ಚಿಗರಿ ಓಡಾಟಕ್ಕೆ ವರ್ಷ; ಯೋಜನೆಗಿಲ್ಲ ಹರ್ಷ

ಅವೈಜ್ಞಾನಿಕ ಯೋಜನೆ ಪಟ್ಟ

Team Udayavani, Oct 2, 2019, 9:48 AM IST

huballi-tdy-1

ಹುಬ್ಬಳ್ಳಿ: ರಾಜ್ಯದ ಏಕೈಕ ತ್ವರಿತ ಬಸ್‌ ಸಾರಿಗೆ ಸೇವೆ (ಬಿಆರ್‌ಟಿಎಸ್‌) ಒಂದು ವರ್ಷ ಪೂರೈಸಿದ್ದು, ಕಡಿಮೆ ದರದಲ್ಲಿ ಐಶಾರಾಮಿ ಬಸ್‌ಗಳ ಸೇವೆ ಮೂಲಕ ಜನರ ಮನಸ್ಸು ಗೆದ್ದಿದೆ. ಆದರೂ ಅವೈಜ್ಞಾನಿಕ ಅನುಷ್ಠಾನ ಯೋಜನೆ ಹಣೆಪಟ್ಟಿ ಅಂಟಿಕೊಂಡಿದೆ. ಪ್ರಾಯೋಗಿಕ ಸೇವೆ ಆರಂಭವಾಗಿ ಅ.2ಕ್ಕೆ ಒಂದು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ.

ಹತ್ತು ಹಲವು ಕಾರಣಗಳಿಂದ ಬಿಆರ್‌ಟಿಎಸ್‌ ಯೋಜನೆಯ ವಿಳಂಬ ಕಾಮಗಾರಿಯಿಂದ ಈ ಯೋಜನೆ ಯಾಕಪ್ಪ ನಗರಕ್ಕೆ ಬಂತು ಎಂದು ಅವಳಿ ನಗರದಲ್ಲಿ ಓಡಾಡುತ್ತಿದ್ದ ಜನ ಶಾಪ ಹಾಕುತ್ತಿದ್ದರು. ಯೋಜನೆ ತಂದ ಜನಪ್ರತಿನಿಧಿಗಳು ಕೂಡ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೆಲ್ಲದರ ನಡುವೆಯೂ ಕುಂಟುತ್ತ-ತೆವಳುತ್ತಾ ಬಸ್‌ ಓಡುವಷ್ಟರ ಮಟ್ಟಿಗೆ ತಲುಪಿಸಲಾಯಿತು.

ಪ್ರಾಯೋಗಿಕವಾಗಿ ಬಸ್‌ಗಳು ರಸ್ತೆಗಳಿದರೆ ಮಾತ್ರ ವಾಸ್ತವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸಾಧ್ಯ ಎನ್ನುವ ಕಾರಣಕ್ಕೆ 2018 ಅಕ್ಟೋಬರ್‌ 2ರಂದು ಪ್ರಾಯೋಗಿಕ ಸೇವೆಗೆ ಚಾಲನೆ ನೀಡಲಾಯಿತು. ಕಾಮಗಾರಿಗಳು ಬಾಕಿ ಉಳಿದಿದ್ದರೂ ಜನರ ಮನಸ್ಸಿನಲ್ಲಿ ಮೂಡಿದ್ದ ಯೋಜನೆ ನಕಾರಾತ್ಮಕ ಅಂಶಗಳು ದೂರ ಮಾಡುವ ನಿಟ್ಟಿನಲ್ಲಿ ಬಸ್‌ ಸೇವೆ ಆರಂಭಿಸಲಾಯಿತು. ಆದರೆ ಕೆಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಯಿತು. ಬಾಕಿ ಉಳಿದಿರುವ ಕೆಲಸಗಳಿಂದ ಮಹಾನಗರದ ಜನತೆಯ ಮನಸ್ಸು ಗೆಲ್ಲುವಲ್ಲಿ ಸಫಲವಾಗಿಲ್ಲ.

ಚಿಗರಿ ಸಾರಿಗೆ ಸೇವೆ ಸೂಪರ್‌ :  ಚಿಗರಿ ಸವಾರಿಯನ್ನು ಜನರು ಅಪ್ಪಿಕೊಳ್ಳಲಿ ಎನ್ನುವ ಕಾರಣಕ್ಕೆ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ ದರ ನಿಗದಿ ಮಾಡಿದ್ದರಿಂದ ಅತೀ ಕಡಿಮೆ ಅವಧಿಯಲ್ಲೇ ಪ್ರಯಾಣಿಕ ಮನಸ್ಸು ಗೆದ್ದಿತು. ಕಡಿಮೆ ಬಸ್‌ ದರದಲ್ಲಿ ಕಡಿಮೆ ಅವಧಿಯಲ್ಲಿ ಐಶಾರಾಮಿ ಸಾರಿಗೆ ಜನರನ್ನು ಆಕರ್ಷಿಸಿತು. ಸ್ವಂತ ವಾಹನ ಬಳಸುತ್ತಿದ್ದವರೂ ಚಿಗರಿ ಪ್ರಯಾಣಕ್ಕೆ ಮನ ಸೋತರು. ಪರಿಣಾಮ ನಿತ್ಯ ಚಿಗರಿ ಬಸ್‌ಗಳಲ್ಲಿ 40-45 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಎಲ್ಲಾ ರಿಯಾಯಿತಿ ಪಾಸ್‌ಗಳಿಗೆ ಅವಕಾಶ ನೀಡಿರುವುದು ಸಾರಿಗೆ ಸೇವೆ ಜನರಿಗೆ ಮತ್ತಷ್ಟು ಹತ್ತಿರವಾಗಲು ಕಾರಣವಾಯಿತು. ಪ್ರಯಾಣಿಕರಿಗೆ ನೀಡಿದ ಭರವಸೆಯನ್ನು ಬಿಆರ್‌ಟಿಎಸ್‌ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ಬಹುಪಾಲು ಈಡೇರಿಸಿವೆ. ಮಾದರಿ ಯೋಜನೆಯನ್ನಾಗಿ ಕಾಪಾಡುವ ನಿಟ್ಟಿನಲ್ಲಿ ಹತ್ತು ಹಲವು ಪ್ರಯೋಗಗಳು ನಡೆಯುತ್ತಿವೆ.

ಎರಡನೇ ಹಂತದ ಕಾಮಗಾರಿ :  ಮೊದಲನೇ ಹಂತದ ಬಿಆರ್‌ಟಿಎಸ್‌ ಯೋಜನೆಯಲ್ಲಿ ಹಲವು ಕೆಲಸಗಳು ಬಾಕಿ ಉಳಿದಿದೆ. ಇದರ ಮಧ್ಯೆ ಎರಡನೇ ಹಂತಹ ಯೋಜನೆಗೆ ತಯಾರಿ ನಡೆಯುತ್ತಿದೆ. ಸ್ಮಾರ್ಟ್‌ಸಿಟಿ ಯೋಜನೆ ಅನುದಾನದಲ್ಲಿ ಯೋಜನೆ ಆರಂಭಿಸಲು ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ. ಆಗಬೇಕಾದ ಪ್ರಮುಖ ಕೆಲಸಗಳನ್ನು ಬಾಕಿ ಉಳಿದಿವೆ. ಈ ಎಲ್ಲಾ ಕಾರ್ಯಗಳು ಮುಗಿಯದ ಹೊರತು ಉದ್ಘಾಟನೆ ಬೇಡ ಎನ್ನುವ ಅಭಿಪ್ರಾಯ ಜನಪ್ರತಿನಿಧಿಗಳದ್ದಾಗಿದ್ದು, ಹೀಗಿರುವಾಗ ಎರಡನೇ ಹಂತದ ಕಾಮಗಾರಿಗೆ ಮುಂದಾಗಿರುವುದಾದರೂ ಯಾವ ಕಾರಣಕ್ಕೆ ಎಂಬುದು ಜನರ ಪ್ರಶ್ನೆಯಾಗಿದೆ.

 ಹೆಚ್ಚುತ್ತಿದೆ ನಷ್ಟದ ಪ್ರಮಾಣ:  ಬಿಆರ್‌ಟಿಎಸ್‌ ವಾಯವ್ಯ ಸಾರಿಗೆ ಸಂಸ್ಥೆ ಪಾಲಿಗೆ ಬಿಳಿಯಾನೆಯಾಗಿದೆ. ಪ್ರತಿ ತಿಂಗಳು ಸುಮಾರು 1.5 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು 20 ಕೋಟಿ ರೂ. ನಷ್ಟವಾಗಿದೆ. ಕಡಿಮೆ ಬಸ್‌ ದರ ಇರುವುದು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಕೇವಲ 100 ಬಸ್‌ಗಳಿಂದ ಇಷ್ಟೊಂದು ಪ್ರಮಾಣದ ನಷ್ಟ ಸಂಸ್ಥೆಗೆ ದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ವರ್ಷ ಕಳದಂತೆಲ್ಲ ನಷ್ಟದ ಪ್ರಮಾಣ ಹೆಚ್ಚಾಗಲಿದ್ದು, ಮುಂದೆ ಹೇಗೆ ಎನ್ನುವ ಪ್ರಶ್ನೆ ಅಧಿಕಾರಿಗಳಲ್ಲಿ ಕಾಡುತ್ತಿದೆ. ಸರಕಾರದಿಂದ ಬರಬೇಕಾದ ಪ್ರೋತ್ಸಾಹ ಧನ ಇನ್ನೂ ಸಂಸ್ಥೆಗೆ ಬಂದಿಲ್ಲ. ಮೊದಲ ಹಂತದಲ್ಲಿ 20 ಕೋಟಿ ರೂ. ಮಂಜೂರಾಗಿದ್ದು, ನಗರಾಭಿವೃದ್ಧಿ ಇಲಾಖೆಯಿಂದ ಸಂಸ್ಥೆಗೆ ವರ್ಗಾಯಿಸಲು ವಿಳಂಬವಾಗುತ್ತಿದೆ.

ಈಡೇರದ ಭರವಸೆಗಳು :  ಬಿಆರ್‌ಟಿಎಸ್‌ನಿಂದ ಅವಳಿ ನಗರದ ನಡುವೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎನ್ನುವ ಯೋಜನೆ ಮೂಲ ಉದ್ದೇಶಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಹುಬ್ಬಳ್ಳಿಯ ಸಿಬಿಟಿಯಿಂದ ಬೈರಿದೇವರಕೊಪ್ಪ ಹಾಗೂ ಧಾರವಾಡದ ಮಿತ್ರ ಸಮಾಜದಿಂದ ವಿದ್ಯಾಗಿರಿವರೆಗೂ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಟ್ರಾಕ್‌ ಸಿಗ್ನಲ್‌ಗ‌ಳು ಕೂಡ ಕಾರಣವಾಗಿವೆ ಎನ್ನುವ ಆರೋಪಗಳಿವೆ. ಟ್ರಾಕ್‌ ಸಿಗ್ನಲ್‌ಗ‌ಳಿಗೆ ಮೊದಲ ಬಾರಿಗೆ ಕ್ಯೂಟಿ ತಂತ್ರಜ್ಞಾನ ಅಳವಡಿಸಿದರೂ ಪರಿಣಾಮಕಾರಿ ಸಂಚಾರ ವ್ಯವಸ್ಥೆ ಜನರಿಗೆ ದೊರೆಯುತ್ತಿಲ್ಲ ಎನ್ನುವ ಭಾವನೆ ಜನರಲ್ಲಿದೆ. ಈ ಪ್ರಮುಖ ನಿಲ್ದಾಣಗಳಲ್ಲಿ ಟಿಕೆಟ್‌ ಪಡೆಯಲು ಉಂಟಾಗಿರುವ ಸರತಿ ಸಾಲಿಗೆ ಇತಿಶ್ರೀ ಹಾಡಲು ಸಾಧ್ಯವಾಗಿಲ್ಲ. ಇನ್ನೂ ಕೆಲವೆಡೆ ಬಿಆರ್‌ಟಿಎಸ್‌ ಬಸ್‌ ನಿಲ್ದಾಣಕ್ಕೆ ಬರಲು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಬರುವಂತಾಗಿದೆ. ಪಾದಚಾರಿ ಮೇಲ್ಸೇತುವೆಗಳಿಗೆ ಅಳವಡಿಸಿರುವ ಲಿಫ್ಟ್‌ಗಳ ಮುಖವನ್ನು ಜನರು ನೋಡಿಲ್ಲ. ಬಿಆರ್‌ಟಿಎಸ್‌ ಪ್ರಮುಖ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್‌ ಕಾರ್ಡ್‌ ವಿತರಣೆಗೆ ಭಾಗ್ಯ ಕೂಡಿ ಬಂದಿಲ್ಲ.

ಅಲ್ಲಲ್ಲಿ ಪಾರ್ಕಿಂಗ್‌ ಸ್ಥಳ ಗುರುತಿಸುವ ಕೆಲಸ ನಡೆಯಿತೇ ವಿನಃ ಕಾರ್ಯರೂಪಕ್ಕೆ ಬರಲಿಲ್ಲ. ಬಿಆರ್‌ಟಿಎಸ್‌ ಕಾರಿಡಾರ್‌ ಗೆ ನೀಡಿದ ಪ್ರಾಶಸ್ತ ಮಿಶ್ರ ಪಥಕ್ಕೆ ನೀಡದ ಪರಿಣಾಮ ರಸ್ತೆ ಎಂಬುದು ಪಾರ್ಕಿಂಗ್‌ ಸ್ಥಳವಾಗುತ್ತಿದೆ. ಬೇಂದ್ರೆ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರದಿಂದ ಮಿಶ್ರಪಥದ ಸಂಚಾರ ಹೇಳ ತೀರದು. ಮಳೆಗಾಲದಲ್ಲಿ ಕೆರೆಯಂತಾಗುವ ಬಸ್‌ ನಿಲ್ದಾಣಗಳು, ಒಳ ಚರಂಡಿ ವ್ಯವಸ್ಥೆಯೇ ದುರ್ನಾತಕ್ಕೆ ಪರಿಹಾರ ಕಲ್ಪಿಸಿಲ್ಲ. ಬಿಆರ್‌ಟಿಎಸ್‌ ಸಾರಿಗೆಗೆ ಸಂಪರ್ಕ ಕಲ್ಪಿಸುವ ಹೊಸೂರು ಟರ್ಮಿನಲ್‌ ಬಳಕೆಯಾಗದೆ ಗಿಡ ಗಂಟಿ ಬೆಳೆದು ಪಾಳು ಬಿದ್ದಂತೆ ಕಾಣುತ್ತಿದೆ. ಸುಮಾರು 120 ಕೋಟಿ ರೂ. ವೆಚ್ಚದ ಐಟಿಎಸ್‌ ಕೇಂದ್ರ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಪಿಒಎಸ್‌ ಸಿಬ್ಬಂದಿಗೆ ಕಲ್ಪಿಸಬೇಕಾಗಿದ್ದ ಶೌಚಾಲಯ ಭರವಸೆ ಈಡೇರಿಲ್ಲ.

 

-ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Hubballi

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.