ಕನ್ನಡ ಬಳಕೆ ಹೆಚ್ಚಾಗಲಿ: ಭಾರತಿ
ಸಿಬ್ಬಂದಿ ಕನ್ನಡ ಮಾತನಾಡುವ, ಉಳಿಸುವ, ಬೆಳೆಸುವ ಸಂಕಲ್ಪ ಮಾಡಿದರು.
Team Udayavani, Oct 29, 2021, 2:11 PM IST
ಧಾರವಾಡ: ಮಾತೃಭಾಷೆಯಲ್ಲಿ ಜ್ಞಾನದ ಗ್ರಹಿಕೆ ಸುಲಭವಾಗುತ್ತದೆ. ಜತೆಗೆ ಪರಿಪೂರ್ಣತೆ ಪಡೆದು ಜಗತ್ತಿನ ಯಾವುದೇ ಜ್ಞಾನ ಸುಲಭವಾಗಿ ಪಡೆಯಬಲ್ಲರು. ಕನ್ನಡಿಗರಾದ ನಾವು ಕನ್ನಡ ಬಳಸುವುದನ್ನು ಹೆಚ್ಚು ಮಾಡುತ್ತ ಹೋಗಬೇಕು. ನಿತ್ಯ ವ್ಯವಹಾರದಲ್ಲಿ ಕನ್ನಡ ಬಳಸಿದರೆ ಅನ್ಯ ಭಾಷಿಗರು ಕನ್ನಡ ಕಲಿಯಲು ಸಾಧ್ಯ ಎಂದು ಪ್ರಾಚಾರ್ಯರಾದ ಭಾರತಿ ಶಾನಭಾಗ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್ ಎಸ್‌ನ ಆರ್.ಎಸ್. ಹುಕ್ಕೇರಿಕರ ಮಹಾವಿದ್ಯಾಲಯದಲ್ಲಿ ಮಾತಾಡ್ ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು ಕನ್ನಡ ರಾಜ್ಯೋತ್ಸವ ಅಭಿಯಾನ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವದಾದ್ಯಂತ ಏಕಕಾಲದಲ್ಲಿ ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯುತ್ತಿರುವುದು ಉತ್ತಮ ವಿಚಾರ ಎಂದರು.
ಈ ಸಂದರ್ಭದಲ್ಲಿ ಕನ್ನಡ ನಾಡಗೀತೆ, ಬಾರಿಸು ಕನ್ನಡ ಡಿಂಡಿಮವ, ನಿತ್ಯೋತ್ಸವ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದರು. ಗೀತ ಗಾಯನ ಕಾರ್ಯಕ್ರಮದಲ್ಲಿ ಸೇರಿದ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಕನ್ನಡ ಮಾತನಾಡುವ, ಉಳಿಸುವ, ಬೆಳೆಸುವ ಸಂಕಲ್ಪ ಮಾಡಿದರು.
ಡಾ|ಶಿವಾನಂದ ಟವಳಿ ಸಂಕಲ್ಪದ ಪ್ರತಿಜ್ಞಾ ವಿಧಿ ನಡೆಸಿಕೊಟ್ಟರು. ಸಂಯೋಜಕ ಡಾ| ಜಿ.ಕೃಷ್ಣಮೂರ್ತಿ, ಡಾ|ಗೋವಿಂದರಾಜ ತಳಕೋಡ, ಡಾ|ಸಂಗಯ್ಯ ಎಸ್. ಇದ್ದರು.
ಬೇಂದ್ರೆ ಭವನ: ಕನ್ನಡಕ್ಕಾಗಿ ನಾನು ಅಭಿಯಾನ ಅಂಗವಾಗಿ ನಗರದ ಬೇಂದ್ರೆ ಭವನದಲ್ಲಿ ಗುರುವಾರ ಕನ್ನಡ ಗೀತ ಗಾಯನ ಕಾರ್ಯಕ್ರಮ ಜರುಗಿತು. ಡಾ|ಡಿ.ಎಂ. ಹಿರೇಮಠ ಅವರ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಂಗೀತಾ ಎಲ್. ನಾಯ್ಕ, ಅಮೋದಿನಿ ಮಹಾಲೆ, ಪ್ರಸನ್ನ ಸಿಂಧಗಿ ಕನ್ನಡ ಗೀತಗಳ ಗಾಯನ ಪ್ರಸ್ತುತ ಪಡಿಸಿದರು. ಟ್ರಸ್ಟ್ ವ್ಯವಸ್ಥಾಪಕರ ಪ್ರಕಾಶ ಬಾಳಿಕಾಯಿ ವಂದಿಸಿದರು.
ಡಯಟ್: ಧಾರವಾಡದ ಶಿಕ್ಷಕಕಿಯರ ಸರಕಾರಿ ತರಬೇತಿ ವಿದ್ಯಾಲಯದಲ್ಲಿ ರಾಜ್ಯ ಸರಕಾರದ ಆದೇಶದಂತೆ ಕನ್ನಡ ರಾಜ್ಯೋತ್ಸವ ನಿಮಿತ್ತ ಜರುಗಿದ ಕನ್ನಡ ಗೀತ ಗಾಯನದ ಸಮಾವೇಶದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗೀಯ ಸಹ ನಿರ್ದೇಶಕ ವಾಲ್ಟರ್ ಹಿಲೇರಿ ಡಿಮೆಲ್ಲೊ ಪಾಲ್ಗೊಂಡು ಕನ್ನಡಮ್ಮನಿಗೆ ನುಡಿ ನಮನ ಸಲ್ಲಿಸಿದರು.ತರಬೇತಿ ವಿದ್ಯಾಲಯದ ಪ್ರಾಚಾರ್ಯ ಸಂಜೀವ ಬಿಂಗೇರಿ, ಶಿಕ್ಷಕಿಯರ ಸರಕಾರಿ ವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಸೇರಿದಂತೆ ಶಿಕ್ಷಣ ಇಲಾಖೆ ವಿವಿಧ ಹಂತದ ಅಧಿಕಾರಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.