ಸರಕಾರಕ್ಕೆ ಸವಾಲಾದ ಕೆರೆ ಒತ್ತುವರಿ ತೆರವು


Team Udayavani, Jan 19, 2017, 3:50 AM IST

18hub-dwd1.jpg

ಧಾರವಾಡ: ಕೆರೆಗಳ ಅತಿಕ್ರಮಣ ತೆರವು ಕಾರ್ಯ ಸರ್ಕಾರಕ್ಕೆ ಕಠಿಣವಾಗಿ ಪರಿಣಮಿಸಿದಂತಿದೆ. ಸಣ್ಣ ನೀರಾವರಿ ಇಲಾಖೆ ಅತಿಕ್ರಮಣಕಾರರ ಕಪಿಮುಷ್ಟಿಯಿಂದ ಕೆರೆಯಂಗಳಗಳನ್ನು ಮರಳಿ ಪಡೆಯಲು ಹರಸಾಹಸ ಪಡುತ್ತಿದ್ದು, 500ಕ್ಕೂ ಅಧಿಕ ಕೆರೆಗಳ ಒತ್ತುವರಿ ತೆರವುಗೊಳಿಸಿ, ಭೂಮಿಯನ್ನು ಮರಳಿ ಪಡೆಯುವುದು ಸಕಾ ìರಕ್ಕೆ ಸಾಧ್ಯವಾಗಿಲ್ಲ.

2015-16ನೇ ಸಾಲಿನಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಕೆರೆ ಒತ್ತುವರಿ ತಡೆಗಟ್ಟಲು ಪೋಷಕ ಕಾಲುವೆ ಮತ್ತು ರಾಜ ಕಾಲುವೆಗಳ ದುರಸ್ತಿ ಮಾಡಲು ಸರ್ಕಾರ 2015ರ ನವೆಂಬರ್‌ನಲ್ಲಿ ಅನುಮೋದನೆ ನೀಡಿತ್ತು. ಇದರನ್ವಯ ರಾಜ್ಯದ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ 3677 ಕೆರೆಗಳ ಪೈಕಿ ಒತ್ತುವರಿಯಾದ 3300ಕ್ಕೂ ಹೆಚ್ಚು ಕೆರೆಗಳನ್ನು ಮರಳಿ ಸ್ವಾಧೀನ ಪಡಿಸಿಕೊಂಡು ಆ ಭೂಮಿಗೆ ಟ್ರೆಂಚ್‌ ಹೊಡೆದು ಕೆರೆಯ ಅಂಚುಗಳನ್ನು ಗುರುತಿಸಬೇಕಾಗಿತ್ತು.

ಆರಂಭದ ದಿನಗಳಲ್ಲಿ ಆಯಾ ವಿಭಾಗ ಮತ್ತು ಜಿಲ್ಲಾವಾರು ಅಧಿಕಾರಿಗಳು ಸಕ್ರಿಯವಾಗಿ ಕೆರೆಯಂಗಳವನ್ನು  ಮರಳಿ ವಶಕ್ಕೆ ಪಡೆದುಕೊಂಡರು. ನಂತರ ಕೆರೆ ಒತ್ತುವರಿ ತೆರವು ನಡೆದಿದ್ದು ಕಡಿಮೆ. ಒತ್ತುವರಿ ತೆರವಾದ ಕೆರೆಗಳು ಮತ್ತೆ ಅತಿಕ್ರಮಣಕ್ಕೆ ಒಳಗಾಗುತ್ತಿದೆ.

ಎಷ್ಟು ಕೆರೆ ಒತ್ತುವರಿ ತೆರವು?:
ರಾಜ್ಯದಲ್ಲಿ ಸಣ್ಣ ನೀರಾವರಿಗೆ ಬಳಕೆಯಾಗುವ 3677 ಕೆರೆಗಳಿದ್ದು, ಈ ಪೈಕಿ ಶೇ. 67ರಷ್ಟು ಕೆರೆಗಳ ಕೆಲವಷ್ಟು ಭಾಗ ಅತಿಕ್ರಮಣಕ್ಕೆ ಒಳಗಾಗಿತ್ತು. ಕೆಲವಷ್ಟು ಕೆರೆಗಳು 3 ಗುಂಟೆಯಿಂದ 10-15 ಎಕರೆ ವರೆಗೂ ಒತ್ತುವರಿಯಾಗಿವೆ. ಬೆಂಗಳೂರು ಸಣ್ಣ ನೀರಾವರಿ ವೃತ್ತದ ವ್ಯಾಪ್ತಿಯಲ್ಲಿ ಒಟ್ಟು 1613 ಕೆರೆಗಳಿದ್ದು, ಈ ಪೈಕಿ 692 ಕೆರೆಗಳು ಅತಿಕ್ರಮಣಕ್ಕೆ ಒಳಗಾಗಿವೆ.

ಮೈಸೂರು ಸಣ್ಣ ನೀರಾವರಿ ವೃತ್ತದ ವ್ಯಾಪ್ತಿಯಲ್ಲಿ ಒಟ್ಟು 2047 ಸಣ್ಣ ನೀರಾವರಿಗೆ ಬಳಕೆಯಾಗುವ ಕೆರೆಗಳಿದ್ದು, ಈ ಪೈಕಿ ಒಟ್ಟು 975 ಕೆರೆಗಳು ಒತ್ತುವರಿಯಾಗಿವೆ. ಈ ಪೈಕಿ 912 ಕೆರೆಗಳ ಒತ್ತುವರಿ ತೆರವುಗೊಳಿಸಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಇನ್ನು 63 ಕೆರೆಗಳ ವ್ಯಾಪ್ತಿಯ 300 ಎಕರೆಗೂ ಹೆಚ್ಚಿನ ಭೂಮಿ ನುಂಗಣ್ಣರ ಪಾಲಾಗಿದೆ.

ಧಾರವಾಡ ಜಿಲ್ಲೆಯಲ್ಲಿ 111 ಕೆರೆಗಳು ಒತ್ತುವರಿಯಾಗಿದ್ದರೆ, ಹಾವೇರಿ ಜಿಲ್ಲೆಯಲ್ಲಿ 259, ಬಾಗಲಕೋಟೆ 62, ಉತ್ತರ ಕನ್ನಡ 90, ವಿಜಯಪುರ 147 ಹಾಗೂ ಬೆಳಗಾವಿ ಜಿಲ್ಲೆಯ 270 ಕೆರೆಗಳು ಒತ್ತುವರಿಯಾಗಿವೆ. ಈ ಜಿಲ್ಲೆಗಳಲ್ಲಿ 60 ಎಕರೆ ಮಾತ್ರ ಅತಿಕ್ರಮಣಕ್ಕೆ ಒಳಗಾಗಿದ್ದು, ಅದನ್ನೂ ತೆರವುಗೊಳಿಸಿದ್ದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಬೆಳಗಾವಿ ವಿಭಾಗದಲ್ಲಿ 560 ಎಕರೆಗೂ ಹೆಚ್ಚು ಸಣ್ಣ ನೀರಾವರಿ ಕೆರೆಗಳ ಭೂಮಿ ಅತಿಕ್ರಮಣಕ್ಕೆ ಒಳಗಾಗಿದೆ ಎನ್ನಲಾಗಿದೆ.

ಕಲಬುರ್ಗಿ ವಿಭಾಗದ ಸಣ್ಣ ನೀರಾವರಿ ಕೆರೆಗಳ ಸಂಖ್ಯೆ 768 ಆಗಿದ್ದು, ಈ ಪೈಕಿ 413 ಎಕರೆ ಕೆರೆಯ ಭೂಮಿ ನುಂಗಣ್ಣರ ಪಾಲಾಗಿದೆ. ಇದನ್ನು  ಕೆರೆಯಂಗಳಕ್ಕೆ ಮರಳಿ ಸೇರಿಸಿಕೊಂಡಿದ್ದಾಗಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದು, ವಾಸ್ತವವಾಗಿ ವಶಕ್ಕೆ ಪಡೆದ ಭೂಮಿಯಲ್ಲಿ ಮತ್ತೆ 200 ಎಕರೆ ಭೂಮಿ ಅತಿಕ್ರಮಣಕ್ಕೆ ಒಳಗಾಗಿದೆ.

ಸರ್ಕಾರದ ಕಾಗದ ಪತ್ರಗಳಲ್ಲಿ ಮಾತ್ರ ಕೆರೆ ಒತ್ತುವರಿ ತೆರವುಗೊಂಡಿದೆ. ಸ್ಥಳಕ್ಕೆ ತೆರಳಿ, ಕೆರೆಗಳ ಅಂಚು ಗುರುತಿಸಿ, ಗಟ್ಟಿಯಾದ ಕಲ್ಲು ಅಥವಾ ಟ್ರೆಂಚ್‌ ಹೊಡೆಸಿ, ಕೆರೆಯಂಗಳ ಅನ್ಯರ ಪಾಲಾಗದಂತೆ ನೋಡಿಕೊಳ್ಳುವ ಕೆಲಸ ಇಲಾಖೆಯಿಂದ ಇನ್ನಷ್ಟು ಚುರುಕಾಗಿ ಆಗಬೇಕಾಗಿದೆ ಎನ್ನುತ್ತಾರೆ ನೀರಾವರಿ ಮತ್ತು ಪರಿಸರ ತಜ್ಞರು.

ಕೆರೆಗಳ ಅತಿಕ್ರಮಣ ತೆರವು ಕಾರ್ಯವನ್ನು ಸರ್ಕಾರ ಮಾಡುತ್ತಿದ್ದು, 1ನೇ ಹಂತದಲ್ಲಿ ನಿಗದಿಪಡಿಸಿದ ಕೆರೆಗಳ ಅತಿಕ್ರಮಣ ತೆರವುಗೊಳಿಸಿದ್ದೇವೆ. ಮರು ಅತಿಕ್ರಮಣವಾಗಿದ್ದರೆ ಅಥವಾ ಇನ್ನೂ ತೆರವು ಮಾಡುವುದು ಉಳಿದಿದ್ದರೆ, ಅಂತಹ ಕೆರೆಗಳ ಅತಿಕ್ರಮಣಗೊಂಡ ಭೂಮಿಯನ್ನು ಮರಳಿ ಕೆರೆಯಂಗಳಕ್ಕೆ ಜೋಡಿಸುತ್ತೇವೆ.
-ಟಿ.ಬಿ.ಜಯಚಂದ್ರ, ಸಣ್ಣ ನೀರಾವರಿ ಸಚಿವ

– ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.