ಚೆನ್ನೈ-ಮುಂಬೈಗೆ ಬಸ್ ಸಂಚಾರ ಪುನಾರಂಭ
Team Udayavani, Aug 27, 2021, 9:06 PM IST
ಹುಬ್ಬಳ್ಳಿ: ಕೋವಿಡ್ ಲಾಕ್‌ಡೌನ್ ಕಾರಣದಿಂದ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿಯಿಂದ ಚೆನ್ನೈಗೆ ವೋಲ್ವೊ ಮತ್ತು ಮುಂಬಯಿಗೆ ಸ್ಲೀಪರ್ ಬಸ್ ಸಂಚಾರವನ್ನು ಪುನರ್ ಆರಂಭಿಸಲಾಗಿದೆ. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಬಸ್‌ಗಳನ್ನು ಹೆಚ್ಚಿಸಲಾಗಿದೆ ಎಂದು ವಾಯವ್ಯಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಕೋವಿಡ್ ಪ್ರಕರಣಗಳು ತಗ್ಗಿರುವ ಹಿನ್ನೆಲೆಯಲ್ಲಿ ಸರಕಾರ ರಾಜ್ಯದಿಂದ ತಮಿಳುನಾಡಿಗೆ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಚೆನ್ನೈಗೆ ವೋಲ್ವೋ ಬಸ್ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ. ಈ ಬಸ್ ರಾತ್ರಿ 10:30 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಮಧ್ಯಾಹ್ನ 1:30 ಗಂಟೆಗೆ ಚೆನ್ನೈ ತಲುಪಲಿದೆ.
ಮಧ್ಯಾಹ್ನ 3:15 ಗಂಟೆಗೆ ಚೆನ್ನೈದಿಂದ ಹೊರಟು ಮರುದಿನ ಬೆಳಗ್ಗೆ 7:00 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಪ್ರಯಾಣ ದರವು ಹುಬ್ಬಳ್ಳಿಯಿಂದ ಚೆನ್ನೈಗೆ 1440ರೂ., ಹುಬ್ಬಳ್ಳಿಯಿಂದ ಬೆಂಗಳೂರಿಗೆ840ರೂ., ಬೆಂಗಳೂರಿನಿಂದ ಚೆನ್ನೈಗೆ560ರೂ. ಆಗಿದೆ. ಮುಂಬಯಿಗೆ ತೆರಳುವ ಎಸಿ ಸ್ಲೀಪರ್ ಬಸ್ ಹುಬ್ಬಳ್ಳಿಯಿಂದ ರಾತ್ರಿ 8:30 ಗಂಟೆಗೆ ಹೊರಡುತ್ತದೆ. ಮರುದಿನ ಬೆಳಗ್ಗೆ 8:00 ಗಂಟೆಗೆ ಮುಂಬಯಿ ತಲುಪಲಿದೆ. ರಾತ್ರಿ 8:30 ಗಂಟೆಗೆ ಮುಂಬಯಿನಿಂದ ಹೊರಟು ಮರುದಿನ ಬೆಳಗ್ಗೆ 8:00 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.
ಪ್ರಯಾಣ ದರವು ಹುಬ್ಬಳ್ಳಿಯಿಂದ ಮುಂಬಯಿಗೆ 1132ರೂ.,ಪುಣೆಗೆ931ರೂ., ಬೆಳಗಾವಿಯಿಂದ ಮುಂಬಯಿಗೆ 972ರೂ., ಪುಣೆಗೆ760ರೂ. ಇದೆ. ಇದರೊಂದಿಗೆ ಈಗಾಗಲೆ ಕಾರ್ಯಾಚರಣೆಯಲ್ಲಿರುವ ಹುಬ್ಬಳ್ಳಿಯಿಂದ ಪಿಂಪ್ರಿಗೆ ತೆರಳುವ ಎಸಿ ಸ್ಲೀಪರ್ ಬಸ್ ಹುಬ್ಬಳ್ಳಿಯಿಂದ ರಾತ್ರಿ 9:30 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 6:30 ಗಂಟೆಗೆ ಪಿಂಪ್ರಿ ತಲುಪಲಿದೆ. ಅಲ್ಲಿಂದ ರಾತ್ರಿ 9:30 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 6:30 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಪ್ರಯಾಣ ದರವು ಹುಬ್ಬಳ್ಳಿಯಿಂದ ಪುಣೆಗೆ 965ರೂ., ಬೆಳಗಾವಿಯಿಂದ ಪುಣೆಗೆ 782ರೂ,. ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ಶಿರಡಿ ಮತ್ತಿತರ ಸ್ಥಳಗಳಿಗೆ ಐಷಾರಾಮಿ ಬಸ್ ಸಂಚಾರ ಆರಂಭಿಸಲಾಗುತ್ತದೆ.
ಮೀರಜ, ಈಚಲಕರಂಜಿ, ಸೊಲ್ಲಾಪುರ, ಬಾರ್ಸಿ, ಔರಂಗಾಬಾದ, ಪಂಢರಪುರ, ತುಳಜಾಪುರ ಮತ್ತಿತರ ಸ್ಥಳಗಳಿಗೆ ವೇಗದೂತ ಬಸ್ ಸಂಚಾರ ಮತ್ತೆ ಆರಂಭವಾಗಿದೆ. ಮೀರಜ ಮತ್ತು ಈಚಲಕರಂಜಿ ಬಸ್‌ಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ. ಇನ್ನುಳಿದ ಬಸ್‌ಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ. ಗೋವಾ ರಾಜ್ಯದ ವಾಸ್ಕೋ ಮತ್ತು ಮಡಗಾಂವ್‌ಗೆ ಬಸ್ ಸಂಚಾರ ಮತ್ತೆ ಆರಂಭಗೊಂಡಿದೆ. ಪಣಜಿಗೆ ಸಂಚರಿಸುವ ಬಸ್‌ಗಳನ್ನು ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂಗಡ ಬುಕ್ಕಿಂಗ್‌ಗೆ ರಿಯಾಯಿತಿ: ಅಂತಾರಾಜ್ಯ ಹಾಗೂ ರಾಜ್ಯದೊಳಗಿನ ದೂರದ ಮಾರ್ಗದ ಸಾರಿಗೆಗಳಿಗೆ ತಿತಿತಿ.ಞ?ಡಿಣಛಿ.åಟಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅಥವಾ ಹೊಸೂರು, ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿನ ಕೌಂಟರ್‌ಹಾಗೂಪ್ರಾಂಚೈಸಿಕೇಂದ್ರಗಳಲ್ಲಿಮುಂಗಡಬುಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ.
ಒಟ್ಟಿಗೆ ನಾಲ್ಕು ಅಥವಾ ಹೆಚ್ಚಿನ ಆಸನಗಳನ್ನು ಒಂದೇ ಟಿಕೆಟ್‌ನಲ್ಲಿ ಕಾಯ್ದಿರಿಸಿದರೆ ಮೂಲ ಪ್ರಯಾಣ ದರದಲ್ಲಿ ಶೇ.5 ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಬರುವ ಪ್ರಯಾಣಕ್ಕೆ ಒಮ್ಮೆಗೆ ಮುಂಗಡ ಬುಕ್ಕಿಂಗ್ ಮಾಡಿದರೆ ಬರುವಾಗಿನ ಪ್ರಯಾಣದ ಮೂಲ ಟಿಕೆಟ್ ದರದಲ್ಲಿ ಶೇ. 10 ರಿಯಾಯಿತಿ ನೀಡಲಾಗುತ್ತದೆಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.