ನಿರಂತರ ಕಲಿಕಾ ಪ್ರವೃತ್ತಿಯಿಂದ ವೃತ್ತಿ ನೈಪುಣ್ಯ ಸಾಧ್ಯ: ಕೊಕಾಟೆ
Team Udayavani, Jun 7, 2017, 4:47 PM IST
ಹುಬ್ಬಳ್ಳಿ: ನಿರಂತರ ಕಲಿಕೆಯಿಂದ ಮಾತ್ರ ವೃತ್ತಿ ನೈಪುಣ್ಯತೆ ಗಳಿಸಲು ಸಾಧ್ಯ ಎಂದು ಬೆಳಗಾವಿ ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಸಿ.ಕೆ.ಕೊಕಾಟೆ ಹೇಳಿದರು. ಬಿ.ವಿ.ಭೂಮರೆಡ್ಡಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸದಾ ಆಶಾವಾದಿಯಾಗಿರಬೇಕು. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು. ನಿರಾಶಾವಾದಿಗಳು ಅವಕಾಶಗಳಲ್ಲಿ ಸಮಸ್ಯೆಗಳನ್ನು ಕಂಡರೆ, ಆಶಾವಾದಿಗಳು ಸಮಸ್ಯೆಗಳಲ್ಲೂ ಅವಕಾಶಗಳನ್ನು ಕಂಡುಕೊಳ್ಳುತ್ತಾರೆ. ಸಮಸ್ಯೆಗಳನ್ನು ನಗುಮೊಗದಿಂದಲೇ ಬಗೆಹರಿಸುವುದನ್ನು ರೂಢಿಸಿಕೊಳ್ಳಬೇಕು.
ವೈಫಲ್ಯಗಳಿಂದ ನಾವು ಎದೆಗುಂದದೇ ಅನುಭವ ಪಡೆದು ಪಾಠಗಳನ್ನು ಕಲಿಯುತ್ತ ಯಶಸ್ಸಿನತ್ತ ಸಾಗಬೇಕು ಎಂದರು. ಪದವಿ ನಂತರ ಉದ್ಯೋಗಕ್ಕಾಗಿ ಯಾವುದೇ ದೇಶಕ್ಕೆ ಹೋದರೂ ಚಿಂತೆಯಿಲ್ಲ. ಆದರೆ ನಮ್ಮ ಮಾತೃಭೂಮಿ ಬಗ್ಗೆ ಸದಾ ಹೆಮ್ಮೆ ಇರಬೇಕು. ನಮ್ಮ ದೇಶದ ಒಳಿತಿಗಾಗಿ ಕೈಲಾದ ಕೊಡುಗೆ ನೀಡಬೇಕು. ಪಾಲಕರು ಹಾಗೂ ಶಿಕ್ಷಕರ ಘನತೆ ಹೆಚ್ಚಿಸುವ ಕಾರ್ಯ ಮಾಡಬೇಕು.
ಅವಕಾಶಗಳು ಸಾಕಷ್ಟಿದ್ದು, ವೃತ್ತಿ ಕೌಶಲ ಗಳಿಸಿಕೊಂಡು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಧಾರವಾಡ ಐಐಟಿ ಪ್ರಾಧ್ಯಾಪಕ ಡಾ| ಎಸ್.ವಿ.ಪ್ರಭು ಮಾತನಾಡಿ, ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ಎಂಜಿನಿಯರಿಂಗ್ ಪದವೀಧರರು ಸಂಶೋಧನಾ ಕ್ಷೇತ್ರಕ್ಕೆ ಬರುವುದು ಅವಶ್ಯ ಎಂದರು.
ಕೆಎಲ್‌ಇ ಸಂಸ್ಥೆ ಅಧ್ಯಕ್ಷ ಡಾ| ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿ ಮಾತನಾಡಿ, 1000 ಜನ ಪದವಿ ಪಡೆದವರಲ್ಲಿ 900ಕ್ಕೂ ಹೆಚ್ಚು ಜನರು ಉದ್ಯೋಗ ಪಡೆದಿರುವುದು ಸಂತಸದ ಸಂಗತಿ. ಪಾಲಕರಿಗೆ ಹಾಗೂ ಕಾಲೇಜಿಗೆ ಕೀರ್ತಿ ತರುವ ಕೆಲಸವನ್ನು ಪದವೀಧರರು ಮಾಡಬೇಕು ಎಂದರು.
ಬಿ.ವಿ.ಭೂಮರೆಡ್ಡಿ ಎಂಜಿನಿಯರಿಂಗ್ ಕಾಲೇಜು ಯಾವುದೇ ಐಐಟಿಗೂ ಕಡಿಮೆಯಿಲ್ಲ ಎಂಬುದನ್ನು ರತನ್ ಟಾಟಾ ಹಾಗೂ ನಾರಾಯಣ ಮೂರ್ತಿ ಹೇಳಿದ್ದಾರೆ. ಇದಕ್ಕೆ ಉತ್ತಮ ಬೋಧಕರು ಹಾಗೂ ಉತ್ತಮ ವಿದ್ಯಾರ್ಥಿಗಳೇ ಕಾರಣ. ಮುಂದಿನ 5 ವರ್ಷಗಳಲ್ಲಿ ಕೆಎಲ್‌ಇ ತಾಂತ್ರಿಕ ವಿವಿ ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆಯುವುದರಲ್ಲಿ ಸಂದೇಹವಿಲ್ಲ ಎಂದರು.
ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಎಲ್‌ಇ ವಿದ್ಯಾರ್ಥಿಗಳಿಗೆ ಮೂರು ಸವಾಲು ಹಾಕಿದ್ದಾರೆ. ಒಲಿಂಪಿಕ್ಸ್ ಪದಕ ಗೆಲ್ಲುವುದು, ಸಂಶೋಧನೆಯಲ್ಲಿ ಅಪ್ರತಿಮ ಸಾಧನೆ ಹಾಗೂ ಅಂತಾರಾಷ್ಟ್ರೀಯ ಉನ್ನತ 100 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಕೆಎಲ್‌ಇ ವಿಶ್ವವಿದ್ಯಾಲಯ ಸ್ಥಾನ ಪಡೆಯುವಂತಾಗಬೇಕು. ಈ ದಿಸೆಯಲ್ಲಿ ಬೋಧಕರು ಹಾಗೂ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದರು.
ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಲಾಯಿತು. ಉತ್ಕೃಷ್ಟ ಸಾಧನೆ ಮಾಡಿದ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಲಕ್ಷ್ಮಣ ನಿಂಬರಗಿ, ಮಲ್ಲಿಕಾರ್ಜುನ ಮಾಮನಿ, ಕೀರೇಶ ಬಾದಾಮಿ, ಅವಿನಾಶ ನಡುವಿನಮನಿ, ಸುಧೀರ ಪಾಟೀಲರನ್ನು ಸತ್ಕರಿಸಲಾಯಿತು. ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ| ಅಶೋಕ ಶೆಟ್ಟರ, ಕಾಲೇಜಿನ ಪ್ರಾಚಾರ್ಯ ಡಾ| ಪಿ.ಜಿ.ತೇವರಿ, ಅನಿಲ ನಂದಿ, ಪ್ರೊ| ದೇಸಾಯಿ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ
ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್ ಅರೆಸ್ಟ್! ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ
B.Z. Zameer Ahmed Khan;ನಾನು ಶುದ್ದ ಹಿಂದೂಸ್ಥಾನಿ ಭಾರತೀಯ, 24 ಕ್ಯಾರೆಟ್ ಗೋಲ್ಡ್..
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.