ಇನ್ನೆರಡೇ ವರ್ಷದಲ್ಲಿ ಸ್ಮಾರ್ಟ್‌ ಆಗುತ್ತಂತೆ ಸಿಟಿ!

|ಯೋಜನೆಯ ಪ್ರಗತಿ ವರದಿ ಕೊಟ್ಟ ಎಂಡಿ |ಇನ್ನಾರು ತಿಂಗಳಲ್ಲಿ ಒಟ್ಟಾರೆ 12 ಕಾಮಗಾರಿ ಪೂರ್ಣ

Team Udayavani, Jun 26, 2019, 9:28 AM IST

hubali-tdy-2..

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳ ಪ್ರಗತಿ ಕುರಿತು ಶಕೀಲ್ ಅಹ್ಮದ್‌ ಮಾಹಿತಿ ನೀಡಿದರು.

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಇದುವರೆಗೆ ಅಂದಾಜು 3.16 ಕೋಟಿ ರೂ. ವೆಚ್ಚದ ಆರು ಯೋಜನೆಗಳು ಪೂರ್ಣಗೊಂಡಿದ್ದು, ಇನ್ನಾರು ತಿಂಗಳಲ್ಲಿ ಅಂದಾಜು 94.3 ಕೋಟಿ ರೂ. ವೆಚ್ಚದ ಆರು ಯೋಜನೆಗಳು ಪೂರ್ಣಗೊಳ್ಳಲಿವೆ. ಒಟ್ಟಾರೆ 54 ಯೋಜನೆಗಳು ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಸ್ಮಾರ್ಟ್‌ ಸಿಟಿ ಘೋಷಣೆಯಾಗಿ ನಾಲ್ಕು ವರ್ಷ ಮುಗಿದಿದೆ. ಹುಬ್ಬಳ್ಳಿ-ಧಾರವಾಡ ಎರಡನೇ ಹಂತದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ಸೇರ್ಪಡೆಗೊಂಡಿತ್ತು. 2017ರಲ್ಲಿ ಎಸ್‌ಪಿವಿ ಅಸ್ತಿತ್ವಕ್ಕೆ ಬಂದಿತ್ತು. ಕೇಂದ್ರ ಹಾಗೂ ರಾಜ್ಯ ಸರಕಾರಗಳ 1000 ಕೋಟಿ ರೂ. ಅನುದಾನದಲ್ಲಿ ಒಟ್ಟು 54 ಯೋಜನೆಗಳನ್ನು ಮೊದಲ ಹಂತದಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.

ಈಗ ಪೂರ್ಣಗೊಂಡಿದ್ದಿಷ್ಟು: ವಿವಿಧ ಕಾರಣಗಳಿಗಾಗಿ ಸ್ಮಾರ್ಟ್‌ಸಿಟಿ ಯೋಜನೆಗಳ ಅನುಷ್ಠಾನ ವಿಳಂಬವಾಗಿದ್ದು ನಿಜ. ಇದೀಗ ಬಹುತೇಕ ಯೋಜನೆಗಳು ತೀವ್ರತೆ ಪಡೆದುಕೊಂಡಿವೆ. ಈಗಾಗಲೇ 3.16 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಎಸ್‌ಪಿವಿ ವೆಬ್‌ಸೈಟ್, ಇ-ಶೌಚಾಲಯ, ರಾಜನಾಲಾ ಸ್ವಚ್ಛತೆ, ನ್ಯಾಪ್ಕಿನ್‌ ವೆಂಡಿಂಗ್‌ ಯಂತ್ರ ಅಳವಡಿಕೆ, ಪಾಲಿಕೆ ಕಟ್ಟಡಕ್ಕೆ ಮಳೆ ನೀರು ಕೊಯ್ಲು ಅಳವಡಿಕೆ ಯೋಜನೆಗಳು ಪೂರ್ಣಗೊಂಡಿವೆ ಎಂದು ವಿವರಿಸಿದರು.

ಅವಳಿ ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಬಹುತೇಕ ಪೂರ್ಣ ಹಂತಕ್ಕೆ ಬಂದಿದ್ದು, ಕೆಲವೊಂದು ಯಂತ್ರೋಪಕರಣಗಳು ಬಂದಿವೆ. ಇನ್ನಷ್ಟು ಯಂತ್ರಗಳು ಬರಬೇಕಾಗಿದೆ. ಕೆಲವೇ ತಿಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾನುಷ್ಠಾನಗೊಳ್ಳಲಿವೆ ಎಂದು ಹೇಳಿದರು.

1ರಂದು ಮಂಡಳಿ ಸಭೆ: ಜು. 1ರಂದು ಬೆಂಗಳೂರಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಯೋಜನೆಗಳ ಕಾಮಗಾರಿ ತ್ವರಿತಕ್ಕೆ ಇನ್ನಷ್ಟು ಕ್ರಮಗಳ ಕುರಿತಾಗಿ ಚರ್ಚಿಸಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹು-ಧಾ ಸ್ಮಾರ್ಟ್‌ ಸಿಟಿ ಯೋಜನೆ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಕೌಲಗಿ, ಮುಖ್ಯ ಎಂಜಿನಿಯರ್‌ ಎಂ.ಎನ್‌. ನಾರಾಯಣ, ವಿಶೇಷಾಧಿಕಾರಿ ಎಸ್‌.ಎಚ್. ನರೇಗಲ್ ಇನ್ನಿತರರಿದ್ದರು.

ಅವಳಿ ನಗರದಲ್ಲಿ ಕಾಮಗಾರಿಗಳ ಸ್ಥಿತಿ-ಗತಿ:

ಒಟ್ಟು 54 ಯೋಜನೆಗಳಲ್ಲಿ ಇದುವರೆಗೆ 3.16 ಕೋಟಿ ರೂ. ವೆಚ್ಚದ 6 ಯೋಜನೆಗಳು ಪೂರ್ಣಗೊಂಡಿವೆ. 258.44 ಕೋಟಿ ರೂ. ವೆಚ್ಚದ 16 ಯೋಜನೆಗಳ ಟೆಂಡರ್‌ ಪ್ರಕ್ರಿಯೆ ಮುಗಿದ ಕಾರ್ಯಾದೇಶ ನೀಡಲಾಗಿದೆ. 250.44 ಕೋಟಿ ರೂ. ವೆಚ್ಚದ 15 ಯೋಜನೆಗಳಿಗೆ ಟೆಂಡರ್‌ ಆಹ್ವಾನಿಸಲಾಗಿದೆ. 94.3 ಕೋಟಿ ರೂ. ವೆಚ್ಚದ 6 ಯೋಜನೆಗಳ ಡಿಪಿಆರ್‌ ಸಿದ್ಧಗೊಂಡಿದ್ದು, ಒಂದುವರೆ ತಿಂಗಳಲ್ಲಿ ಟೆಂಡರ್‌ ಕರೆಯಲಾಗುತ್ತದೆ. 309.35 ಕೋಟಿ ರೂ. ವೆಚ್ಚದ 7 ಯೋಜನೆಗಳ ಫಿಜಿಬಿಲಿಟಿ ವರದಿ ಸಿದ್ಧಗೊಂಡಿದ್ದು, ಒಂದುವರೆ ತಿಂಗಳಲ್ಲಿ ಡಿಪಿಆರ್‌ ಸಿದ್ಧಗೊಳ್ಳಲಿದೆ ಎಂದು ಶಕೀಲ್ ಅಹ್ಮದ್‌ ವಿವರಿಸಿದರು.
ಒಂದೂವರೆ ತಿಂಗಳಲ್ಲಿ ಟೆಂಡರ್‌:

ಹೊಸೂರು ಕ್ರಾಸ್‌ನಲ್ಲಿರುವ ಡಾ| ಗಂಗಲ್ ಬಿಲ್ಡಿಂಗ್‌ನ 35 ಗುಂಟೆ ಜಾಗದಲ್ಲಿ ವಾಹನ ನಿಲುಗಡೆ, ಉಚಿತವಾಗಿ ಸಭಾಂಗಣ, ನವೋದ್ಯಮಿಗಳಿಗೆ ಉತ್ತೇಜನಕ್ಕೆ ಉಚಿತ ಸ್ಥಳಾವಕಾಶ, ಇಂಟರ್‌ನೆಟ್ ವ್ಯವಸ್ಥೆ, ವಾಣಿಜ್ಯ ಮಳಿಗೆಗಳು, ತರಬೇತಿ ಕೇಂದ್ರಗಳಿಗೆ ಅವಕಾಶ, ರೆಸ್ಟೋರೆಂಟ್ ವ್ಯವಸ್ಥೆಯ ಯೋಜನೆ ರೂಪಿಸಲಾಗಿದೆ. ಒಂದೂವರೆ ತಿಂಗಳಲ್ಲಿ ಟೆಂಡರ್‌ ಕರೆಯಲಾಗುವುದು ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರು ಹೇಳಿದರು.
200 ಜನರ ಸ್ಥಳಾಂತರ ಅಗತ್ಯ:
ಉಣಕಲ್ಲನಿಂದ ಗಬ್ಬೂರುವರೆಗಿನ ಸುಮಾರು 10.5 ಕಿಮೀ ಉದ್ದದ ನಾಲಾ ಅಭಿವೃದ್ಧಿ ನಿಟ್ಟಿನಲ್ಲಿ 200 ಜನರನ್ನು ಸ್ಥಳಾಂತರಿಸುವ ಅವಶ್ಯಕತೆ ಇದೆ. ನಾಲಾದ ಅಗಲ 12-25 ಮೀಟರ್‌ ಅಗತ್ಯವಾಗಿದ್ದು, ಕೆಲವೊಂದು ಕಡೆ ಈ ಪ್ರಮಾಣದಲ್ಲಿ ಇಲ್ಲದ್ದರಿಂದ 30ರಿಂದ 40 ಕಟ್ಟಡಗಳ ತೆರವು ಹಾಗೂ ಸುಮಾರು 200 ಜನರ ಸ್ಥಳಾಂತರ ಮಾಡಬೇಕಾಗುತ್ತದೆ. ನಾಲಾ ಎರಡು ಬದಿಯಲ್ಲಿ ಪಾದಚಾರಿ-ಸೈಕಲ್ ಮಾರ್ಗ, ತಿಂಡಿ-ತಿನಿಸುಗಳ ಮಾರಾಟಕ್ಕೆ ಸ್ಥಳಾವಕಾಶ, ಪಾರ್ಕ್‌, ಅವಶ್ಯವಿರುವ ಕಡೆ ಮಾರುಕಟ್ಟೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಕೀಲ್ ಅಹ್ಮದ್‌ ತಿಳಿಸಿದರು.
3,223 ಜನರಿಂದ ಇ-ಶೌಚಾಲಯ ದುರ್ಬಳಕೆ:

ಸ್ಮಾರ್ಟ್‌ಸಿಟಿ ಯೋಜನೆಯಡಿ ಅವಳಿ ನಗರದ ವಿವಿಧೆಡೆ ಇ-ಶೌಚಾಲಯ ನಿರ್ಮಿಸಲಾಗಿದೆ. ಇದುವರೆಗೆ ಸುಮಾರು 17 ಸಾವಿರಕ್ಕೂ ಅಧಿಕ ಜನರು ಇವುಗಳನ್ನು ಬಳಕೆ ಮಾಡಿದ್ದು, ಆ ಪೈಕಿ 3,223 ಜನರು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇ-ಶೌಚಾಲಯಕ್ಕೆ ನಾಣ್ಯಗಳನ್ನು ಬಳಸಬೇಕಾಗಿದೆ. ಆದರೆ ಕೆಲವರು ನಾಣ್ಯದ ಬದಲು ಕಬ್ಬಿಣದ ವೈಸರ್‌ಗಳನ್ನು ಬಳಕೆ ಮಾಡಿದ್ದಾರೆ. ಇಂದಿರಾಗಾಂಧಿ ಗಾಜಿನಮನೆ ಆವರಣದ ಇ-ಶೌಚಾಲಯದಲ್ಲಿ ಒಬ್ಬರು ನಾಣ್ಯ ಹಾಕಿ ನಾಲ್ಕೈದು ಜನ ಬಳಕೆ ಮಾಡಿಕೊಂಡಿದ್ದು ಸಹ ಪತ್ತೆಯಾಗಿದೆ ಎಂದು ಸ್ಮಾರ್ಟ್‌ಸಿಟಿ ಯೋಜನೆ ವಿಶೇಷಾಧಿಕಾರಿ ಎಸ್‌.ಎಚ್. ನರೇಗಲ್ ತಿಳಿಸಿದರು. ನಾಗರಿಕರು ಯೋಜನೆ ಬಳಕೆಗೆ ಮುಂದಾಗಬೇಕೆ ವಿನಃ ದುರ್ಬಳಕೆಗೆ ಮುಂದಾಗುವುದು ಸರಿಯಲ್ಲ ಎಂದರು.

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು

Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು

Hubballi: ಸಿಲಿಂಡರ್ ಸ್ಫೋಟ ಪ್ರಕರಣ… ಮತ್ತೋರ್ವ ಕೊನೆಯುಸಿರು, ಮೃತರ ಸಂಖ್ಯೆ 8ಕ್ಕೆ ಏರಿಕೆ

Hubballi: ಸಿಲಿಂಡರ್ ಸ್ಫೋಟ ಪ್ರಕರಣ… ಮತ್ತೋರ್ವ ಕೊನೆಯುಸಿರು, ಮೃತರ ಸಂಖ್ಯೆ 8ಕ್ಕೆ ಏರಿಕೆ

1-wre

ದಕ್ಷಿಣ ಭಾರತದ ಕುಸ್ತಿ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಧಾರವಾಡದ ಹಳ್ಳಿ ಪೈಲ್ವಾನ್

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.