ಹೊಗೆ ಮುಕ್ತ ಬಡವರ ಮನೆಗೆ ಕೇಂದ್ರ ಸಂಕಲ್ಪ
Team Udayavani, Jul 14, 2017, 12:14 PM IST
ಕುಂದಗೋಳ: ಬಡವರ ಮನೆಯೂ ಹೊಗೆ ಮುಕ್ತವಾಗಬೇಕೆಂಬುವುದು ಕೇಂದ್ರ ಸರ್ಕಾರದ ಸಂಕಲ್ಪವಾಗಿದ್ದು, ಮೂರು ವರ್ಷದ ಆಡಳಿತದಲ್ಲಿ ಬಡವರಿಗೆ ಮೂರು ಕೋಟಿ ಅಡುಗೆ ಅನಿಲವನ್ನು ವಿತರಿಸಲಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ಪಟ್ಟಣದ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಉಜ್ವಲ ಯೋಜನೆಗೆ ಚಾಲನೆ ಮತ್ತು ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ವಿತರಿಸಿ ಅವರು ಮಾತನಾಡಿದರು. ಕೇಂದ್ರದಲ್ಲಿ 60 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿದ್ದರೂ ಶ್ರೀಸಾಮಾನ್ಯರಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿಲ್ಲ.
ಕಾಂಗ್ರೆಸ್‌ನ ಆಡಳಿತದ ಅವಧಿಯಲ್ಲಿ 7 ಕೋಟಿ ಸಿಲಿಂಡರ್ ಗಳನ್ನು ಮೇಲವರ್ಗದವರಿಗೆ ವಿತರಿಸಿದರೆ, ಮೋದಿ ಸರ್ಕಾರ ಮೂರು ವರ್ಷದಲ್ಲಿ 6.50 ಕೋಟಿ ಸಿಲಿಂಡರ್ ವಿತರಿಸಿದೆ ಎಂದರು. 2010-11ರ ಜನಗಣತಿ ಆಧಾರದ ಮೇಲೆ ಬಡವರಿಗೆ ಸಿಲಿಂಡರ್ ವಿತರಿಸಲಾಗುತ್ತಿದ್ದು, ಇನ್ನೂಳಿದ ಬಡ ಫಲಾನುಭವಿಗಳಿಗೆ ಆಗಸ್ಟ್ ತಿಂಗಳದಲ್ಲಿ ಉಜ್ವಲ ಪ್ಲಸ್ ಯೋಜನೆ ಮೂಲಕ ಎಲ್ಲ ಬಡವರಿಗೆ ಸಿಲಿಂಡರ್ ವಿತರಿಸುವ ಭರವಸೆ ನೀಡಿದರು.
ಬಿಜೆಪಿಯ ಮಾಜಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಎಂ.ಆರ್. ಪಾಟೀಲ ಮಾತನಾಡಿ, ಕೇಂದ್ರದ ಸರ್ಕಾರ ಮೂರು ವರ್ಷದ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲದೆ ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಸಂಸದ ಪ್ರಹ್ಲಾದ ಜೋಶಿಯವರು ಉಜ್ವಲ ಯೋಜನೆಯಡಿ ಕುಂದಗೋಳ ಮತಕ್ಷೇತ್ರಕ್ಕೆ 12 ಸಾವಿರಕ್ಕೂ ಹೆಚ್ಚು ಬಡವರಿಗೆ ಸಿಲಿಂಡರ್ ವಿತರಿಸುವಲ್ಲಿ ಶ್ರಮಿಸಿದ್ದಾರೆ.
ರಾಜ್ಯ ಸರ್ಕಾರ ಒಂದೊಂದು ವರ್ಗಕ್ಕೆ ಒಂದೊಂದು ಯೋಜನೆ ನೀಡುತ್ತಾ ಜಾತಿಯ ಲೆಕ್ಕಾಚಾರ ಮಾಡುತ್ತಿದೆ ಎಂದು ಆರೋಪಿಸಿದರು. ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಮತ್ತು ಎಚ್.ಪಿ. ಕಂಪನಿ ಅಧಿಕಾರಿ ರೆಡ್ಡೇರ ಮಾತನಾಡಿದರು.
ಜಿಲ್ಲಾಧ್ಯಕ್ಷ ಈರಣ್ಣ ಜಡಿ, ಜಿಪಂ ಸದಸ್ಯರಾದ ಎನ್.ಎನ್. ಪಾಟೀಲ, ಭರಮಣ್ಣ ಮುಗಳಿ, ತಾಪಂ ಅಧ್ಯಕ್ಷೆ ರೇಣುಕಾ ಅಂಗಡಿ, ಬಿಜೆಪಿ ತಾಲೂಕಾಧ್ಯಕ್ಷ ಮಾಲತೇಶ ಶ್ಯಾಗೋಟಿ, ಮುಖಂಡರಾದ ಬಸವರಾಜ ಕುಂದಗೋಳಮಠ, ಈಶ್ವರಪ್ಪ ಗಂಗಾಯಿ, ಮಲ್ಲೇಶಪ್ಪ ಕೊಪ್ಪದ, ಹಿಂದೂಸ್ಥಾನ ಪೆಟ್ರೋಲಿಯಂ ಅ ಧಿಕಾರಿಗಳಾದ ವಿಷ್ಣುವರ್ಧನ ರೆಡ್ಡಿ, ಪ್ರಫುಲ ಕುಲಕರ್ಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.