಾಟ ನಡೆದು, ಮಾಜಿ ಶಾಸಕರು, ಸಚಿವರು ಮತ್ತು ಹಾಲಿ ಪದಾಧಿಕಾರಿಗಳ ಮಧ್ಯ ಪರಸ್ಪರ ಮಾತಿನ ಚಕಮಕಿ, ವಾಗ್ವಾದ ನಡೆಯಿತು.
ಆರಂಭದಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಸಮಾವೇಶದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ ತಮ್ಮ ಭಾಷಣ ಆರಂಭ ಮಾಡುತ್ತಿದ್ದಂತೆಯೇ ಮಾಜಿ ಸಚಿವ ಎಸ್.ಆರ್. ಮೋರೆ ಬೆಂಬಲಿಗ ಬಸವರಾಜ ಮಲಕಾರಿ ಎಂಬಾತ ವೇದಿಕೆಗೆ ಏರಿ, ನಾವು ಮಾಡಿರುವ ಬೂತ್ ಅಧಿಕೃತವಾಗಿದೆ. ಈ ಸಮಾವೇಶ ಏರ್ಪಡಿಸಿರುವ ಬೂತ್ ಡಮ್ಮಿ ಇದೆ ಎಂಬುದಾಗಿ ದೂರಿದರು.
ಈ ವೇಳೆ ಮಲಕಾರಿ ಅವರ ಮನವಿ ಆಲಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಣಿಕ್ಯಂ ಟ್ಯಾಗೋರ್, ನಂತರದಲ್ಲಿ ಬಸವರಾಜ ಮಾತನ್ನು ತಳ್ಳಿ ಹಾಕಿದರಲ್ಲದೇ, ಈ ವಿಷಯವನ್ನು ಸಂಬಂಧಪಟ್ಟ ಸ್ಥಳೀಯ ನಾಯಕರೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು. ಆದರೆ ಇದಕ್ಕೆ ಸುಮ್ಮನಾಗದ ಬಸವರಾಜ, ತಾವು ಮಾಡಿದ ಸದಸ್ಯತ್ವದ ದಾಖಲಾತಿ ತೋರಿಸುತ್ತಿದ್ದಂತೆ ವೇದಿಕೆಯಲ್ಲಿದ್ದ ಪಾಲಿಕೆ ಸದಸ್ಯ ದೀಪಕ ಚಿಂಚೊರೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.
ಅಶಿಸ್ತು ಸಹಿಸಲ್ಲ ಎಂದ ಮಾಣಿಕ್ಯಂ: ಈ ಘಟನೆಯಿಂದ ಇಡೀ ಸಮಾವೇಶದ ಹಳಿ ತಪ್ಪುತ್ತಿರುವುದನ್ನು ಅರಿತ ಮಾಜಿ ಸಚಿವ ವೀರುಕುಮಾರ ಪಾಟೀಲ ತಮ್ಮ ಭಾಷಣ ಮೊಟಕುಗೊಳಿಸಿ, ಮಾಣಿಕ್ಯಂ ಅವರನ್ನು ಭಾಷಣಕ್ಕೆ ಆಹ್ವಾನಿಸಿದರು. ನಂತರ ಮಲಕಾರಿ ಅವರನ್ನು ವೇದಿಕೆಯಿಂದ ಆಚೆಗೆ ಕರೆದೊಯ್ದರು.
ಸಮಾವೇಶದಲ್ಲಿ ಈ ರೀತಿ ಗೊಂದಲ ಉಂಟಾಗಿದ್ದರಿಂದ ಸಿಡಿಮಿಡಿಗೊಂಡ ಮಾಣಿಕ್ಯಂ, ಪಕ್ಷದಲ್ಲಿ ಅಶಿಸ್ತಿನಿಂದ ವರ್ತಿಸಿದವರನ್ನು ಯಾವುದೇ ಮುಲಾಜಿಲ್ಲದೇ ಹೊರ ಹಾಕಲಾಗುವುದು ಎಂದು ಎಚ್ಚರಿಕೆ ಸಂದೇಶ ರವಾನಿಸಿದರು. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ, ಭಿನ್ನಾಭಿಪ್ರಾಯವಿಲ್ಲ. ಟಿಕೆಟ್ ಪಡೆಯಲು ಸ್ಪರ್ಧೆ ನಡೆಸುವುದು ಸಹಜವಾಗಿದೆಂದು ಮಾಜಿ ಸಚಿವ ಮೋರೆ ಹಾಗೂ ಪಾಲಿಕೆ ಸದಸ್ಯ ದೀಪ ಚಿಂಚೋರೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.