ಧಾರವಾಡ ತಾಲೂಕು ಕಚೇರಿಗೆ ಕ್ಯಾಮೆರಾ ಕಣ್ಗಾವಲು
Team Udayavani, Nov 21, 2017, 1:08 PM IST
ಧಾರವಾಡ: ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದರಿಂದ ಪಾರದರ್ಶಕ ಆಡಳಿತ ಹಾಗೂ ಮೇಲ್ವಿಚಾರಣೆಗೆ ಸಹಾಯಕವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು.
ನಗರದ ಧಾರವಾಡ ತಾಲೂಕು ಕಚೇರಿಯಲ್ಲಿ ನೂತನವಾಗಿ ಆಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕು ಕಚೇರಿ ಆವರಣದಲ್ಲಿರುವ ತಹಶೀಲ್ದಾರ್ ಕಾರ್ಯಾಲಯ, ಸಿಬ್ಬಂದಿ, ಆಹಾರ, ಭೂಮಿ ಹಾಗೂ ಶಾಖೆಗಳು, ಅಭಿಯಂತ ಇಲಾಖೆ, ಕೆಎಲ್ಆರ್ ವಿಭಾಗ, ರೆಕಾರ್ಡ್ ರೂಮ್ ಸೇರಿದಂತೆ ಒಟ್ಟು 25 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದರು.
ಸಿಸಿಟಿವಿ ಅಳವಡಿಸಿರುವ ಮಾಡರ್ನ್ ಮಲ್ಟಿ ಟೆಕ್ ಕಂಪನಿಯು ನೂತನ ತಂತ್ರಜ್ಞಾನ ಬಳಸಿ ಜಿಡಿಎಂಸ್ ಮೊಬೈಲ್ ಆ್ಯಪ್ ಅಭಿವೃದ್ದಿ ಪಡಿಸಿದ್ದು, ಸಿಸಿಟಿವಿ ಕಾರ್ಯಚರಣೆಯನ್ನು ಮೊಬೈಲ್ನಿಂದಲೂ ವೀಕ್ಷಿಸಬಹುದು ಎಂದು ತಿಳಿಸಿದರು. ತಹಶೀಲ್ದಾರ್ ಪ್ರಕಾಶ ಕುದರಿ ಮಾತನಾಡಿ, ಸಿಸಿ ಟಿವಿಯನ್ನು 3ಲಕ್ಷ ವೆಚ್ಚದಲ್ಲಿ ಅಳವಡಿಸಲಾಗಿದ್ದು,
ಇದಕ್ಕೆ ಪ್ರತ್ಯೇಕವಾಗಿ ಯುಪಿಎಸ್, ಜನರೇಟರ್ಗಳು ಇವೆ. ಸಿಸಿಟಿವಿ ಅಳವಡಿಕೆಯಿಂದ ಕಚೇರಿ ಸಿಬ್ಬಂದಿಯಲ್ಲಿ ಶಿಸ್ತು ಮತ್ತು ಆಡಳಿತದಲ್ಲಿ ಪಾರದರ್ಶಕತೆ ಮೂಡುತ್ತದೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾ ಧಿಕಾರಿ ಮಹೇಶ ಕರ್ಜಗಿ, ಕಂದಾಯ ನಿರೀಕ್ಷಕ ಶ್ರೀಧರ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ
ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್ ಅರೆಸ್ಟ್! ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ
B.Z. Zameer Ahmed Khan;ನಾನು ಶುದ್ದ ಹಿಂದೂಸ್ಥಾನಿ ಭಾರತೀಯ, 24 ಕ್ಯಾರೆಟ್ ಗೋಲ್ಡ್..
Waqf; ಬಿಜೆಪಿ ಸರಕಾರದ ಅವಧಿಯಲ್ಲಿ ನೋಟಿಸ್ ನೀಡಿದ್ದರೂ ತಪ್ಪು: ಪ್ರಹ್ಲಾದ ಜೋಶಿ
Waqf Land Issue; ಯಾವ ಕಾರಣಕ್ಕೂ ರೈತರ ಜಮೀನು ಮುಟ್ಟಲ್ಲ: ಜಮೀರ್ ಅಹ್ಮದ್
MUST WATCH
ಹೊಸ ಸೇರ್ಪಡೆ
Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು
Pro Kabaddi: ದಬಾಂಗ್ ಡೆಲ್ಲಿಯನ್ನು ಕೆಡವಿದ ಪಾಟ್ನಾ ಪೈರೆಟ್ಸ್
India Vs Newzeland Test: ವಾಂಖೇಡೆ: ರೋಹಿತ್ ಶರ್ಮಾ ಪಡೆಗೆ ಅಗ್ನಿಪರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.