ಧಾರವಾಡಕ್ಕೆ ಕೇಂದ್ರ ಸಂಗೀತ-ನಾಟಕ ಅಕಾಡೆಮಿ ಕಚೇರಿ
Team Udayavani, Jan 10, 2024, 2:15 PM IST
ಉದಯವಾಣಿ ಸಮಾಚಾರ
ಧಾರವಾಡ: ಸಂಗೀತದ ತವರು ಧಾರವಾಡಕ್ಕೆ ಕೇಂದ್ರ ಸಂಗೀತ-ನಾಟಕ ಅಕಾಡೆಮಿ ಪ್ರಾದೇಶಿಕ ಕಚೇರಿ ಕೂಡ ತರಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು.
ಸೃಜನಾ ರಂಗಮಂದಿರದಲ್ಲಿ ಪಂ| ಕುಮಾರ ಗಂಧರ್ವರ ಜನ್ಮಶತಾಬ್ದಿ ಅಂಗವಾಗಿ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಕ್ಷಮತಾ ಸೇವಾ ಸಂಸ್ಥೆ ಹಾಗೂ ಕೇಂದ್ರ ಸಂಸ್ಕೃತಿ ಇಲಾಖೆ, ಎಲ್ ಐಸಿ ಸಹಯೋಗದಲ್ಲಿ ಮಂಗಳವಾರದಿಂದ ಆಯೋಜಿಸಿರುವ ಐದು ದಿನಗಳ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಧಾರವಾಡಕ್ಕೆ ಬಂದಿರುವ ಲಲಿತಕಲಾ ಅಕಾಡೆಮಿಯಂತೆಯೇ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯನ್ನೂ ಸ್ಥಾಪಿಸಲಾಗುವುದು. ಫೆಬ್ರವರಿ ಒಳಗಾಗಿ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರನ್ನು ಆಹ್ವಾನಿಸಿ ಅವಳಿನಗರದಲ್ಲಿ ತಲಾ ಒಂದೊಂದು ಕಾರ್ಯಕ್ರಮ ಆಯೋಜಿಸಿದರೆ ಅದಕ್ಕೆ ಸಂಪೂರ್ಣ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು.
ಸಂಗೀತವೆಂದರೆ ಹಾಡಿ ಕುಣಿಯುವುದಲ್ಲ. ಹಾಗಾದರೆ ಅದು ವಿದೇಶಿ ಸಂಗೀತ. ನಮ್ಮ ಸಂಗೀತ ಕೇಳಿದರೆ ಆರೋಗ್ಯ ಸುಧಾರಿಸಲಿದೆ. ತಲೆನೋವು ಇರುವ ರೋಗಿಗಳಿಗೆ ಹಿಂದೂಸ್ತಾನಿ ಸಂಗೀತ ಕೇಳಲು ವೈದ್ಯರು ಸೂಚಿಸುತ್ತಿದ್ದು, ಅಂತಹ ಶಕ್ತಿ ನಮ್ಮ ಸಂಗೀತಕ್ಕಿದೆ. ನಮ್ಮತನ ಹಾಗೂ ಭಾರತೀಯತೆಯನ್ನು ಕೀಳರಿಮೆಯಿಂದ ನೋಡುವ ಮನಸ್ಥಿತಿ ದೂರ ಮಾಡಿದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಆರ್ಥಿಕವಾಗಿ ಸಬಲತೆ ಕಡೆಗೆ ಒಯ್ಯುತ್ತಿದ್ದಾರೆ ಎಂದರು.
ವಿಶ್ವಮಟ್ಟದಲ್ಲಿ ಭಾರತ ತಾಕತ್ವಾನ್ ದೇಶ ಆಗುತ್ತಿರುವುದರಿಂದ ಇಲ್ಲಿನ ಕುಟುಂಬ ಪದ್ಧತಿ, ಆಹಾರ ಪದ್ಧತಿ, ಔಷಧಿ ಪದ್ಧತಿ, ಯೋಗ ಪದ್ಧತಿ ಉಳಿದ ದೇಶದವರಿಗೆ ಮಾದರಿ ಆಗುತ್ತಿದೆ. ಇದು ವ್ಯವಸ್ಥಿತ ಜೀವನಕ್ಕೆ ಪೂರಕ ಕೂಡ ಆಗಿದೆ. ಹೀಗಾಗಿ ನಾವು ನಮ್ಮತನದ ಬಗ್ಗೆ ಅಪಾರ ಗೌರವ, ನಂಬಿಕೆ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಧಾರವಾಡ ಸಂಸ್ಕೃತಿ ಇನ್ನೂ ಬಲವಾಗಿ ಬೆಳೆಯಬೇಕೆಂದರೆ ಬೇರೆ ಬೇರೆ ಕಲೆಗಳು ಇಲ್ಲಿ ನೆಲೆಯೂರಬೇಕು. ಅದಕ್ಕಾಗಿ ಲಲಿತಕಲಾ ಅಕಾಡೆಮಿಯಂತೆಯೇ ಸಂಗೀತ-ನಾಟಕ ಅಕಾಡೆಮಿಯನ್ನೂ ತರಬೇಕು ಎಂದು ಮನವಿ ಮಾಡಿದರು.
ಮೇಯರ್ ವೀಣಾ ಬರದ್ವಾಡ, ಎಲ್‌ಐಸಿಯ ದೊರೆಸ್ವಾಮಿ ನಾಯ್ಕ, ರಮಾಕಾಂತ ಜೋಶಿ, ಆನಂದ ಜುಂಜುರವಾಡ ಇನ್ನಿತರರಿದ್ದರು. ಗೋವಿಂದ ಜೋಶಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ನಂತರ ಪುಣೆಯ ಪಂ| ವಿಜಯ ಕೋಪರಕರ ಅವರ ಗಾಯನ ನಡೆಯಿತು. ಡಾ|ಎನ್. ರಾಜಮ್ ಹಾಗೂ ಅವರ ಮೊಮ್ಮಗಳು ನಂದಿನಿ ಶಂಕರ ಅವರಿಂದ ವಯೋಲಿನ್ ಜುಗಲಬಂಧಿ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.