ಹುಲ್ಲುಗಾವಲಿನಂತಾದ ಉಪಕಾಲುವೆ: ಚನ್ನಮ್ಮ ಜಲಾಶಯ ಕಾಲುವೆಗೆ ಬೇಕಿದೆ ಕಾಯಕಲ್ಪ
Team Udayavani, Oct 22, 2022, 3:10 PM IST
ನವಲಗುಂದ: ಚನ್ನಮ್ಮನ ಜಲಾಶಯ ಪಟ್ಟಣದ ಸುಮಾರು 30 ಸಾವಿರ ಜನಸಂಖ್ಯೆಗೆ ಕುಡಿಯುವ ನೀರಿನ ದಾಹವನ್ನು ನೀಗಿಸುತ್ತದೆ. ಚನ್ನಮ್ಮ ಜಲಾಶಯಕ್ಕೆ ಮಲಪ್ರಭಾ ಮುಖ್ಯ ಕಾಲುವೆಯಿಂದ ನೀರು ಹರಿಸುವ ಉಪಕಾಲುವೆ ದುರಸ್ತಿ ಕಾಣದೇ ಇರುವುದು ಭವಿಷ್ಯದ ತಾಪತ್ರಯಕ್ಕೆ ದಿಕ್ಸೂಚಿಯಾಗಿದ್ದು ಶಾಶ್ವತ ಕಾಯಕಲ್ಪಕ್ಕೆ ಕಾಯುತ್ತಿದೆ.
ಕಾಲುವೆಗಳ ರಿಮಾಡಲಿಂಗ್ ಇತ್ತೀಚಿನ ದಿನಗಳಲ್ಲಿ ಕೋಟಿಗಟ್ಟಲೇ ಹಣವನ್ನು ವ್ಯಯ ಮಾಡಿ ಮಾಡಿರುವುದು ಒಂದು ಕಡೆಯಾದರೆ, ಮುಖ್ಯ ಕಾಲುವೆಯಿಂದ ನೀರು ತೆಗೆದುಕೊಳ್ಳುವ ಉಪ ಕಾಲುವೆಗಳ ಸ್ಥಿತಿ ತುಂಬಾ ಶೋಚನೀಯವಾಗಿದೆ.
ಉಪ ವಿಭಾಗ ಕಾಲುವೆ ನಂ 16 ರಲ್ಲಿ 46ಎ ಕಾಲುವೆ ದುರಸ್ತಿ ಇಲ್ಲದೆ ಸುಮಾರು 3 ಕಿ.ಮೀ ಕಾಲುವೆಯ ಸ್ಥಿತಿ ನೋಡುವಂತಿಲ್ಲ. ಕಾಲುವೆ ಚಿಕ್ಕದಾಗಿದ್ದು, ಅದರ ಮಧ್ಯದಲ್ಲಿ ಗಿಡ ಗಂಟೆಗಳು, ಹುಲ್ಲು, ಮುಳ್ಳುಗಂಟೆಗಳು ನಾಯಿಕೊಡೆಯಂತೆ ಆವೃತವಾಗಿರುವುದನ್ನು ನೋಡಿದರೆ ನೀರಾವರಿ ಇಲಾಖೆಯಿಂದ ಕಾಲುವೆಗಳ ದುರಸ್ತಿ ಮಾಡದೇ ಇರುವುದು ಸಾರ್ವಜನಿಕರ ಕಣ್ಣಿಗೆ ಎದ್ದು ಕಾಣುತ್ತದೆ.
ಕಾಲುವೆಯಲ್ಲಿ ಹಾದು ಬರುವ ನೀರು ನೀರು ಕಲುಷಿತಗೊಂಡಿದೆ. ಅಧಿಕಾರಿಗಳ ಕರ್ತವ್ಯ ಲೋಪದಿಂದ ಅಶುದ್ದ ಜನ ನೀರನ್ನು ಕುಡಿಯುವಂತಾಗಿದೆ.
ಕಾಲುವೆಯಲ್ಲಿ ಗಲೀಜು, ಇತರೆ ತ್ಯಾಜ್ಯಗಳನ್ನು ಸ್ವಚ್ಚಗೊಳಿಸಿ ನೀರನ್ನು ತೆಗೆದುಕೊಳ್ಳಲು ತಿಳಿಸಿದರೆ ಇದು ನಮ್ಮ ಕೆಲಸವಲ್ಲಾವೆಂದು ಸಂಬಂಧ ಪಟ್ಟವರು ಮಾಡಬೇಕೆಂದು ಹಾರಿಕೆಯ ಉತ್ತರ ಹೇಳಿ ವರುಷಗಳೇ ಕಳೆದಿರುತ್ತಾರೆ. ಇನ್ನಾದರು ಜನಪ್ರತಿನಿಧಿಗಳು, ಅಧಿಕಾರಿಗಳು ಕಾಲುವೆ ಸುವ್ಯವಸ್ಥೆಗೆ ಸ್ಪಂದಿಸಬೇಕಿದೆ.
ಮುಖ್ಯ ಕಾಲುವೆಯಿಂದ ಚನ್ನಮ್ಮನ ಜಲಾಶಯಕ್ಕೆ ಬರುವ ನೀರಿನ ಕಾಲುವೆಯಲ್ಲಿ ಸ್ವಚ್ಚತೆ ಇಲ್ಲದೆ ಕಾಲುವೆಯಲ್ಲಿಯೇ ಗಿಡಗಳು, ಮುಳ್ಳುಕಂಠಿಗಳು, ಹುಲ್ಲು ಬೆಳೆದು ನೀರು ಬರುವುದಿಲ್ಲ. ಇನ್ನು ದುರಸ್ತಿಯಂತು ಮಾಡಿರುವುದನ್ನು ನೋಡಿಲ್ಲ ಇದರಿಂದ ಕುಡಿಯವ ನೀರು ಕುಲುಷಿತದಿಂದ ಹರಿದು ಬರುತ್ತದೆ. ಯಾವುದೇ ರೀತಿ ಕಾಲುವೆ ಸಂರಕ್ಷಣೆ ಇಲ್ಲದೆ ಇರುವುದರಿಂದ ತುಂಬಾ ಗಲೇಜು ನೀರು ಚನ್ನಮ್ಮನ ಜಲಾಶಯಕ್ಕೆ ಹೋಗುತ್ತಿದೆ. ಈ ವಿಷಯವಾಗಿ ಸಂಬಂಧ ಪಟ್ಟವರ ಗಮನಕ್ಕೂ ತೆಗೆದುಕೊಂಡು ಬಂದಿರುತ್ತೇನೆ. ಪುರಸಭೆ ಹಾಗೂ ನೀರಾವರಿ ಇಲಾಖೆಯವರು ಪರಸ್ಪರ ದೋಷಾರೋಪ ಮಾಡುತ್ತಿದ್ದಾರೆ. ಆದರೆ ಪಟ್ಟಣದ ಜನತೆ ಒಮ್ಮೆ ಇಲ್ಲಿ ಬಂದು ನೋಡಿದರೆ ನೀರು ಬಳಕೆ ಮಾಡಲು ಇಂಜರಿಯುವು ಸ್ಥಿತಿ ಇದೆ. – ಮಲ್ಲಪ್ಪ ಕುಂಬಾರ, ಸ್ಥಳೀಯ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.