ಮಕ್ಕಳಿಗೆ ಕಣ್ಣಿನ ಸಮಸ್ಯೆ ಬರಬಹುದು, ಎಚ್ಚರ

ಮೊಬೈಲ್‌, ಲ್ಯಾಪ್‌ಟಾಪ್‌ ನೋಡೋದ್ರಿಂದ ಕಾಳಜಿ ಅಗತ್ಯ­ನಿಷ್ಕಾಳಜಿ ತೋರಿದರೆ ಭವಿಷ್ಯ ಅಂಧಕಾರ

Team Udayavani, Jul 3, 2021, 4:23 PM IST

1149405030hub-6a

ವರದಿ: ಅಮರೇಗೌಡ ಗೋನವಾರ

ಹುಬ್ಬಳ್ಳಿ: ಮೊಬೈಲ್‌ ಮುಟ್ಟಬೇಡ, ಹೆಚ್ಚು ಟಿವಿ ನೋಡಬೇಡ, ಕಂಪ್ಯೂಟರ್‌-ಲ್ಯಾಪ್‌ಟಾಪ್‌ ಮುಂದೆ ಕೂಡಬೇಡ ಎಂದು ಬುದ್ಧಿ ಹೇಳುತ್ತಿದ್ದ, ಬೈಯುತ್ತಿದ್ದ ಪಾಲಕರೇ ಇಂದು ಆನ್‌ಲೈನ್‌ ಶಿಕ್ಷಣಕ್ಕಾಗಿ ಮೊಬೈಲ್‌, ಟ್ಯಾಬ್‌ ಹಾಗೂ ಲ್ಯಾಪ್‌ಟಾಪ್‌ಗ್ಳನ್ನು ಮಕ್ಕಳಿಗೆ ನೀಡಬೇಕಿದೆ. ಇದರಿಂದ ಅವರ ನೇತ್ರ ಆರೋಗ್ಯ ಮೇಲಾಗುವ ದುಷ್ಪರಿಣಾಮ ತಪ್ಪಿಸಲು ಸೂಕ್ತ ಕಾಳಜಿ-ಮುಂಜಾಗ್ರತೆ ಅತ್ಯವಶ್ಯ. ಹೀಗೆಂದವರು ಬೆಳಗಾವಿಯ ಆಯುಷ್‌ ಆಸ್ಪತ್ರೆಯ ಜೀವಕ ನೇತ್ರ ವಿಭಾಗದ ತಜ್ಞ ವೈದ್ಯ ಡಾ|ಚಂದ್ರಶೇಖರ ಸಿದ್ದಾಪುರ.

“ಉದಯವಾಣಿ’ ಜತೆ ಮಾತನಾಡಿದ ಅವರು ಹೇಳಿದ್ದಿಷ್ಟು: ಮೊಬೈಲ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಟಿ.ವಿ.ಗಳ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವವರು, ದೊಡ್ಡವರಿರಲಿ, ಮಕ್ಕಳಿರಲಿ ನೇತ್ರ ರಕ್ಷಣೆ ಬಗ್ಗೆ ಕಾಳಜಿ ತೋರದಿದ್ದರೆ ಸಮಸ್ಯೆಗೆ ಒಳಗಾಗುವುದು ಖಂಡಿತ. ವಿಶೇಷವಾಗಿ ಮಕ್ಕಳು ಆನ್‌ಲೈನ್‌ ಶಿಕ್ಷಣ ಎಂದು ಕನಿಷ್ಠ ನಾಲ್ಕೈದು ತಾಸು ಮೊಬೈಲ್‌, ಟ್ಯಾಬ್‌, ಮೊಬೈಲ್‌ ಮುಂದೆ ಕುಳಿತುಕೊಳ್ಳುತ್ತಿರುವ ಕಾರಣ ನೇತ್ರದ ಸಮಸ್ಯೆ ಎದುರಿಸುವ ಸಂಭವ ಅಧಿಕವಾಗಿದೆ.

ಕಂಪ್ಯೂಟರ್‌ನಿಂದ ನೇತ್ರದ ಮೇಲಾಗುವ ದುಷ್ಪರಿಣಾಮಗಳನ್ನು ಕಂಪ್ಯೂಟರ್‌ ವಿಷನ್‌ ಸಿಂಡ್ರೋಮ್‌ ಎಂದು ವೈದ್ಯಕೀಯ ಭಾಷೆಯಲ್ಲಿ ರಿಪಿಟೆಡ್‌ ಸ್ಟ್ರೆಸ್‌ ಇಂಬೂರಿ(ಆರ್‌ಎಸ್‌ಐ) ಎಂದು ಕರೆಯಲಾಗುತ್ತಿದೆ. ಇದೀಗ ಮೊಬೈಲ್‌, ಟ್ಯಾಬ್‌ಗಳಿಂದ ಬರುವ ಸಮಸ್ಯೆಯನ್ನು ವಿಡಿಯೋ ಡಿಸ್‌ಪ್ಲೇ ಟರ್ಮಿನಲಿ (ವಿಡಿಟಿ) ಎಂದು ವ್ಯಾಖ್ಯಾನಿಸಲಾಗುತ್ತಿದೆ. ಒಂದು ಸಮೀಕ್ಷೆ ಪ್ರಕಾರ ಕಂಪ್ಯೂಟರ್‌ ಮುಂದೆ ಹೆಚ್ಚು ಇರುವ ಶೇ.50-70 ಜನರಲ್ಲಿ ಕಂಪ್ಯೂಟರ್‌ ವಿಷನ್‌ ಸಿಂಡ್ರೋಮ್‌ ಸಮಸ್ಯೆ ಕಂಡುಬಂದಿದೆ.

ಅತಿಯಾದ ಕಂಪ್ಯೂಟರ್‌, ಟಿ.ವಿ., ಮೊಬೈಲ್‌ ಬಳಕೆಯಲ್ಲಿ ತೊಡಗುವ ಯುವಕರು, ಇತರೆ ವಯೋಮಾನದವರಲ್ಲಿ ನೇತ್ರ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇನ್ನು ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವವರು, ಸಾಮಾನ್ಯವಾಗಿ ಕಣ್ಣನ್ನು ಅತೀ ಕಡಿಮೆ ಪ್ರಮಾಣದಲ್ಲಿ ಪಿಳುಕಿಸುವುದರಿಂದ ಕಣ್ಣಿನಲ್ಲಿನ ತೇವಾಂಶ ಕಡಿಮೆಯಾಗುತ್ತದೆ.

ಕಂಪ್ಯೂಟರ್‌, ಮೊಬೈಲ್‌ ಪರದೆಯಿಂದ ಹೊರಸೂಸುವ ವಿಕಿರಣಗಳು, ಪರದೆಯಲ್ಲಿ ಅಳವಡಿಸಲಾದ ಪ್ರಕಾಶಮಾನ ಬೆಳಕಿನ ಸಲಕರಣೆಗಳು, ಕಂಪ್ಯೂಟರ್‌, ಮೊಬೈಲ್‌ ಗಳನ್ನು ಅವೈಜ್ಞಾನಿಕ ಅಂತರದಲ್ಲಿ ಇರಿಸಿಕೊಂಡು ವೀಕ್ಷಣೆ ಸೇರಿದಂತೆ ವಿವಿಧ ಕಾರಣಗಳಿಂದ ನೇತ್ರ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ. ಅದೇ ರೀತಿ ಮಕ್ಕಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಇವು ಕಾಣಿಸಿಕೊಳ್ಳಲಾರಂಭಿಸುತ್ತವೆ. ಇಂತಹ ರೋಗ ಲಕ್ಷಣ ಇದ್ದವರಲ್ಲಿ ಅತಿಯಾದ ಕಣ್ಣಿನ ನೋವು, ವಿಪರೀತ ಉರಿ ಮತ್ತು ತೇವಾಂಶ ಇಲ್ಲದಿರುವುದು, ಅಸ್ಪಷ್ಟ ದರ್ಶನ, ಪ್ರಕಾಶ ಅಸಹಿಷ್ಣುತೆ, ತಲೆನೋವು ಇನ್ನಿತರೆ ಸಮಸ್ಯೆಗಳು ಕಾಣತೊಡಗುತ್ತವೆ. ಮೊಬೈಲ್‌, ಟ್ಯಾಬ್‌, ಲ್ಯಾಪ್‌ ಟಾಪ್‌ಗ್ಳ ಪರದೆಯಿಂದ ಬೀರುವ ಬೆಳಕು ಮಕ್ಕಳ ಕಣ್ಣಿನ ಮೇಲೆ ಪ್ರತಿಫಲನಗೊಳ್ಳದಂತೆ ಸರಿಯಾದ ಬೆಳಕಿನ ವ್ಯವಸ್ಥೆ ಕೈಗೊಳ್ಳಬೇಕು. ಆ್ಯಂಟಿಗ್ಲೆರ್‌ ಸ್ಕ್ರಿನ್‌ ಉಪಯೋಗಿಸಬೇಕಿದೆ. ಜತೆಗೆ ಮಕ್ಕಳಿಗೆ ಆನ್‌ ಲೈನ್‌ ತರಗತಿ ವೀಕ್ಷಣೆ ವೇಳೆ ಸಾಕಷ್ಟು ಬಾರಿ ಕಣ್ಣು ಪಿಳುಕಿಸುವ ತಿಳಿವಳಿಕೆ ನೀಡಬೇಕಿದೆ. ಜತೆಗೆ ಕಣ್ಣಿನ ಆರೋಗ್ಯ ಸಂರಕ್ಷಣೆಗೆ ಕೆಲ ಸರಳ-ಸುಲಭ ವ್ಯಾಯಾಮಗಳಿದ್ದು ಅವುಗಳನ್ನು ತಿಳಿಸುವ, ಮಕ್ಕಳನ್ನು ಯೋಗದಲ್ಲಿ ತೊಡಗಿಸುವ ಕೆಲಸ ಮಾಡಬೇಕಿದೆ. ನೇತ್ರ ವ್ಯಾಯಾಮದಿಂದ ನೇತ್ರ ನರಗಳಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿ, ನೇತ್ರಗಳ ಆರೋಗ್ಯಕ್ಕೆ ಅನುಕೂಲವಾಗಲಿದೆ.

ಟಾಪ್ ನ್ಯೂಸ್

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

13-belagavi

ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರಗೆ ದಾಖಲು

Yasin Malik

SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ

ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ

ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ

11-uv-fusion

Cold Weather: ಕೊನೆಗೂ ಚಳಿ ಶುರು ಆಯ್ತು ಗುರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-belagavi

ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರಗೆ ದಾಖಲು

10(1

Mannagudda: ಗುಜರಿ ಕಾರುಗಳ ಪಾರ್ಕಿಂಗ್‌; ಸಾರ್ವಜನಿಕರಿಗೆ ಸಮಸ್ಯೆ

9(1

Mangaluru: ರಸ್ತೆ, ಸರ್ಕಲ್‌ಗೆ ಸ್ಥಳೀಯ ನಾಮಕರಣ ಪ್ರಸ್ತಾವ

1-edd

Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು

8-ckm

Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

13-belagavi

ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರಗೆ ದಾಖಲು

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.