ರೋಟರಿ ಕ್ಲಬ್ ನಿಂದ ದ ಸಂಚಾರಿ ಶೌಚಾಲಯ ನಿರ್ಮಾಣ
Team Udayavani, Jun 27, 2018, 5:21 PM IST
ಹೊನ್ನಾವರ: 1964ರಲ್ಲಿ ಆರಂಭವಾದ ರೋಟರಿ ಕ್ಲಬ್ 54 ವರ್ಷಗಳಿಂದ ಸತತ ನೇತ್ರ ಚಿಕಿತ್ಸಾ ಶಿಬಿರ, ಮಕ್ಕಳ ಬೇಸಿಗೆ ಶಿಬಿರವನ್ನು ನಡೆಸುತ್ತಾ ಬಂದು ದಾಖಲೆ ಮಾಡಿದೆ. ರೋಟರಿ ಉದ್ಯಾನದಲ್ಲಿ ಸ್ವಂತ ಕಟ್ಟಡ ಹೊಂದಿದ ರೋಟರಿ ಕ್ಲಬ್ ಶಿಷ್ಯವೇತನ ನೀಡುತ್ತಿದೆ. ಬಡವರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಹಾಯ, ಪೋಲಿಯೋ ನಿರೋಧ ಚಳವಳಿ ಸಹಿತ 13ಕ್ಕೂ ಹೆಚ್ಚು ಜನಪರ ಕಾರ್ಯಕ್ರಮವನ್ನು ಸತತ ನಡೆಸುತ್ತಿದ್ದು ವಿಶೇಷಚೇತನ ಮಕ್ಕಳ ಶಾಲೆಯೊಂದಕ್ಕೆ ಬಸ್ ನೀಡಿದೆ. ನಗರದ ಗಣ್ಯರು ಸದಸ್ಯತ್ವ ಹೊಂದಿರುವ ರೋಟರಿ ಕ್ಲಬ್ ಈ ವರ್ಷ ಉತ್ಸಾಹಿ ವೈದ್ಯ ಡಾ| ರಂಗನಾಥ ಪೂಜಾರಿ ಅಧ್ಯಕ್ಷರಾಗಿ, ಮನವೆಲ್ ಸ್ಟೆಪನ್ ರೊಡ್ರಗೀಸ್ ಕಾರ್ಯದರ್ಶಿಯಾಗಿ, ಎಸ್.ಎಂ. ಭಟ್ ಕೋಶಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಈ ವರ್ಷ ನಗರದ ಹಲವೆಡೆ ಸಂಚಾರಿ ಶೌಚಾಲಯ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಈಗಾಗಲೇ ಅಂತಾರಾಷ್ಟ್ರೀಯ ರೋಟರಿಯ ಸಹಕಾರ ದೊರೆತಿದೆ. ಐಸಿಯು ಅಂಬುಲೆನ್ಸ್ ಪಡೆಯಲಾಗುವುದು, ಸಾವಯವ ಕೃಷಿ ಮತ್ತು ಕೃಷಿ ಬೆಂಬಲದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ಉದಯವಾಣಿಗೆ ತಿಳಿಸಿದ್ದಾರೆ. ಜು.1ರಿಂದ ಇವರ ಅಧಿಕಾರಾವಧಿ ಆರಂಭವಾಗಲಿದ್ದು ಈ ಕುರಿತು 4ರಂದು ಪ್ರತಿಜ್ಞಾ ಸ್ವೀಕಾರ ಸಮಾರಂಭ ನಡೆಯಲಿದೆ. ಉದ್ಯಮಿ ಜೆ.ಟಿ. ಪೈ, ಜೋರ್ಸ್ ನ್ ಫರ್ನಾಂಡೀಸ್, ವಿನಾಯಕ ಬಾಳೇರಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಅದಕ್ಕೂ ಮೊದಲು ಜು.1 ರಂದು ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಡಾ| ರೋಹಿತ್ ಭಟ್ ಸ್ಮಾರಕ ಭವನದಲ್ಲಿ ನಗರದ ಹಿರಿಯ ವೈದ್ಯರಾದ ಡಾ| ಜಿ.ಪಿ. ಪ್ರಭು, ಡಾ| ಅರುಣಾ ಪ್ರಭು ದಂಪತಿ, ಡಾ| ಪ್ರತಿಭಾ ಬಳಕೂರ, ಡಾ| ಅರುಣ ಕಾರ್ಕಳ, ಆಯುರ್ವೇದ ವೈದ್ಯ ಡಾ| ಮಹೇಶ ಪಂಡಿತ ಮತ್ತು ದಂತವೈದ್ಯ ಡಾ| ಎಂ.ಜಿ. ಹೆಗಡೆ ಅವರನ್ನು ಗೌರವಿಸಲಾಗುವುದು. ಹಿರಿಯ ವೈದ್ಯ ಡಾ| ಟಿ.ಎನ್. ಭಾಸ್ಕರ್, ವೈದ್ಯಕೀಯ ಸಂಘದ ಅಧ್ಯಕ್ಷ ಡಾ| ಅಶೋಕ ಯರಗುಡ್ಡಿ ಅತಿಥಿಗಳಾಗಿರುವರು. ಡಾ| ರಂಗನಾಥ ಪೂಜಾರಿ ಅಧ್ಯಕ್ಷತೆ ವಹಿಸುವರು. ರೋಟರಿ ಭವನದಲ್ಲಿ ಸಂಜೆ 5ಕ್ಕೆ ಕಾರ್ಯಕ್ರಮ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು
Hubballi: ಸಿಲಿಂಡರ್ ಸ್ಫೋಟ ಪ್ರಕರಣ… ಮತ್ತೋರ್ವ ಕೊನೆಯುಸಿರು, ಮೃತರ ಸಂಖ್ಯೆ 8ಕ್ಕೆ ಏರಿಕೆ
ದಕ್ಷಿಣ ಭಾರತದ ಕುಸ್ತಿ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಧಾರವಾಡದ ಹಳ್ಳಿ ಪೈಲ್ವಾನ್
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.