ಜೆಸಿಬಿ ಕಿತ್ತೂಗೆದು ಹೊಸಬರನ್ನು ತನ್ನಿ
Team Udayavani, Jul 22, 2017, 12:02 PM IST
ಧಾರವಾಡ: ದೇಶದ ಕೃಷಿ ಕ್ಷೇತ್ರ ಹಾಗೂ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜೆಸಿಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ)ಪಕ್ಷಗಳಿಗೆ ವಿದಾಯ ಹೇಳುವುದು ಅಗತ್ಯವಿದೆ ಎಂದು ಹೋರಾಟಗಾರ ಎಸ್.ಆರ್.ಹಿರೇಮಠ ಹೇಳಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ 38ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ನಗರದ ಕವಿಸಂನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ ಬಂದು 70 ವರ್ಷ ಹಾಗೂ ಸಂವಿಧಾನ ರಚನೆಯಾಗಿ 69 ವರ್ಷ ಕಳೆದರೂ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರೈತರು, ಬಡವರು ಮತ್ತು ಸಣ್ಣ ಹಿಡುವಳಿದಾರರಿಗಾಗಿ ಏನನ್ನೂ ಮಾಡಿಲ್ಲ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಈ ಪಕ್ಷಗಳು ವಿಫಲವಾಗಿವೆ. ಅಲ್ಲದೇ ಶಿಕ್ಷಣ-ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣ ಗೊಳಿಸಲು ಹೊರಟಿವೆ.
ಇದು ಬಹಳ ಅಪಾಯಕಾರಿ ಬೆಳವಣಿಗೆಯಾಗಿದ್ದು, ಹೀಗಾಗಿ ಈ ಪಕ್ಷಗಳಿಗೆ ವಿದಾಯ ಹೇಳಬೇಕಾದ ಸಮಯ ಬಂದೊದಗಿದೆ ಎಂದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕೆಲ ನೀತಿ ಹಾಗೂ ಯೋಜನೆಗಳು ರೈತ ವಿರೋ ಧಿ ಧೋರಣೆಯಿಂದ ಕೂಡಿವೆ. ಇದಕ್ಕೆಲ್ಲ ಕಡಿವಾಣ ಹಾಕುವಂತಹ ಸಂದರ್ಭ ಈಗ ಬಂದಿದ್ದು, ಅದಕ್ಕಾಗಿ ಎಲ್ಲ ರೈತ ಸಂಘಟನೆಗಳು ಜಾತಿ, ಭೇದ-ಭಾವ ಮರೆತು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೋದ ಕಡೆಗಳಲ್ಲೆಲ್ಲ ನಾನು ಜನ ಸೇವಕ ಎಂಬುದಾಗಿ ಹೇಳುತ್ತಾರೆ. ಇದು ನಿಜವಾಗಿದ್ದರೆ ದೇಶದಲ್ಲಿ ಶೇ. 63ರಷ್ಟಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸ್ವಾಮಿನಾಥನ್ ಅವರ ವರ ದಿಯನ್ನು ಅನುಷ್ಠಾನಗೊಳಿಸಬೇಕು.
ದೇಶದ ಬಜೆಟ್‌ನಲ್ಲಿ ಉದ್ಯಮಿಗಳಿಗೆ ನೀಡುವ ರಿಯಾಯಿತಿ ಕಡಿತಗೊಳಿಸಿ ದೇಶದ ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಇದಾವುದಕ್ಕೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗದಿದ್ದರೆ 2ನೇ ಸ್ವಾತಂತ್ರ ಹೋರಾಟಕ್ಕೆ ತಾವೆಲ್ಲರೂ ಅಣಿಯಾಗಬೇಕು. ಅಲ್ಲದೇ ಮುಂಬರುವ ಚುನಾವಣೆಯಲ್ಲಿ ಪ್ರಾಮಾಣಿಕರನ್ನು ವಿಧಾನಸಭೆ ಹಾಗೂ ಲೋಕಸಭೆಗೆ ಆಯ್ಕೆ ಮಾಡುವ ಕಾರ್ಯಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ಸಾಲ ಮನ್ನಾ ಆಗಲೇಬೇಕು: ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಮಾತನಾಡಿ, 38 ವರ್ಷಗಳ ಹಿಂದೆ ಗುಂಡೂರಾವ್ ಗುಂಡಿಗೆ ಗಂಡೆದೆ ನೀಡಿ ವೀರಮರಣ ಹೊಂದಿದ ಹುತಾತ್ಮ ರೈತರು ಬಿದ್ದ ಮರಗಳಲ್ಲ. ಅವರು ಬಿತ್ತಿದ ಬೀಜಗಳು. ಇದರ ಫಲ ರಾಜ್ಯ ರೈತ ಸಂಘ. ರೈತರ ಸಮಸ್ಯೆಗಳಿಗೆ ಬೇರೆ ರೂಪ ಕೊಡುವ ರಾಜಕೀಯ ಪಕ್ಷಗಳ ನೀತಿಗೆ ಬಲಿಯಾಗಬೇಡಿ ಎಂದರು.
ಸಂವಿಧಾನ ನೀಡಿರುವ ಜೀವಿಸುವ ಹಕ್ಕಿನ ಮೂಲಕ ಪ್ರತಿಯೊಬ್ಬ ರೈತರು ಸಾಲ ಮನ್ನಾ ಹಾಗೂ ನಿಗದಿತ ಬೆಂಬಲ ಬೆಲೆಗೆ ಆಗ್ರಹಿಸುವುದನ್ನು ನಿಲ್ಲಿಸಬಾರದು. ದೇಶದಲ್ಲಿರುವ 24 ಸಂಘಟನೆಗಳಲ್ಲಿ ಕೆಆರ್ ಆರ್‌ಎಸ್ ಅತ್ಯಂತ ಪ್ರಮುಖವಾಗಿದೆ. ಎಲ್ಲರೂ ಒಟ್ಟಾಗಿ ಮಹಾಮೈತ್ರಿಯ ಪರಿಕಲ್ಪನೆಯಲ್ಲಿ ಹೋರಾಟಕ್ಕೆ ಮುಂದಾಗಬೇಕಿದೆ ಎಂದರು. ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ನಾಗಪ್ಪ ಉಂಡಿ, ಜಿಲ್ಲಾಧ್ಯಕ್ಷ ಈರಣ್ಣ ಬಳಿಗೇರ, ಬಡಗಲಪುರ ನಾಗೇಂದ್ರಪ್ಪ, ಮಲ್ಲಿಕಾರ್ಜುನ ಬಳ್ಳಾರಿ, ಎಂ.ರಾಮು, ಬಲ್ಲೂರ ರವಿಕುಮಾರ, ರಾಮಣ್ಣ ಕೆಂಚಳ್ಳಿ, ಕೆ.ಪಿ. ಬೂತಯ್ಯ, ಗೋವಿಂದರಾಜ್, ಕಲ್ಯಾಣ್‌ರಾವ್ ಮುಚಳಂಬಿ, ನಾಗರತ್ನಮ್ಮ, ಮಂಜುಳಾ ಅಕ್ಕಿ, ಸುರೇಶಬಾಬು ಪಾಟೀಲ ಸೇರಿದಂತೆ ವಿವಿಧ ಜಿಲ್ಲೆಗಳ ಸುಮಾರು 2 ಸಾವಿರಕ್ಕೂ ಅಧಿಕ ರೈತರು ಹಾಗೂ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubballi-Dharwad ಪ್ರತ್ಯೇಕ ಮಹಾನಗರ ಪಾಲಿಕೆ: ಸರ್ಕಾರದಿಂದ ಮಧ್ಯಂತರ ರಾಜ್ಯಪತ್ರ
ಸದ್ಯಕ್ಕೆ ಸಿಎಂ ಚರ್ಚೆ ಗೊಡವೆಯೇ ನನಗೆ ಬೇಡ: ಡಿ.ಕೆ.ಶಿವಕುಮಾರ್
Hubli: ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜಸ್ಟ್‌ಮೆಂಟ್ ಇದೆ: ಯತ್ನಾಳ್ ಆರೋಪ
Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ
BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ