ಮೂರ್‍ನಾಲ್ಕು ದಿನಗಳಲ್ಲಿ ಗ್ರಾಮೀಣಪ್ರದೇಶಕ್ಕೂ ಬಸ್ ಸೇವೆ: ಚೋಳನ್
Team Udayavani, May 20, 2020, 8:02 AM IST
ಹುಬ್ಬಳ್ಳಿ : ಸರಕಾರದ ಸೂಚನೆಯಂತೆ ವಿವಿಧ ಜಿಲ್ಲೆಗಳಿಗೆ ಬಸ್ ಸೇವೆ ಆರಂಭಿಸಲಾಗಿದ್ದು, ಮೂರ್‍ನಾಲ್ಕು ದಿನಗಳಲ್ಲಿ ಗ್ರಾಮೀಣ ಬಸ್ ಸೇವೆ ಆರಂಭಿಸಲು ಚಿಂತನೆ ನಡೆಸಲಾಗುವುದು ಎಂದು ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ಶೇ.30 ಬಸ್‌ಗಳನ್ನು ಮಾತ್ರ ಕಾರ್ಯಾಚರಣೆಗೊಳಿಸಲಾಗಿದೆ. ಹಂತ ಹಂತವಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ. ಎರಡ್ಮೂರು ದಿನಗಳಲ್ಲಿ ನಿಗಮದ ಶೇ.50 ಬಸ್ ಸಂಚಾರ ಆರಂಭವಾಗಲಿದೆ. ಶೇ.100 ಅನುಸೂಚಿಗಳು ಕಾರ್ಯಾಚರಣೆಗೊಳ್ಳಲು ಕನಿಷ್ಟ 2-3 ತಿಂಗಳು ಬೇಕಾಗುತ್ತದೆ ಎಂದರು. ಮಾಸಿಕ ಪಾಸ್ ಕಷ್ಟ: ಒಂದು ಬಸ್‌ನಲ್ಲಿ 30 ಪ್ರಯಾಣಿಕರನ್ನು ಸಾಗಿಸಿದರೆ ಸಾಕಷ್ಟು ನಷ್ಟವಾಗಲಿದ್ದು, ಸರಕಾರ ಭರಿಸುವುದಾಗಿ ಭರವಸೆ ನೀಡಿದೆ. ನಷ್ಟದ ಪ್ರಮಾಣ ತಗ್ಗಿಸಲು ಕೈಗಾರಿಕೆ, ಎಪಿಎಂಸಿ ಸೇರಿದಂತೆ ಇನ್ನಿತರ ಕಚೇರಿಗಳಿಗೆ ಬಸ್ ಸೌಲಭ್ಯ, ಪಾರ್ಸಲ್ ಸೇವೆಗೆ ಉತ್ತೇಜನ ನೀಡಲಾಗುವುದು. ಸದ್ಯದ ದರದಲ್ಲಿ ಮಾಸಿಕ ಪಾಸ್ ಸೇವೆ ನೀಡುವುದು ಕಷ್ಟ. ವಿದ್ಯಾರ್ಥಿ ಪಾಸ್ ದರವನ್ನು ಸರಕಾರ ನಿರ್ಧರಿಸಲಿದೆ ಎಂದರು.
ನಗದು ರಹಿತ ವ್ಯವಹಾರಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಮೂರ್‍ನಾಲ್ಕು ಕಂಪನಿ ಜತೆ ಚರ್ಚಿಸಲಾಗಿದೆ. ಪೇಟಿಎಂ, ಗೂಗಲ್ ಪೇ ಮಾದರಿ ಹಣ ನೀಡಿ ಟಿಕೆಟ್ ಪಡೆವ ಸೌಲಭ್ಯ ಪರಿಚಯಿಸುವ ಕೆಲಸ ನಡೆಯುತ್ತಿದೆ. ಮೂರ್‍ನಾಲ್ಕು ದಿನಗಳಲ್ಲಿ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು. ಚಿಲ್ಲರೆ ಸಮಸ್ಯೆ ನಿವಾರಣೆಗೆ ಟಿಕೆಟ್ ದರವನ್ನು ಸಮ ಪ್ರಮಾಣಕ್ಕೆ (9ರೂ. ಇದ್ದರೆ 10 ರೂ.) ತರುವ ಕೆಲಸ ಮಾಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.