ಅಪಾಯಕಾರಿ ರಸ್ತೆ ಮೇಲೆ ವಾಹನ ಸವಾರರ ಸರ್ಕಸ್
Team Udayavani, Dec 12, 2019, 11:44 AM IST
ಹುಬ್ಬಳ್ಳಿ: ನೆರೆಯಿಂದ ಹಾನಿಗೊಳಗಾದ ಇಲ್ಲಿನ ಸಿದ್ದಲಿಂಗೇಶ್ವರ ಕಾಲೋನಿಯ ಪ್ರಮುಖ ರಸ್ತೆ ದುರಸ್ತಿ ಕಾರ್ಯ ವಿಳಂಬವಾಗಿದ್ದು, ಜನರು ನಿತ್ಯ ಓಡಾಡಲು ಸಂಕಷ್ಟ ಅನುಭವಿಸುವಂತಾಗಿದೆ. ಇಲ್ಲಿನ ಜನರಿಗೆ ಇದೊಂದು ಅಪಾಯಕಾರಿ ರಸ್ತೆಯಾಗಿ ಮಾರ್ಪಟ್ಟಿದೆ.
ಮೂರು ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದ ಉಣಕಲ್ಲ ಕೆರೆ ಕೋಡಿ ಹರಿದ ಪರಿಣಾಮ ಇಲ್ಲಿನ ನಾಲಾ ಪಕ್ಕದಲ್ಲಿದ್ದ ರಸ್ತೆ ಬಹುತೇಕ ಕೊಚ್ಚಿ ಹೋಗಿತ್ತು. ಮೂರು ತಿಂಗಳಿಂದಲೂ ಇಲ್ಲಿನ ಜನರು ವಿಧಿಯಿಲ್ಲದೆ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಪ್ರಾಣ ಕೈಯಲ್ಲಿಡಿದುಕೊಂಡು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಯಿಂದಾಗಿ ಆರಂಭದಲ್ಲಿ ರಸ್ತೆ ನಿರ್ಮಾಣ ಸಾಧ್ಯವಾಗಿರಲಿಲ್ಲ. ಮಳೆ ನಿಂತ ಮೇಲೆ ಕಾಮಗಾರಿ ಆರಂಭಿಸಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳೀಯರು ಪಾಲಿಕೆಗೆ ಮನವಿ ಮಾಡಿದ್ದಾರೆ.
ಆದರೆ ಇಲ್ಲಿಯವರೆಗೂ ಪಾಲಿಕೆಯಿಂದ ಯಾವುದೇ ಕಾರ್ಯಗಳು ನಡೆಯದ ಕಾರಣ ಸ್ಥಳೀಯರು ಸಮಸ್ಯೆ ಅನುಭವಿಸುವಂತಾಗಿದೆ. ಪಕ್ಕದ ಸೇತುವೆ ರಸ್ತೆ ದುರಸ್ತಿ ಮಾಡಿದ್ದು, ಈ ರಸ್ತೆಯನ್ನು ಕಡೆಗಣಿಸಲಾಗಿದೆ ಎಂಬುವುದು ಸ್ಥಳೀಯರ ಅಸಮಾಧಾನ. ಇಷ್ಟೊಂದು ರಸ್ತೆ ಕೊಚ್ಚಿ ಹೋಗಿರುವಾಗ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನಚ್ಚೆರಿಕೆಯಾಗಿ ಒಂದಿಷ್ಟು ಕ್ರಮಗಳನ್ನು ಕೈಗೊಂಡಿಲ್ಲ. ದುರಸ್ತಿ ಕಾರ್ಯ ವಿಳಂಬವಾಗುತ್ತಿರುವುದರಿಂದ ದ್ವಿಚಕ್ರ ವಾಹನಗಳು ಓಡಾಡಿದರೂ ಮಣ್ಣು ಕುಸಿಯುತ್ತಿದೆ. ಯಾವುದಾದರೂ ಅವಘಡಗಳು ಸಂಭವಿಸುವ ಮುನ್ನೆ ಪಾಲಿಕೆ ಎಚ್ಚರಗೊಳ್ಳಬೇಕು ಎಂಬುವುದು ಸ್ಥಳೀಯರ ಒತ್ತಾಯವಾಗಿದೆ.
ಕೊಚ್ಚಿ ಹೋಗಿರುವ ಸ್ಥಳದಲ್ಲಿ ಕಸ ಮಿಶ್ರಿತ ಮಣ್ಣು ಸುರಿಯಲಾಗುತ್ತಿದೆ. ಹಾಗೊಮ್ಮೆ ಹೀಗೊಮ್ಮೆ ಸುರಿಯುತ್ತಿರುವ ಮಣ್ಣು ನೀರು ಪಾಲಾಗುತ್ತಿದೆಯೇ ವಿನಃ ರಸ್ತೆಯಾಗುತ್ತಿಲ್ಲ. ಹೀಗಾಗಿ ಈ ರಸ್ತೆಯಲ್ಲಿ ಬೈಕ್ ಹೊರತುಪಡಿಸಿ ಇತರೆ ಯಾವುದೇ ವಾಹನಗಳ ಸಂಚರಿಸಿದಂತಾಗಿದೆ. ಹೀಗಾಗಿ ಸುತ್ತು ಹಾಕಿಕೊಂಡು ಓಡಾಡುವಂತಾಗಿದೆ. ಇಲ್ಲಿನ ಜನರನ್ನು ಸಮಾಧಾನ ಪಡಿಸಲು ಕೊಚ್ಚಿ ಹೋಗಿರುವ ಸ್ಥಳದಲ್ಲಿ ಕಸ ಮಿಶ್ರಿತ ಮಣ್ಣು ಸುರಿಯಲಾಗುತ್ತಿದೆ ಎಂಬುವುದು ಸ್ಥಳೀಯರ ಆಕ್ರೋಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.