ಚಿಗರಿ ದುರಸ್ತಿಯೇ ದೊಡ್ಡ ಸವಾಲು
•ಉಕದಲ್ಲಿಲ್ಲ ವೋಲ್ವೋ ಸರ್ವೀಸ್ ಸೆಂಟರ್ •ಬಸ್‌ಗೆ ತೀವ್ರ ಹಾನಿಯಾದ್ರೆ ವಿಳಂಬ ತಪ್ಪಿದ್ದಲ್ಲ
Team Udayavani, Jun 15, 2019, 9:28 AM IST
ಹುಬ್ಬಳ್ಳಿ: ನಿರ್ವಹಣಾ ದೃಷ್ಟಿಯಿಂದ ವಾಯವ್ಯ ಸಾರಿಗೆ ಸಂಸ್ಥೆ ಪಾಲಿಗೆ ಬಿಳಿಯಾನೆಯಾಗಿರುವ ಬಿಆರ್‌ಟಿಎಸ್‌ನ ಚಿಗರಿ ಬಸ್‌ಗಳ ದುರಸ್ತಿ ಸಮಸ್ಯೆ ಎದುರಾಗಿದ್ದು, ಅಪಘಾತದಲ್ಲಿ ತೀವ್ರ ಹಾನಿಯಾದ ಬಸ್‌ಗಳ ದುರಸ್ತಿಯಂತೂ ಸವಾಲಾಗಿ ಪರಿಣಮಿಸಿದೆ.
ಅವಳಿ ನಗರದ ಜನತೆಗೆ ಉತ್ತಮ ಸಾರಿಗೆ ಸೇವೆ ನೀಡುವುಕ್ಕಾಗಿ ವೋಲ್ವೋ ಕಂಪೆನಿಯ ವಾಹನಗಳನ್ನು ರಸ್ತೆಗಿಳಿಸಿರುವುದು ಸಂತಸ ವಿಚಾರ. ಈ ವಾಹನಗಳ ನಿರ್ವಹಣೆಗಾಗಿ ವಾಯವ್ಯ ಸಾರಿಗೆ ಸಂಸ್ಥೆ ಮೆಕ್ಯಾನಿಕ್‌ಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಹುಬ್ಬಳ್ಳಿ ಹಾಗೂ ಧಾರವಾಡ ಘಟಕಗಳಲ್ಲಿ ತಲಾ 25 ಮೆಕ್ಯಾನಿಕ್‌ಗಳು ವೋಲ್ವೋ ವಾಹನ ತರಬೇತಿ ಪಡೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿತ್ಯದ ನಿರ್ವಹಣೆಗೆ ಅತ್ಯಾಧುನಿಕ ಯಂತ್ರೋಪಕರಣಗಳು ಡಿಪೋಗಳಲ್ಲಿ ಅಳವಡಿಸಿರುವುದರಿಂದ ಯಾವುದೇ ತೊಂದರೆಯಿಲ್ಲ. ವೋಲ್ವೋ ವಾಹನಗಳಿಗೆ ಅಗತ್ಯವಾದ ಕೆಲ ಬಿಡಿ ಭಾಗಗಳನ್ನು ಖರೀದಿ ಮಾಡಲಾಗಿದೆ. ಅಗತ್ಯ ಬಿದ್ದರೆ ಖರೀದಿಸುವ ಅವಕಾಶ ಕೂಡ ಕಲ್ಪಿಸಲಾಗಿದೆ. ಆದರೆ ಅಪಘಾತಗಳಲ್ಲಿ ಹಾನಿಗೊಳಗಾದ ಬಸ್‌ಗಳ ದುರಸ್ತಿಗೆ ಯಾವುದೇ ತಯಾರಿ ಹಾಗೂ ವ್ಯವಸ್ಥೆ ಇಲ್ಲದಿರುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.
ದುರಸ್ತಿಗಾಗಿ ಬೆಂಗಳೂರಿಗೆ ವಾಹನಗಳನ್ನು ಕಳುಹಿಸಿದರೆ ಒಂದು ಬಸ್‌ಗೆ ಸುಮಾರು 30-35 ಸಾವಿರ ರೂ. ಡೀಸೆಲ್ಗಾಗಿ ವ್ಯಯ ಮಾಡಬೇಕಾಗುತ್ತದೆ. ಇನ್ನೂ ಈ ವಾಹನಗಳು ಕಂಪೆನಿ ವಿಮಾ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ವಿಮೆ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ದುರಸ್ತಿ ನಡೆಯುವುದರಿಂದ ವಿಳಂಬಕ್ಕೆ ಕಾರಣವಾಗಲಿದೆ.
ವೋಲ್ವೋ ಬಸ್ಸಿನ ಮುಂಭಾಗದ ಗಾಜು ಒಡೆದರೆ ಅದನ್ನು ಬೆಂಗಳೂರಿನಿಂದ ತರಿಸಿಕೊಂಡು ಅಳವಡಿಸಲಾಗುತ್ತದೆ. ಈ ಕಾರ್ಯಕ್ಕೆ ಕನಿಷ್ಠ ಐದಾರು ದಿನ ಬೇಕಾಗುತ್ತಿದೆ. ಸಣ್ಣ ಕಾರ್ಯಕ್ಕೆ ಇಷ್ಟೊಂದು ದಿನ ಬೇಕಾಗಿರುವುದರಿಂದ ತೀವ್ರ ಜಖಂಗೊಂಡಿರುವ ಬಸ್‌ಗಳ ದುರಸ್ತಿಗೆ ಇನ್ನೆಷ್ಟು ದಿನ ಬೇಕಾಗುತ್ತದೆ ಎಂಬುದು ಸಂಸ್ಥೆಯ ತಾಂತ್ರಿಕ ಸಿಬ್ಬಂದಿ ಅಭಿಪ್ರಾಯವಾಗಿದೆ.
•ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.