ಬಕ್ರೀದ್: ವಾಹನ ಸಂಚಾರ ಮಾರ್ಗ ಬದಲು
Team Udayavani, Sep 1, 2017, 12:35 PM IST
ಹುಬ್ಬಳ್ಳಿ: ಬಕ್ರೀದ್ ಹಬ್ಬದ ಪ್ರಯುಕ್ತ ಸೆಪ್ಟಂಬರ್ 2ರಂದು ಈದ್ಗಾ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವುದರಿಂದ ಕೆಲ ಮಾರ್ಗಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಕೆಲ ಮಾರ್ಗಗಳನ್ನು ಮುಕ್ತಗೊಳಿಸಲಾಗಿದ್ದು, ಇನ್ನು ಕೆಲವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ.
ಮುಕ್ತ ಮಾರ್ಗಗಳು: ಸ್ಟೇಶನ್ ರಸ್ತೆ, ರಾಧಾಕೃಷ್ಣ ಗಲ್ಲಿ, ಶಾ ಬಜಾರ್, ಬಂಡಿವಾಡ ಮಸೀದಿ ಕಡೆಯಿಂದ ದುರ್ಗದ ಬಯಲು ಕಡೆಗೆ, ಬ್ರಾಡವೇ, ಲ್ಯಾಮಿಂಗ್ಟನ್ ರಸ್ತೆ, ಶಿವಾಜಿ ಚೌಕ್‌ನಿಂದ ಕೊಪ್ಪಿಕರ ರಸ್ತೆ ಬಳಸಿಕೊಂಡು ಚಿಟಗುಪ್ಪಿ ವೃತ್ತದ ಕಡೆಗೆ, ಪೆಂಡಾರ ಗಲ್ಲಿ, ಕಾಳಮ್ಮನ ಅಗಸಿ, ಮುಲ್ಲಾ ಓಣಿ, ಡಾಕಪ್ಪ ವೃತ್ತ, ಕೌಲಪೇಟ, ಪಿ.ಬಿ. ರಸ್ತೆ. ಚಟ್ನಿಮಠ ಕ್ರಾಸ್‌ನಿಂದ ಎಂಟಿ ಮಿಲ್ ಕಾರವಾರ ರಸ್ತೆ, ಕೇಶ್ವಾಪುರ ವೃತ್ತ, ದೇಸಾಯಿ ವೃತ್ತ ಕಡೆಯಿಂದ ಈದ್ಗಾ ಮೈದಾನ ಕಡೆಗೆ, ಕೆ.ಎಚ್. ಪಾಟೀಲ ರಸ್ತೆ, ರೈಲ್ವೆ ಕೆಳಸೇತುವೆ ಮೂಲಕ ಡಾ| ಅಂಬೇಡ್ಕರ್ ವೃತ್ತ, ಡಾಕಪ್ಪ ವೃತ್ತ.
ನಿರ್ಬಂಧಿತ ಮಾರ್ಗಗಳು: ಮ್ಯಾದಾರ ಓಣಿಯಿಂದ ತುಳಜಾಭವಾನಿ ವೃತ್ತ, ಪೆಂಡಾರ ಗಲ್ಲಿಯಿಂದ ತುಳಜಾ ಭವಾನಿ ಗುಡಿ. ಅಲ್ಲಿಂದ ದಾಜಿಬಾನ ಪೇಟೆ ಕಡೆಗೆ, ಕಾಳಮ್ಮನ ಅಗಸಿಯಿಂದ ಮಾಹಾವೀರಗಲ್ಲಿ ಮೂಲಕ ಮೂರುಸಾವಿರ ಮಠ-ಅಂಚಟಗೇರಿ ಓಣಿ. ಪದ್ಮಾ ಟಾಕೀಜ್ ರಸ್ತೆ. ಗೌಳಿಗಲ್ಲಿ, ಚನ್ನಪೇಟೆ ಮುಖ್ಯ ರಸ್ತೆ, ಚಾಟ್ನಿಮಠ ಕಡೆಗೆ ಹಾಗೂ ಕಮರಿಪೇಟ ಜೈ ಭಾರತ ವೃತ್ತ ಕಡೆಗೆ.
ಮಾರ್ಗ ಬದಲಾವಣೆ: ಹಬ್ಬದ ಪ್ರಯುಕ್ತ ಬೆಳಗ್ಗೆ 7:00ರಿಂದ ಮಧ್ಯಾಹ್ನ 12:00ಗಂಟೆ ವರೆಗೆ ವಾಹನ ಸಂಚಾರದ ಮಾರ್ಗಗಳನ್ನು ತಾತ್ಕಾಲಿವಾಗಿ ಬದಲಿಸಲಾಗಿದೆ.
ಪಿಂಟೋ ವೃತ್ತ: ಗದಗ ಮತ್ತು ರೈಲ್ವೆ ನಿಲ್ದಾಣ ಕಡೆಯಿಂದ ಬರುವ ವಾಹನಗಳು ಪಿಂಟೋ ವೃತ್ತದಿಂದ ದೇಸಾಯಿ ಕ್ರಾಸ್, ಕಾಟನ್ ಮಾರ್ಕೆಟ್ ಮೂಲಕ ಹೊಸೂರು ಕಡೆಗೆ ಹಾಗೂ ಸಾರಿಗೆ ಸಂಸ್ಥೆ ಬಸ್‌ಗಳನ್ನು ಇಂದಿರಾ ಗಾಜಿನ ಮನೆ ಹತ್ತಿರ ನಿಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ದೇಸಾಯಿ ವೃತ್ತ: ನವಲಗುಂದ ಹಾಗೂ ಪಿಂಟೋ ವೃತ್ತದಿಂದ ಬರುವ ವಾಹನಗಳು ಕಾಟನ್ ಮಾರ್ಕೆಟ್ ಮುಖಾಂತರ ಹೊಸೂರು ವೃತ್ತ ಕಡೆಗೆ ಸಂಚರಿಸಬೇಕು. ಕಾಟನ್ ಮಾರ್ಕೆಟ್ ಕಡೆಯಿಂದ ದೇಸಾಯಿ ಕ್ರಾಸ್ ಕಡೆಗೆ ಹೋಗುವ ವಾಹನಗಳನ್ನು ನವಲಗುಂದ ರಸ್ತೆ ಮೂಲಕ ಸಂಚರಿಸಬೇಕು.
ಕಮರಿಪೇಟೆ ಪೊಲೀಸ್ ಠಾಣೆ ಎದುರು: ಬೆಂಗಳೂರಿನಿಂದ ಧಾರವಾಡಕ್ಕೆ ಹೋಗುವ ವಾಹನಗಳು ಬೈಪಾಸ್ ಮೂಲಕ ಸಂಚರಿಸಬೇಕು. ನವಲಗುಂದ ಹಾಗೂ ಗದಗ ಕಡೆ ಹೋಗುವ ವಾಹನಗಳು ತೊರವಿ ಹಕ್ಕಲ, ಎಂ.ಟಿ. ಮಿಲ್, ವಾಣಿ ವಿಲಾಸ ಕ್ರಾಸ್, ಹೊಸೂರು ವೃತ್ತ ಮೂಲಕ ದೇಸಾಯಿ ವೃತ್ತ ಮಾರ್ಗವಾಗಿ ಕೇಶ್ವಾಪುರ ಕಡೆಗೆ ಹೋಗಬೇಕು.
ಲಕ್ಷ್ಮಿ ವೇ ಬ್ರಿಜ್ ವೃತ್ತ: ದೇಸಾಯಿ ವೃತ್ತದಿಂದ ಬರುವ ವಾಹನಗಳು ಕಿತ್ತೂರು ಚನ್ನಮ್ಮ ವೃತ್ತ ಬದಲು ಗಿರಣಿಚಾಳ, ಎಂ.ಟಿ. ಮಿಲ್ ಕ್ರಾಸ್ ಮುಖಾಂತರ ಬೆಂಗಳೂರು ಹಾಗೂ ಧಾರವಾಡ ಕಡೆಗೆ ಹೋಗಬೇಕು.
ಕಾರವಾರ ರಸ್ತೆ ಚೆಕ್ ಪೋಸ್ಟ್: ಹಳೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪಾರ್ಥನೆ ಸಲ್ಲಿಸುವ ಕಾರಣ ಕಲಘಟಗಿ ಕಡೆಯಿಂದ ಹಾಗೂ ಗ್ರಾಮೀಣ ಕಡೆಯಿಂದ ನಗರಕ್ಕೆ ಬರುವ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಅಂಥವರು ಬೈಪಾಸ್ ಮೂಲಕ ತಾರಿಹಾಳ ಇಂಟರ್ ಚೇಂಜ್‌ನಿಂದ ನಗರಕ್ಕೆ ಪ್ರವೇಶಿಸಬೇಕು.
ಇತರೆ ರಸ್ತೆಗಳು: ಕಿತ್ತೂರು ಚೆನ್ನಮ್ಮ ವೃತ್ತಕ್ಕೆ ಸೇರುವ ಇನ್ನಿತರೆ ಸಣ್ಣ ಪುಟ್ಟ ರಸ್ತೆಗಳ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.