ಧಾರವಾಡ ವಕೀಲರ ಸಂಘದ ಅಧ್ಯಕ್ಷರಾಗಿ ಬೆಳ್ಳಕ್ಕಿ ಆಯ್ಕೆ

Team Udayavani, Apr 8, 2017, 1:21 PM IST

hub1.jpg

ಧಾರವಾಡ: ಇಲ್ಲಿಯ ಧಾರವಾಡ ವಕೀಲರ ಸಂಘದ ಆಡಳಿತ ಮಂಡಳಿಗೆ ಶುಕ್ರವಾರ ಚುನಾವಣೆ ನಡೆಯಿತು. ಕಳೆದ ಮೂರು ಅವಧಿಗೆ ವಕೀಲರ ಸಂಘದ ಅಧ್ಯಕ್ಷರಾಗಿದ್ದ ವಿ.ಡಿ.ಕಾಮರೆಡ್ಡಿ ವಿರುದ್ಧ ಈ ಸಲ ಆರ್‌.ಯು.ಬೆಳ್ಳಕ್ಕಿ ಕಣಕ್ಕಿಳಿದು ಜಯಶಾಲಿಯಾದರು.

ಆರ್‌ .ಯು.ಬೆಳ್ಳಕ್ಕಿ 518 ಮತ ಪಡೆದು ಗೆಲುವು ಸಾಧಿಸಿದರೆ, ವಿ.ಡಿ.ಕಾಮರೆಡ್ಡಿ 457 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದ ಪ್ರಕಾಶ ಉಡಿಕೇರಿ 427 ಮತ ಪಡೆದು ಗೆಲುವು ಸಾಧಿಸಿದರೆ ಅವರ ಪ್ರತಿಸ್ಪರ್ಧಿಗಳಾದ ಆರ್‌.ಜಿ.ನಾಯ್ಡು (189), ಆರ್‌.ಎಚ್‌.ಯಲಿಗಾರ (186), ವೈ.ಪಿ.ಮದೂರ (178) ಮತ ಪಡೆದರು. 

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹಿಂದಿನ ಬಾರಿ ಕಾರ್ಯದರ್ಶಿಯಾಗಿದ್ದ ಸಿ.ಎಸ್‌.ಪೊಲೀಸ್‌ ಪಾಟೀಲ ಈ ಸಲವೂ 505 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಸಚಿನ ಕುಲಕರ್ಣಿ (480) ಅವರನ್ನು ಸೋಲಿಸಿದರು. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್‌.ಬಿ.ಬನ್ನೂರ 487 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿ ಸ್ಪರ್ಧಿ ವಿ.ಎಂ.ಸಾಲಿ (422) ಅವರನ್ನು ಮಣಿಸಿದರು. 

ಖಜಾಂಚಿ ಹುದ್ದೆಗೆ ಸ್ಪರ್ಧಿಸಿದ್ದ ಎನ್‌.ಆರ್‌.ಮಟ್ಟಿ 450 ಮತಗಳನ್ನು ಪಡೆದು ಆಯ್ಕೆಯಾದರೆ, ಅವರ ಪ್ರತಿಸ್ಪರ್ಧಿಗಳಾದ ಪ್ರಕಾಶ ರಟಗೇರಿ (388) ಹಾಗೂ ವಿ.ಎಚ್‌.ಪಾಟೀಲ (169) ಮತಗಳನ್ನು ಪಡೆದರು. ಇನ್ನು ಕಾರ್ಯಕಾರಿ ಆಡಳಿತ ಮಂಡಳಿಗೆ ಕಣದಲ್ಲಿದ್ದ 11 ಜನರ ಪೈಕಿ ಹೇಮಂತ್‌ ಕನಕಿಕೊಪ್ಪ (721), ಶ್ರೀಧರ್‌ ಹಂಚಿನಾಳ (641), ಸಂತೋಷ ಗೋಡಿ (521), ಮಹೇಶ ಕೆಲಗೇರಿ (504), ವೀರಣ್ಣ ಕಾಜಗಾರ (477), ಕಲ್ಮೇಶ ನಿಂಗಣ್ಣವರ (473) ಮತ ಪಡೆದು ಆಯ್ಕೆಗೊಂಡಿದ್ದಾರೆ. 

ಉಳಿದಂತೆ ಮಹಿಳಾ ಪ್ರತಿನಿಧಿ ಹುದ್ದೆಗೆ ಸ್ಪರ್ಧಿಸಿದ್ದ ರೂಪಾ ಕೆಂಗಾನೂರ 510 ಮತ ಪಡೆದು ಗೆಲುವು ಸಾಧಿಸಿದರೆ, ಅವರ ಪ್ರತಿಸ್ಪರ್ಧಿ ಸಾವಿತ್ರಿ ಕುಲಕರ್ಣಿ 450 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್ ವ್ಯವಸ್ತೆ ಮಾಡಲಾಗಿತ್ತು. 

ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ನಡೆದ ಮತದಾನದಲ್ಲಿ ಒಟ್ಟು 1139 ಮತಗಳ ಪೈಕಿ 987 ಮತಗಳು ಚಲಾವಣೆಗೊಂಡಿವೆ. ಸಂಜೆ ಮತದಾನ ಮುಗಿದ ಬಳಿಕ ಮತ ಎಣಿಕೆ ತಡರಾತ್ರಿವರೆಗೂ ನಡೆಯಿತು. ಮತ ಎಣಿಕೆ ಆದಂತೆ ಫಲಿತಾಂಶ ಪ್ರಕಟಿಸಲಾಯಿತು. ವಿಜೇತರ ಬೆಂಬಲಿಗರು ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. 

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

P.-Joshi

Bengaluru Jail: ಸರಕಾರದಿಂದಲೇ ದರ್ಶನ್‌ ಕೇಸ್‌ ಫೋಟೋ ವೈರಲ್‌: ಪ್ರಹ್ಲಾದ್‌ ಜೋಶಿ ಕಿಡಿ

Dharwad: ಮಹದಾಯಿ ಬಗ್ಗೆ ವನ್ಯಜೀವಿ ಮಂಡಳಿ ನಿರ್ಲಕ್ಷ್ಯ: ಸಚವ‌ ಲಾಡ್ ಕಿಡಿ

Dharwad: ಮಹದಾಯಿ ಬಗ್ಗೆ ವನ್ಯಜೀವಿ ಮಂಡಳಿ ನಿರ್ಲಕ್ಷ್ಯ: ಸಚವ‌ ಲಾಡ್ ಕಿಡಿ

Dharwad;ವೀರಶೈವ ಮಹಾಸಭೆಗೆ ಸದ್ಯಕ್ಕಿಲ್ಲ ಆಡಳಿತಾತ್ಮಕ ಅಧಿಕಾರ; ಜಿಎಂಎಫ್‌ಸಿ ನ್ಯಾಯಾಲಯ ಆದೇಶ

Dharwad;ವೀರಶೈವ ಮಹಾಸಭೆಗೆ ಸದ್ಯಕ್ಕಿಲ್ಲ ಆಡಳಿತಾತ್ಮಕ ಅಧಿಕಾರ; ಜಿಎಂಎಫ್‌ಸಿ ನ್ಯಾಯಾಲಯ ಆದೇಶ

Hubli; ಬ್ಯಾಂಕ್‌ ದೋಚಲು ಯತ್ನಸಿದ ವ್ಯಕ್ತಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು

Hubli; ಬ್ಯಾಂಕ್‌ ದೋಚಲು ಯತ್ನಸಿದ ವ್ಯಕ್ತಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು

Hubballi: ಮಲಪ್ರಭಾ ಬಚಾವೋ ಆಂದೋಲನಕ್ಕೆ ಚಿಂತನೆ

Hubballi: ಮಲಪ್ರಭಾ ಬಚಾವೋ ಆಂದೋಲನಕ್ಕೆ ಚಿಂತನೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.