ಬ್ರಿಟಿಷರ ಕಾಲದ ಕಚೇರಿ ಬಾವಿ ನೆನಪಷ್ಟೆ
ಮಾರುಕಟ್ಟೆ ಸ್ಥಳಾಂತರಕ್ಕೆ ಅಡ್ಡಿ, ಪುರಾತನ ಬಾವಿ ಮುಚ್ಚಿಸಿದ ಅಧಿಕಾರಿಗಳು
Team Udayavani, Mar 15, 2021, 2:40 PM IST
ನವಲಗುಂದ: ಸರಕಾರ ಅಂತರ್ಜಲ ರಕ್ಷಣೆಗಾಗಿ ಬಾವಿ, ಕೆರೆಗಳನ್ನುರಕ್ಷಣೆ ಮಾಡಬೇಕೆಂದು ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ಪಟ್ಟಣದ ಪುರಸಭೆ ಅಧಿಕಾರಿಗಳು ಈಗಾಗಲೇ ಎಪಿಎಂಸಿ ಆವರಣದಲ್ಲಿ ಸ್ಥಳಾಂತರಗೊಂಡ ತರಕಾರಿ ಮಾರುಕಟ್ಟೆ ಮರು ಸ್ಥಳಾಂತರಕ್ಕೆ ಅಡ್ಡಿಯಾಗಿದೆ ಎಂದು ಇದ್ದ ಪುರಾತನ ಬಾವಿಯನ್ನೇ ಮುಚ್ಚಿಸಿದ್ದಾರೆ.
ಪಟ್ಟಣದಲ್ಲಿ ನೀರಿನ ಸೌಕರ್ಯವಿಲ್ಲದ ಸಮಯದಲ್ಲಿ ಈ ಬಾವಿಗಳು ಜನರಿಗೆಆಸರೆಯಾಗಿ ನೀರಿನ ದಾಹವನ್ನು ತೀರಿಸಿದ್ದವು. ಆದರೆ ಈಗ ಈ ಬಾವಿಗಳನ್ನುರಕ್ಷಣೆ-ನಿರ್ವಹಣೆ ಮಾಡುವುದನ್ನು ಬಿಟ್ಟುತರಕಾರಿ ಮಾರುಕಟ್ಟೆ ಮರಳಿ ಸ್ಥಳಾಂತರಕ್ಕೆಬಾವಿಯನ್ನೇ ಬಲಿ ಕೊಟ್ಟಂತಾಗಿದೆ.
ಬಾವಿ ಇತಿಹಾಸ: ಬ್ರಿಟಿಷರ ಆಡಳಿತದಲ್ಲಿ ಬಾಂಬೆ ಸರಕಾರವಿದ್ದಾಗ ಸ್ಥಾಪನೆಗೊಂಡಬಾವಿಯಾಗಿದೆ. ಆಗಿನ ಪಟ್ಟಣ ಪಂಚಾಯತಆವರಣದಲ್ಲಿ ಬಾವಿಯೊಂದನ್ನುತೋಡಿಸಿ ಅದಕ್ಕೆ “ಕಚೇರಿ ಬಾವಿ’ ಎಂದೇಕರೆಯುತ್ತಾ ಬಂದಿರುತ್ತಾರೆ. ನೀರಿನಸದುಪಯೋಗಕ್ಕಾಗಿ ಆವರಣದಲ್ಲಿ ಎರಡು ನಲ್ಲಿಗಳನ್ನು ಜೋಡಿಸಲಾಗಿತ್ತು.ಇದರೊಂದಿಗೆ ದನಕರುಗಳ ದಾಹನಿವಾರಿಸಲು ದೋಣಿಯೊಂದನ್ನುನಿರ್ಮಿಸಿ ಇದೇ ಬಾವಿಯ ನೀರನ್ನು ತುಂಬಿಸಲಾಗುತ್ತಿತ್ತು. ಇಷ್ಟೆಲ್ಲ ಸಾಮಾಜಿಕಕಳಕಳಿಯಿಂದ ನಿರ್ಮಾಣಗೊಂಡ “ಕಚೇರಿಬಾವಿ’ ಭಾಗ್ಯವನ್ನೇ ಈಗಿನ ಅಧಿ ಕಾರಿಗಳುಹಾಳುಗೆಡಹಿದ್ದಾರೆ. ಹಿರಿಯರ ಮೂಲ ಉದ್ದೇಶವನ್ನೇ ಗಾಳಿಗೆ ತೂರಿದ್ದಾರೆ.ಪಟ್ಟಣದಲ್ಲಿ ಬೆರಳೆಣಿಕೆ ಬಾವಿಗಳುಉಳಿದಿದ್ದು, ಒಂದೊಂದರಂತೆ ಎಲ್ಲವೂ ಮುಚ್ಚುತ್ತಿರುವುದು ಶೋಚನೀಯವಾಗಿದೆ.
ಗಣೇಶ ವಿಸರ್ಜನೆ ಸವಾಲು :
ನವಲಗುಂದ ಮಧ್ಯಭಾಗದಲ್ಲಿರುವ ಹಳೆ ಪುರಸಭೆ ಆವರಣದ “ಕಚೇರಿ ಬಾವಿ’ಯೊಂದೇ ಪಟ್ಟಣದ ಜನತೆಗೆ ಅನುಕೂಲಕರವಾಗಿತ್ತು. ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣೇಶ ವಿಸರ್ಜನೆಗಾಗಿ ಉಳಿದೆಲ್ಲ ಬಾವಿಗಳು ದೂರ ಇರುವುದರಿಂದ ಹಾಗೂ ಪಟ್ಟಣದ ನೀಲಮ್ಮನ ಕೆರೆಯಲ್ಲಿ ಗಣಪತಿ ವಿಸರ್ಜನೆ ಮಾಡಬಾರದೆಂಬ ಉದ್ದೇಶದಿಂದ ಕಚೇರಿಬಾವಿ (ಪುರಸಭೆ ಬಾವಿ)ಯಲ್ಲಿ ನೀರುಇಲ್ಲದಿದ್ದರೂ ತಾತ್ಕಾಲಿಕವಾಗಿ ನೀರನ್ನು ತುಂಬಿಸಿ ಪಟ್ಟಣದ ಜನತೆಗೆ ಗಣಪತಿ ವಿಸರ್ಜನೆಗೆಅವಕಾಶ ನೀಡಲಾಗುತ್ತಿತ್ತು. ಉಳಿದ ದಿನಗಳಲ್ಲಿ ನಾಗರಿಕರಿಗೆ ಬಾವಿಯಿಂದ ಯಾವುದೇತೊಂದರೆಯಾಗದಂತೆ ವ್ಯವಸ್ಥೆಯನ್ನೂಮಾಡಿದ್ದರು. ಆದರೆ ಬರುವ ದಿನಗಳಲ್ಲಿ ಸಾರ್ವಜನಿಕರುಗಣೇಶ ಚತುರ್ಥಿ ಸಂಧರ್ಭದಲ್ಲಿ ಯಾವ ಬಾವಿಯಲ್ಲಿ ಗಣೇಶ ವಿಸರ್ಜನೆ ಮಾಡಬೇಕೆಂಬುದೇ ಪಟ್ಟಣದ ಜನತೆಗೆ ದೊಡ್ಡ ಸವಾಲಾಗಿದೆ.
ಉಳಿದಿರುವ ಬಾವಿಗಳು ಯಾವುವು? :
ಶೇ. 99 ಬಾವಿಗಳು ಮಾಲೀಕರ ನಿರಾಸಕ್ತಿಯಿಂದಾಗಿಯೋ ಅಥವಾ ಬೇರೆ ಉದ್ದೇಶದಿಂದಲೋ ಮುಚ್ಚಿ ಹೋಗಿವೆ. ಇದರಲ್ಲಿ ಉಳಿದಿರುವ ಬಾವಿಗಳೆಂದರೆ ಪಟ್ಟಣದ ಹೊರವಲಯದಲ್ಲಿರುವಇತಿಹಾಸ ಪ್ರಸಿದ್ಧ ಸಂಕಮ್ಮನ ಬಾವಿ, ಕಾಳಗಿಯವರ ಬಾವಿ, ಗುಡ್ಡದ ಕೇರಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿರುವ ದಾಸರ ಬಾವಿ, ಅಕ್ಕಮಹಾದೇವಿ ದೇವಸ್ಥಾನ ಪಕ್ಕದಲ್ಲಿರುವ ಬಾವಿ ಹಾಗೂ ಪುರಸಭೆ ಮಾಲೀಕತ್ವದ ಅಗಸರ ಬಾವಿ. ಇವುಗಳಷ್ಟೇ ಈಗ ಜೀವ ತುಂಬಿರುವ ಬಾವಿಗಳಾಗಿವೆ.
ಬಾವಿ, ಕೆರೆಗಳ ಸಂರಕ್ಷಣೆ ಮಾಡುವಉದ್ದೇಶ ಸರ್ಕಾರದ್ದಾಗಿದೆ. ಪಟ್ಟಣದ ಹಳೇ ಪುರಸಭೆಯ ಬಾವಿ ಮುಚ್ಚಿರುವುದುನನ್ನ ಗಮನಕ್ಕೆ ಬಂದಿಲ್ಲ. ಪುರಸಭೆ ಅಧ್ಯಕ್ಷ ಹಾಗೂ ಅಧಿಕಾರಿಗಳಿಗೆ ವಿಚಾರಿಸಿ ಕ್ರಮ ತೆಗೆದುಕೊಳ್ಳುತ್ತೇನೆ.– ನವೀನ ಹುಲ್ಲೂರ, ತಹಶೀಲ್ದಾರ್
ಬಾವಿ ಯಾವುದೇ ರೀತಿ ಬಳಕೆಯಾಗದೆ ಇರುವುದರಿಂದ ಮುಚ್ಚಲಾಗಿದೆ. ಗಣೇಶ ಚತುರ್ಥಿಗೆ ಬೇರೆ ಪರ್ಯಾಯ ವ್ಯವಸ್ಥೆಮಾಡಲಾಗುವುದು. –ಎನ್.ಎಚ್. ಖುದಾನವರ, ಪುರಸಭೆ ಮುಖ್ಯಾಧಿಕಾರಿ
ತರಕಾರಿ ಮಾರುಕಟ್ಟೆ ಈ ಜಾಗೆಯಲ್ಲಿ ಬರುವುದರಿಂದ ಮಕ್ಕಳು,ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದುಬಾವಿ ಮುಚ್ಚಲಾಗಿದೆ. ಬೇರೆ ಉದ್ದೇಶ ಇಲ್ಲ.ಬಾವಿಯ ನೀರು ಬಳಕೆ ಇಲ್ಲದೆ ಹಾಳುಬಿದ್ದಿರುವುದರಿಂದ ಮುಚ್ಚಲಾಗಿದೆ. –ಮಂಜುನಾಥ ಜಾಧವ, ಪುರಸಭೆ ಅಧ್ಯಕ್ಷ
ಪುರಾತನ ಬಾವಿಯಾಗಿತ್ತು. ನಮ್ಮ ತಂದೆಯವರು ಈ ಬಾವಿಯ ಇತಿಹಾಸಹೇಳುತ್ತಿದ್ದರು. ಒಂದಾನೊಂದು ಕಾಲದಲ್ಲಿಸಾರ್ವಜನಿಕರು ಈ ಬಾವಿಯ ನೀರನ್ನೇ ಬಳಕೆಮಾಡುತ್ತಿದ್ದರು. ಈಗ ಈ ಬಾವಿ ಅಲ್ಲದೇ ಇತರೆ ಕೆಲವೊಂದು ಬಾವಿಗಳು ನಿರ್ಲಕ್ಷಕ್ಕೆ ಒಳಗಾಗಿವೆ. ಸರಕಾರ ಬೇರೆ ಯೋಜನೆಗಳಿಗೆ ಸಾಕಷ್ಟು ಹಣ ವೆಚ್ಚ ಮಾಡುತ್ತಿದೆ. ಇಂತಹಪುರಾತನ ಜಲಮೂಲಗಳ ರಕ್ಷಣೆಗೂ ಆದ್ಯತೆ ನೀಡಬೇಕು.– ಬಸನಗೌಡ ಪಾಟೀಲ, ಸ್ಥಳೀಯ ರೈತ
–ಪುಂಡಲೀಕ ಮುಧೋಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.