ಕಾನೂನು ಸ್ವಯಂಸೇವಕರಿಗೆ ಸರ್ಟಿಫಿಕೇಟ್ ಕೋರ್ಸ್
Team Udayavani, Jan 25, 2020, 11:24 AM IST
ಹುಬ್ಬಳ್ಳಿ: ಕಾನೂನು ಜನರ ಬಳಿಗೆ ಹೋಗುವ ಅವಶ್ಯಕತೆ ಇದೆ. ಇದನ್ನು ವ್ಯವಸ್ಥಿತವಾಗಿ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಸಿಕೊಂಡು ಹೋಗಲು ಸಂಯೋಜಿತ ಕಾನೂನು ಮಹಾವಿದ್ಯಾಲಯಗಳಲ್ಲಿ ಕಾನೂನು ಸ್ವಯಂಸೇವಕರ ತರಬೇತಿಗಾಗಿ ಸರ್ಟಿಫಿಕೇಟ್ ಕೋರ್ಸ್ ಅನ್ನು ಸಂಬಂಧಿತ ಮಂಡಳಿಗಳಿಂದ ಅನುಮೋದನೆ ಪಡೆದು ಪ್ರಾರಂಭಿಸಲಾಗುವುದು ಎಂದು ಕಾನೂನು ವಿವಿ ಕುಲಪತಿ ಡಾ| ಪಿ. ಈಶ್ವರ ಭಟ್ ಹೇಳಿದರು.
ನವನಗರದ ಕರ್ನಾಟಕ ರಾಜ್ಯ ಕಾನೂನು ವಿವಿಯಲ್ಲಿ ಡೆವಲಪ್‌ಮೆಂಟ್ ಎಜುಕೇಶನ್ ಸರ್ವೀಸ್ (ಡೀಡ್ಸ್), ಪೂರಕ ಕಾನೂನು ಸುಗಮಕಾರರ ನೆಟ್ ವರ್ಕ್ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ “ಮಹಿಳೆಯರ ಜೊತೆ ಕಾನೂನಿನ ನಡೆ’ ವಿಷಯದ ಮೇಲೆ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಜನರ ಬಳಿ ಕಾನೂನು ಕೊಂಡೊಯ್ಯುವ ದಿಸೆಯಲ್ಲಿ ಡೀಡ್ಸ್ ಸಂಸ್ಥೆಯು ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದರು. ಡಿಎಲ್‌ಎಸ್‌ಎದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಎಸ್. ಚಿನ್ನಣ್ಣವರ ಮಾತನಾಡಿ, ಪೂರಕ ಕಾನೂನು ಸುಗಮಕಾರರಿಗೆ ಡಿಎಲ್‌ಎಸ್ ಎನಿಂದ ಗುರುತಿನ ಪತ್ರ ನೀಡುವುದರ ಮುಖಾಂತರ ಪೂರಕ ಕಾನೂನು ಸ್ವಯಂ ಸೇವಕರನ್ನು ಸಕ್ರಿಯವಾಗಿ ಕಾನೂನು ನೆರವು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಮೌಲ್ಯಮಾಪನ ಕುಲಸಚಿವ ಡಾ| ಜಿ.ಬಿ. ಪಾಟೀಲ ಮಾತನಾಡಿದರು. ಮಂಗಳೂರಿನ ಡೀಡ್ಸ್ ನಿರ್ದೇಶಕಿ ಮರ್ಲಿನ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿದ್ದರು. ನಂತರ ಕರ್ನಾಟಕ ರಾಜ್ಯ ಪೂರಕ ಕಾನೂನು ಸುಗಮಕಾರರ ಸಮುತ್ಛಯದ ಸಭೆ ನಡೆಯಿತು. ಮೋಹನಚಂದ್ರ, ಗಿರಿಜಾ ಪಾಟೀಲ, ನರಸಿಂಹರಾಜು ಕಮ್ಮಾರ, ಡಾ| ರಾಜೇಂದ್ರಕುಮಾರ ಹಿಟ್ಟಣಗಿ, ಸಹಾಯಕ ಪ್ರಾಧ್ಯಾಪಕರು ಭಾಗವಹಿಸಿದ್ದರು.
ಸಹಾಯಕ ಪ್ರಾಧ್ಯಾಪಕ ಡಾ| ಸುನಿಲ ಬಗಾಡೆ ಸ್ವಾಗತಿಸಿದರು. ಶ್ರೀಮತಿ ಗುಲಾಬಿ ನಿರೂಪಿಸಿದರು. ತುಕಾರಾಮ ಯಕ್ಕಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.