ಬಿಆರ್‌ಟಿಎಸ್‌ನ ಅಂದ ಹೆಚ್ಚಿಸಿದ ಕಲಾಕೃತಿಗಳು
ಜನರನ್ನು ತಮ್ಮತ್ತ ಸೆಳೆಯುತ್ತಿರುವ ಸುಂದರ ಚಿತ್ರಗಳು| ಫ್ಲೋರಲ್ ಪೇಂಟ್‌ನಿಂದ ಬಿಡಿಸಿದ ಚಿತ್ರಗಳು ಆಕರ್ಷಕ
Team Udayavani, Oct 7, 2021, 9:45 PM IST
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮಧ್ಯದ ಬಹು ನಿರೀಕ್ಷಿತ ಹು-ಧಾ ತ್ವರಿತ ಬಸ್ ಸಂಚಾರ ಸೇವೆ (ಎಚ್‌ಡಿಬಿಆರ್‌ಟಿಎಸ್)ಮಾರ್ಗದ ಕೆಲವೆಡೆ ಫ್ಲೋರಲ್ ಪೇಂಟ್ ಮತ್ತು ಫನೇಚರ್ ಫಿಲ್ಮ್ ಚಿತ್ರಿಸಲಾದ ಸುಂದರ ರಮಣೀಯ ಚಿತ್ರಗಳು ಜನರನ್ನು ಆಕರ್ಷಿಸುತ್ತಿವೆ. ಸುಮಂಗಲಾ ಭಟ್ ಅವರ ಸೃಷ್ಟಿ ಆರ್ಟ್ಸ್ನವರ ಕೈಚಳಕದಲ್ಲಿ ನಿಸರ್ಗ ರಮಣೀಯ ದೃಶ್ಯಗಳು ಮತ್ತು ತಾಯಿ ಮಡಲಲ್ಲಿನ ಮಗು ಹಾಗೂ ಕಲಾಕೃತಿಗಳು ಜನರನ್ನು ತಮ್ಮತ್ತ ಸೆಳೆಯುತ್ತಿವೆ.
ಸೃಷ್ಟಿ ಆರ್ಟ್ಸ್ನವರು ನವನಗರ-ಅಮರಗೋಳ ಮಧ್ಯದ ಬಿಆರ್‌ಟಿಎಸ್ ಮೇಲ್ಸೇತುವೆ ಕೆಳಗೆ ಫಿಲ್ಲರ್‌ನಲ್ಲಿ ಪ್ಲೋರಲ್ ಪೇಂಟ್‌ನಲ್ಲಿ ನಿಸರ್ಗ ರಮಣೀಯ ಚಿತ್ರ ಬಿಡಿಸಿದ್ದು, ಇದು ಈ ಮಾರ್ಗದಲ್ಲಿ ಸಂಚರಿಸುತ್ತಿರುವ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಧಾರವಾಡ ಲ್ಯಾಪಿಟೇಶನ್ ರೂಮ್‌ನಲ್ಲಿ ತಾಯಿ ಮಗುವನ್ನು ತನ್ನ ಮಡಲಿನಲ್ಲಿ ಆಲಂಗಿಸಿ ಕುಳಿತ ಚಿತ್ರ ಮನಮೋಹಕವಾಗಿದೆ. ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಬಳಿ ಬಿಆರ್‌ಟಿಎಸ್‌ನ ಕೇಂದ್ರ ಕಚೇರಿ ಆವರಣದಲ್ಲಿನ ಫಿಲ್ಲರ್‌ಗಳ ಕಂಬಕ್ಕೆ ಫ್ಲೋರಲ್ ಪೇಂಟ್‌ನಿಂದ ಆಕರ್ಷಕ ಚಿತ್ರ ಬಿಡಿಸಲಾಗಿದೆ.
ಈ ಚಿತ್ರಗಳು ಬಿಆರ್‌ಟಿಎಸ್‌ನ ಅಂದ ಹೆಚ್ಚಿಸಿದೆ. ಅಲ್ಲದೆ ಜನರನ್ನು ತಮ್ಮತ್ತ ಕೈಬೀಸಿ ಕರೆಯುವಂತಿವೆ. ಸೃಷ್ಟಿ ಆರ್ಟ್ಸ್ನವರು ಬಿಆರ್‌ಟಿಎಸ್‌ನ ಕಚೇರಿ, ರೂಮ್ ಮತ್ತು ಮಾರ್ಗಗಳಲ್ಲಿ ಫ್ಲೋರಲ್ ಪೇಂಟ್, ಫನೇಚರ್ ಫಿಲ್ಮ್ ಚಿತ್ರಿಸಿದ್ದಲ್ಲದೆ ಧಾರವಾಡ ರೈಲ್ವೆ ನಿಲ್ದಾಣದಲ್ಲೂ ಯಕ್ಷಗಾನ, ಭರತನಾಟ್ಯ, ಜ್ಞಾನಪೀಠ ಪ್ರಶಸ್ತಿ ವಿಜೇತರು ಸೇರಿದಂತೆ ವಿಭಿನ್ನ ಕಲಾಕೃತಿಗಳನ್ನು ರಚಿಸಿ ನಿಲ್ದಾಣದ ಅಂದ ಹೆಚ್ಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.