ಲಂಚ: ಪ್ರಾಂಶುಪಾಲ ಮೇತ್ರೆ ಸಿಬಿಐ ವಶಕ್ಕೆ
Team Udayavani, May 15, 2018, 6:40 AM IST
ಹುಬ್ಬಳ್ಳಿ: ತರಗತಿಯಲ್ಲಿ ಪ್ರವೇಶ ನೀಡಲು ಲಂಚ ಕೇಳಿದ ಆರೋಪದ ಹಿನ್ನೆಲೆಯಲ್ಲಿ ನಗರದ ಕೇಂದ್ರೀಯ ವಿದ್ಯಾಲ
ಯದ ಪ್ರಾಂಶುಪಾಲರನ್ನು ಸಿಬಿಐ ವಶಕ್ಕೆ ಪಡೆದಿರುವುದು ಬೆಳಕಿಗೆ ಬಂದಿದೆ.
ಇಲ್ಲಿನ ರಾಜನಗರದ ಕೇಂದ್ರೀಯ ವಿದ್ಯಾಲಯ ನಂ.1ರ ಪ್ರಾಂಶುಪಾಲ ಸಿದ್ಧಾರೂಢ ಟಿ. ಮೇತ್ರೆ ಎಂಬುವರು ಲಂಚ ಕೇಳಿ ಸಿಬಿಐಗೆ ಸಿಕ್ಕಿ ಬಿದ್ದಿದ್ದಾರೆ.
ಕೇಂದ್ರೀಯ ತನಿಖಾ ದಳ (ಸಿಬಿಐ)ದ ಬೆಂಗಳೂರು ಘಟಕದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮೇತ್ರೆ ವಿರುದ್ಧ
ದೂರು ದಾಖಲಿಸಿದೆ. ಅರೆಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹುಬ್ಬಳ್ಳಿ ನಿವಾಸಿ ಬಸವರಾಜ ಸಣ್ಣಪೂಜಾರ ಅವರು ಪಂಜಾಬನ ಭಟಿಂಡಾದಿಂದ ಹುಬ್ಬಳ್ಳಿಗೆ ವರ್ಗಾವಣೆ ಗೊಂಡಿದ್ದರು. ಅವರು ತಮ್ಮ ಮಗ ಚೇತನ್‌ಗೆ ಕೇಂದ್ರೀಯ ವಿದ್ಯಾಲಯದಲ್ಲಿ 4ನೇ ತರಗತಿ ಪ್ರವೇಶ ಬಯಸಿ ಪ್ರಾಂಶುಪಾಲರ ಬಳಿ ತೆರಳಿದ್ದರು. ಆಗ ಮೇತ್ರೆ ಅವರು ತಮ್ಮ ಮಗನಿಗೆ ಪ್ರವೇಶ ನೀಡಬೇಕೆಂದರೆ 50 ಸಾವಿರ ರೂ. ಲಂಚ ಕೊಡಬೇಕು. ಇಲ್ಲವೆ ಪರ್ಯಾಯವಾಗಿ ಮಿಕ್ಸಿ ಹಾಗೂ ಕ್ಯಾಂಟೀನ್ ಸ್ಟೋರ್ ಡಿಪಾರ್ಟ್‌ಮೆಂಟ್‌ನಿಂದ ಐದು ಬಾಟಲಿ ಮದ್ಯ ಕೊಡಬೇಕೆಂದು ಕೇಳಿದ್ದರು ಎಂದು ಬಸವರಾಜ ಸಣ್ಣಪೂಜಾರ ಸಿಬಿಐಗೆ ದೂರು ಸಲ್ಲಿಸಿದ್ದರು.
ಸಿಬಿಐ ಇನ್‌ಸ್ಪೆಕ್ಟರ್ ಟಿ. ರಾಜಶೇಖರ ಅವರು ಬಸವರಾಜ ಅವರ ದೂರು ಪರಿಶೀಲಿಸಿ ಭ್ರಷ್ಟಾಚಾರ ಕಾಯ್ದೆಯಡಿ
ಪ್ರಾಂಶುಪಾಲ ವಿರುದ್ಧ ದೂರು ದಾಖಲಿಸಿ, ಮೇತ್ರೆ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.