ಶೇ.50ರಷ್ಟು ಕಡಿಮೆ ದರದಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆ
Team Udayavani, Feb 26, 2020, 11:24 AM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ನರರೋಗಕ್ಕೆ ಸಂಬಂಧಿಸಿದಂತೆ ಒಂದೇ ಸೂರಿನಡಿ ಎಲ್ಲ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಂಸ್ಕಾರ ಹೆಸರಲ್ಲಿ ಸೇವೆಗೆ ಮುಂದಾಗಿದ್ದ ಮಹಾರಾಷ್ಟ್ರದ ಕನೇರಿಯ ಶ್ರೀ ಸಿದ್ಧಗಿರಿ ಧರ್ಮ ಆಸ್ಪತ್ರೆ, ಇದೀಗ ಹೃದಯಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಚಿಕಿತ್ಸೆ ಒಂದೇ ಸೂರಿನಲ್ಲಿ, ಅತ್ಯಂತ ಕಡಿಮೆ ದರದಲ್ಲಿ ಸೇವೆಗೆ ಮುಂದಾಗಿದೆ. ಮಾ.18ರವರೆಗೆ ಉಚಿತ ಎಂಜಿಯೋಗ್ರಾಮ್ ಕಾರ್ಯ ಹಮ್ಮಿಕೊಂಡಿದೆ.
ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿಯ ಶ್ರೀ ಕಾಡಸಿದ್ದೇಶ್ವರ ಮಠದ ಸಿದ್ಧಗಿರಿ ಧರ್ಮ ಆಸ್ಪತ್ರೆ ಸರ್ಕಾರಿ ಯೋಜನೆಗಳಲ್ಲಿ ಬಡವರಿಗೆ ಉಚಿತ ಸೇವೆ ಜತೆಗೆ, ಎಲ್ಲ ವರ್ಗಗಳ ಜನರಿಗೂ ಅತ್ಯಂತ ಕಡಿಮೆ ದರದಲ್ಲಿ ವೈದ್ಯಕೀಯ ಚಿಕಿತ್ಸೆಯ ಧರ್ಮಾರ್ಥ ಸೇವೆಯಲ್ಲಿ ತೊಡಗಿಕೊಂಡಿದೆ. ನಿತ್ಯವೂ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನೂರಾರು ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇದೀಗ ಸಿದ್ಧಗಿರಿ ಧರ್ಮ ಆಸ್ಪತ್ರೆ ದೇಶದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ಹೃದಯಕ್ಕೆ ಸಂಬಂಧಿಸಿದ ವೈದ್ಯಕೀಯ ಸೇವೆ ನೀಡಲು ಮುಂದಾಗಿದ್ದು, ಅತ್ಯಾಧುನಿಕ ಯಂತ್ರೋಪಕರಣಗಳು ಹಾಗೂ ದೇಶದಲ್ಲೇ ಖ್ಯಾತವೆತ್ತ ವೈದ್ಯ ಸೇವೆಯನ್ನು ಜನರಿಗೆ ನೀಡುವ ಕಾರ್ಯ ಮಾಡುತ್ತಿದೆ.
ಉಚಿತ ಎಂಜಿಯೋಗ್ರಾಮ್: ಸಿದ್ಧಗಿರಿ ಧರ್ಮ ಆಸ್ಪತ್ರೆಯಲ್ಲಿ ಮಾ.18ರವರೆಗೆ ಉಚಿತ ಎಂಜಿಯೋಗ್ರಾಮ್ ಶಿಬಿರ ಹಮ್ಮಿಕೊಳ್ಳಲಾಗಿದೆ. ಯಾವುದೇ ವರ್ಗದವರಿದ್ದರೂ ಉಚಿತವಾಗಿ ಎಂಜಿಯೋಗ್ರಾಮ್ ಮಾಡಿಕೊಳ್ಳಬಹುದಾಗಿದೆ. ಕರ್ನಾಟಕ, ಮಹಾರಾಷ್ಟ್ರ ಇನ್ನಿತರ ಕಡೆಯ ಎಷ್ಟೇ ಜನರು ಬಂದರೂ ಎಂಜಿಯೋಗ್ರಾಮ್ ಉಚಿತವಾಗಿ ಕೈಗೊಳ್ಳಲಾಗುವುದು. ವಿಶೇಷವಾಗಿ ವಾಜಪೇಯಿ ಆರೋಗ್ಯ ಶ್ರೀ, ಆಯುಷ್ಮಾನ್ ಭಾರತ ಕಾರ್ಡ್ ಇಲ್ಲದ ಬಡವರು ಸಹ ಉಚಿತ ತಪಾಸಣೆ ಸೌಲಭ್ಯ ಪಡೆಯಬಹುದಾಗಿದೆ. ಸಿದ್ಧಗಿರಿ ಧರ್ಮ ಆಸ್ಪತ್ರೆ ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದಲ್ಲೇ ಅತ್ಯಾಧುನಿಕ ಕ್ಯಾತಲ್ಯಾಬ್ ಸೌಲಭ್ಯ ಹೊಂದಿದೆ.
ಖ್ಯಾತ ಹೃದ್ರೋಗ ತಜ್ಞ ಡಾ| ಅಭಿಜಿತ್ ಶೆಳ್ಕೆ ಸೇರಿದಂತೆ ನಾಲ್ವರು ಹೃದ್ರೋಗ ತಜ್ಞರು ಇದ್ದರೆ, ಬಾಂಬೆ ಆಸ್ಪತ್ರೆಯಲ್ಲಿ ರಾಷ್ಟ್ರಮಟ್ಟದ ಖ್ಯಾತಿಯ ಹೃದಯ ಶಸ್ತ್ರಚಿಕಿತ್ಸಕ ತಜ್ಞ ಡಾ| ಕೋಲೆ ಸೇರಿದಂತೆ ಇಬ್ಬರು ಶಸ್ತ್ರಚಿಕಿತ್ಸಕರು ಇದ್ದಾರೆ. ಡಾ| ಕೋಲೆ ಅವರು ತಮ್ಮ ನಿವೃತ್ತಿ ವಯಸ್ಸಿನಲ್ಲಿ ಧರ್ಮಾರ್ಥ ಆಸ್ಪತ್ರೆ ಆರಂಭಿಸುವ ಚಿಂತನೆ ಹೊಂದಿದ್ದರಾದರೂ, ಸಿದ್ಧಗಿರಿ ಧರ್ಮ ಆಸ್ಪತ್ರೆ ಸೇವೆಯನ್ನು ಗಮನಿಸಿ, ತಮ್ಮ ಆಸ್ಪತ್ರೆ ಆರಂಭ ಚಿಂತನೆ ಬದಿಗಿರಿಸಿ, ಶ್ರೀಮಠದ ಆಸ್ಪತ್ರೆಯಲ್ಲಿಯೇ ಪೂರ್ಣಾವಧಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕರ್ನಾಟಕದವರಿಗೂ ಸೇವೆ: ಹೃದಯ, ನರರೋಗ, ಕ್ಯಾನ್ಸರ್, ಮೂತ್ರಪಿಂಡ ಸಮಸ್ಯೆಗಳ ಬಗ್ಗೆ ಉಚಿತಾಗಿಯೇ ಸಿದ್ಧಗಿರಿ ಧರ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಕರ್ನಾಟಕ ಸರ್ಕಾರ ಆಯುಷ್ಮಾನ್ ಭಾರತ ಅಡಿಯಲ್ಲಿ ಚಿಕಿತ್ಸೆ ಪಡೆಯಲು ಸಿದ್ಧಗಿರಿ ಧರ್ಮ ಆಸ್ಪತ್ರೆಗೂ ಅವಕಾಶ ಕಲ್ಪಿಸಿದೆ. ಮಹಾರಾಷ್ಟ್ರದ ಗಡಿ ಭಾಗದವರಷ್ಟೇ ಅಲ್ಲದೆ, ರಾಜ್ಯದ ಯಾವುದೇ ಭಾಗದವರು ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಕಡು ಬಡವರಿಗೆ ಮಹತ್ವದ ಪ್ರಯೋಜನವೆಂದರೆ, ಔಷಧಿ ಸೇರಿದಂತೆ ಶಸ್ತ್ರಚಿಕಿತ್ಸೆ ಹಾಗೂ ವೈದ್ಯಕೀಯ ಸೇವೆ ಉಚಿವಾಗಿ ದೊರೆಯಲಿದೆ.
ರೋಗಿಗೆ ಆಸ್ಪ್ರತ್ರೆಯಲ್ಲಿ ಊಟ ದೊರೆತರೆ, ರೋಗಿಯ ಜತೆ ಬಂದವರಿಗೆ ಶ್ರೀಮಠದಲ್ಲಿ ಉಚಿತ ಪ್ರಸಾದ ದೊರೆಯುತ್ತದೆ. ಚಿಕಿತ್ಸೆ ಅಗತ್ಯ ಇದ್ದವರು ಇದರ ಪ್ರಯೋಜನ ಪಡೆಯಬಹುದಾಗಿದೆ. ಆಧಾರ ಕಾರ್ಡ್, ಆಯುಷ್ಮಾನ್ ಕಾರ್ಡ್ ಸೇರಿದಂತೆ ಚಿಕಿತ್ಸೆ ಪಡೆಯಲು ನಿಯಮದಡಿಯಲ್ಲಿ ಇರುವ ದಾಖಲಾತಿ, ಶಿಫಾರಸು ಪತ್ರಗಳನ್ನು ತೆಗೆದುಕೊಂಡು ಹೋದರೆ ಸಾಕು, ಚಿಕಿತ್ಸೆ ದೊರೆಯಲಿದೆ. ಸಿದ್ಧಗಿರಿ ಧರ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಮಾಹಿತಿಗಾಗಿ (ಮೊ.09764765628/ 09403667177)ಗೆ ಸಂಪರ್ಕಿಸಬಹುದಾಗಿದೆ.
50 ಸಾವಿರ ರೂ.ಗೆ ಎಂಜಿಯೋಪ್ಲಾಸ್ಟ್ : ಎಂಜಿಯೋಪ್ಲಾಸ್ಟ್ ಮಾಡಿಸಲು ಸಿದ್ಧಗಿರಿ ಧರ್ಮ ಆಸ್ಪತ್ರೆಯಲ್ಲಿ ವಿದೇಶದ ಸ್ಟೆಂಟ್ ಸೇರಿದಂತೆ ಒಟ್ಟಾರೆ ಅಳವಡಿಕೆ ಹಾಗೂ ಔಷಧಿ ಸೇರಿ ಕೇವಲ 50 ಸಾವಿರ ರೂ.ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಬೇರೆ ಕಡೆಗಳಲ್ಲಿ ಇದಕ್ಕೆ ಹೆಚ್ಚಿನ ಹಣ ಪಡೆಯಲಾಗುತ್ತಿದೆಯಾದರೂ, ಹೆಚ್ಚಿನ ಹಣ ಕೊಡಲು ಸಾಧ್ಯವಾಗದ ಮಧ್ಯಮ ವರ್ಗ ಕುಟುಂಬಗಳಿಗೆ ಇದು ಪ್ರಯೋಜನಕಾರಿ ಆಗಲಿದೆ. ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗೂ ಬೇರೆ ಆಸ್ಪತ್ರೆಗಳಿಗೆ ಹೋಲಿಸಿದರೆ ಶೇ.50ರಷ್ಟು ಕಡಿಮೆ ದರದಲ್ಲಿ ಚಕಿತ್ಸೆ ದೊರೆಯುತ್ತಿದೆ.
ದುಬಾರಿ ವೆಚ್ಚದ ಕಾರಣಕ್ಕೆ ಬಡವರು, ನಿರ್ಗತಿಕರು ಆರೋಗ್ಯ ಸೇವೆಯಿಂದ ವಂಚಿತರಾಗಬಾರದು, ಪರಿತಪಿಸಬಾರದು ಎಂಬ ಉದ್ದೇಶದಿಂದ ಸಿದ್ಧಗಿರಿ ಧರ್ಮ ಆಸ್ಪತ್ರೆ ಸರ್ಕಾರಿ ಯೋಜನೆಗಳಲ್ಲದೆ, ಇತರರಿಗೂ ಅತ್ಯಂತ ಕಡಿಮೆ ದರದಲ್ಲಿ ವೈದ್ಯಕೀಯ ಸೇವೆ ನೀಡುತ್ತಿದೆ. ಹೃದ್ರೋಗ, ನರ ಸಂಬಂಧಿ ಇನ್ನಿತರ ಶಸ್ತ್ರಚಿಕಿತ್ಸೆಗಳಿಗೆ ಶೇ.40-50ರಷ್ಟು ಕಡಿಮೆ ವೆಚ್ಚದಲ್ಲಿ ಸೇವೆ ದೊರೆಯುತ್ತಿದೆ. ಕಣ್ಣಿನ ಪೊರೆ ತೆಗೆಯುವ ಶಸ್ತ್ರಚಿಕಿತ್ಸೆ ಕೇವಲ 3 ಸಾವಿರ ರೂ.ಗಳಲ್ಲಿ ಮಾಡಲಾಗುತ್ತಿದೆ. ಕರ್ನಾಟಕದವರು ಅದರಲ್ಲೂ ಉತ್ತರ ಕರ್ನಾಟಕದವರು ಇದರ ಪ್ರಯೋಜನ ಪಡೆಯದುಕೊಳ್ಳಬಹುದು. –ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿ ಮಠ
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.