3 ಮನೆಗಳಿಗೆ ಕನ್ನ ಹಾಕಿದ್ದ ಕಳ್ಳರ ಸೆರೆ
Team Udayavani, Jul 22, 2019, 9:56 AM IST
ಧಾರವಾಡ: ಪೊಲೀಸ್ ತಂಡದೊಂದಿಗೆ ಬಂಧಿತ ಆರೋಪಿಗಳು.
ಧಾರವಾಡ: ಮೂರು ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂರು ಜನ ಕಳ್ಳರನ್ನು ಬಂಧಿಸುವಲ್ಲಿ ವಿದ್ಯಾಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಲ್ಲಿಯ ಲಕ್ಷ್ಮೀಸಿಂಗನಕೇರಿಯ ಮಂಜುನಾಥ ಅರ್ಜುನ ಹುಲ್ಲೂರ, ಶಾನು ರೆಹಮಾನಸಾಬ ಹಾಲಬಾವಿ ಮತ್ತು ರಾಜು ರಾಮಣ್ಣ ಅಮ್ಮಿನಬಾವಿ ಬಂಧಿತ ಆರೋಪಿಗಳು. 2-3 ತಿಂಗಳ ಹಿಂದೆಯಷ್ಟೇ ಲೋಕಾಯುಕ್ತ ಎಸ್‌ಪಿ ಅವರ ಮನೆಗೆ ಕನ್ನ ಹಾಕಿದ್ದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಕಳೆದ ಒಂದು ತಿಂಗಳ ಹಿಂದೆ ಜಾಮೀನು ಮೇಲೆ ಹೊರ ಬಂದಿದ್ದ ಇವರು ಮತ್ತೆ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿದೆ. ಜೂ.2ರಂದು ವಿದ್ಯಾಗಿರಿ ಠಾಣಾ ವ್ಯಾಪ್ತಿಯ ವೀರಭದ್ರೇಶ್ವರ ಪಾರ್ಕ್ ಹತ್ತಿರದ ವೀರಾತಯ್ಯ ಬಳಗೋಡ ಅವರ ಮನೆಯ ಬೀಗ ಮುರಿದು 2.85 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಬಳಿಕ ಜೂ.27ರಂದು ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ದಿಕ್ಷಿತವಾಡಾದಲ್ಲಿಯ ಮಂಜುಳಾ ಕುಲಕರ್ಣಿ ಅವರ ಮನೆಗೆ ಕನ್ನ ಹಾಕಿ 47,500 ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಇದಾದ ಬಳಿಕ ಜು.7ರಂದು ಶಹರ ಠಾಣಾ ವ್ಯಾಪ್ತಿಯ ಚರಂತಿಮಠ ಗಾರ್ಡ್‌ನ್‌ನಲ್ಲಿಯ ಪ್ರಸನ್ನ ಪ್ರಕಾಶ ನರೇಂದ್ರ ಅವರ ಮನೆ ಬೀಗ ಮುರಿದು ಒಳ ನುಗ್ಗಿ ಮನೆಯಲ್ಲಿದ್ದ 4,62,500 ರೂ.ಗಳ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಈ ಮೂರೂ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು ಕಳ್ಳರನ್ನು ಬಂಧಿಸಿದ್ದಾರೆ.ಇನ್ಸ್‌ಪೆಕ್ಟರ್ ಅಲ್ತಾಫಹುಸೇನ ಮುಲ್ಲಾ ನೇತೃತ್ವದಲ್ಲಿ ಶಿವಾನಂದ ಬನ್ನಿಕೊಪ್ಪ, ಬಿ.ಎಂ. ಅಂಗಡಿ, ಎ.ಎಂ. ಹುಯಿಲಗೋಳ, ಎ.ಬಿ. ನರೇಂದ್ರ, ಎಂ.ಎಫ್. ನದಾಫ, ಐ.ಪಿ. ಬುರ್ಜಿ, ಆರ್.ಕೆ. ಅತ್ತಾರ, ಎಂ.ಸಿ. ಮಂಕಣಿ, ಡಿ.ಎಸ್. ಸಾಂಗ್ಲಿಕರ, ಎಂ.ಜಿ. ಪಾಟೀಲ ಅವರಿದ್ದ ತಂಡ ಈ ಕಾರ್ಯ ಮಾಡಿದೆ. ಬಂಧಿತ ಆರೋಪಿಗಳಿಂದ 230 ಗ್ರಾಂ ಚಿನ್ನ, 690 ಗ್ರಾಂ ಬೆಳ್ಳಿ ಸೇರಿದಂತೆ 7 ಲಕ್ಷ 10 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಸಹಾಯಕ ಆಯುಕ್ತ ಎಂ.ಎನ್. ರುದ್ರಪ್ಪ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್ ಹೋರಾಟ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.