![Government scraps ‘no-detention policy’ for Classes 5 and 8 in central schools](https://www.udayavani.com/wp-content/uploads/2024/12/school-1-415x229.jpg)
ಬಜೆಟ್ ಬಳಿಕವೇ ಸಾಲಮನ್ನಾ ಸ್ಪಷ್ಟ ಚಿತ್ರಣ
Team Udayavani, Jun 30, 2018, 4:06 PM IST
![30-june-16.jpg](https://www.udayavani.com/wp-content/uploads/2018/06/30/30-June-16.jpg)
ಧಾರವಾಡ: ರಾಜ್ಯದ ರೈತರ 32 ಸಾವಿರ ಕೋಟಿ ರೂ. ಸಾಲವನ್ನು ವಿವಿಧ ಹಂತಗಳಲ್ಲಿ ಮನ್ನಾ ಮಾಡಲು ಸರಕಾರ ಚಿಂತನೆ ನಡೆಸಿದ್ದು, ಬಜೆಟ್ ಮಂಡನೆ ಬಳಿಕವೇ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆರ್. ಶಂಕರ ಹೇಳಿದರು.
ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕರ್ನಾಟಕ ಅರಣ್ಯ ಇಲಾಖೆಯು ಧಾರವಾಡ, ಬೆಳಗಾವಿ ಹಾಗೂ ಕೆನರಾ ವೃತ್ತಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಭಾಗೀಯ ಕೃಷಿ ಅರಣ್ಯ ಕಾರ್ಯಾಗಾರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ವರ್ಷ 5 ಕೋಟಿ ಸಸಿ ನೆಡುವ ಗುರಿ ಇದ್ದು, ಇದನ್ನು 10 ಕೋಟಿ ಸಸಿಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದಲ್ಲದೇ ಕೃಷಿ ಅರಣ್ಯ ಪದ್ಧತಿಯ ರೈತರಿಗೆ ತುಂತುರು ನೀರಾವರಿ ಸೌಲಭ್ಯ ಕಲ್ಪಿಸಲು ನಿಯಮಾವಳಿಗಳ ಅಗತ್ಯ ಮಾರ್ಪಾಡು ಮಾಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಅರಣ್ಯ ಪ್ರದೇಶವಷ್ಟೇ ಅಲ್ಲದೇ ಕೃಷಿ ಭೂಮಿಯಲ್ಲಿಯೂ ಅರಣ್ಯ ಬೆಳೆಸಿ ಆದಾಯ ಹೆಚ್ಚಿಸಿಕೊಳ್ಳುವ ಆಸಕ್ತಿ ಹೊಂದಿರುವ
ರೈತರಿಗೆ ಇಂದಿನ ಕಾರ್ಯಾಗಾರದಿಂದ ಪ್ರಯೋಜನವಾಗಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ರಿಯಾಯಿತಿ ದರದಲ್ಲಿ ವಿತರಿಸಲಾಗುವ ಸಸಿಗಳನ್ನು ಪಡೆದು ರೈತರು ತಮ್ಮ ಹೊಲ, ಬದುಗಳಲ್ಲಿ ಬೆಳೆಯಬಹುದು ಎಂದು ಹೇಳಿದರು.
ಈ ಯೋಜನೆಯಡಿ ನೆಡಲಾದ ಪ್ರತಿ ಗಿಡಗಳಿಗೆ ಮೊದಲ ಹಾಗೂ ಎರಡನೇ ವರ್ಷ ತಲಾ 30 ರೂ., ಮೂರನೇ ವರ್ಷ 40 ರೂ.ಗಳಂತೆ ಒಂದು ಗಿಡ ಪೋಷಣೆ ಮಾಡಿದರೆ ಒಟ್ಟು 100 ರೂ. ನೀಡಲಾಗುತ್ತಿದೆ. ಇದನ್ನು ಗಿಡಗಳ ಸಂಖ್ಯೆಗೆ ಬದಲಾಗಿ ಎಕರೆವಾರು ಮಾಡಲು ಇಲಾಖೆಯ ಉನ್ನತ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ ಎಂದರು.
4 ಎಕರೆ ಜಮೀನಿನಲ್ಲಿ 1 ಸಾವಿರ ತೇಗ, 1 ಸಾವಿರ ಹೆಬ್ಬೇವು, 1 ಸಾವಿರ ಮಾವು, ಪೇರಲ, ನಿಂಬೆ ಬೆಳೆದಿರುವ ಶಿರಹಟ್ಟಿ ತಾಲೂಕಿನ ಕಡಕೋಡ ಗ್ರಾಮದ ಲಕ್ಷ್ಮವ್ವ ತಳವಾರ ಬೂದಿಹಾಳ ಹಾಗೂ ಗದಗ, ಧಾರವಾಡ, ಹಾವೇರಿ, ವಿಜಯಪುರ ಸಾಮಾಜಿಕ ಅರಣ್ಯ ವಿಭಾಗಗಳ 15 ಜನ ಕೃಷಿ ಅರಣ್ಯ ರೈತರನ್ನು ಸಚಿವರು ಸನ್ಮಾನಿಸಿದರು. ಅರಣ್ಯ ಇಲಾಖೆ ಪ್ರಕಟಿಸಿರುವ ಯಶೋಗಾಥೆಗಳ ಕಿರುಪುಸ್ತಕ, ಮಡಿಕೆ ಪತ್ರಗಳ ಬಿಡುಗಡೆ ನೆರವೇರಿಸಲಾಯಿತು. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರಾ ಅವರು ಕಾರ್ಯಾಗಾರದಲ್ಲಿ ಮಂಡನೆಯಾದ ವಿವಿಧ ವಿಷಯಗಳ ಸಾರಾಂಶ ವಿವರಿಸಿದರು.
ಗದಗ ಜಿಪಂ ಸದಸ್ಯ ವೀರನಗೌಡ ನಾಡಗೌಡರ್, ಅರಣ್ಯ ಪಡೆ ಮುಖ್ಯಸ್ಥ ಪುನಾತಿ ಶ್ರೀಧರ, ಕೃಷಿ ವಿವಿ ಕುಲಪತಿ ಡಾ| ವಿ.ಐ. ಬೆಣಗಿ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪುನೀತ ಪಾಠಕ್, ಅನಿತಾ ಅರೇಕಲ್, ರಾಧಾದೇವಿ, ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿಗಳಾದ ಶ್ರೀಕಾಂತ ಹೊಸೂರ, ಅಶೋಕ ಬಸರಕೋಡ, ಟಿ.ವಿ. ಮಂಜುನಾಥ, ಎ.ಎಂ. ಅಣ್ಣಯ್ಯ, ಡಾ| ಆಶಿತೋಷ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶಕುಮಾರ ಮೊದಲಾದವರಿದ್ದರು. ಗೀತಾಂಜಲಿ ಗೌಡರ್ ನಿರೂಪಿಸಿದರು. ವಿವಿಧ ತಳಿಗಳ ಬೀಜಗಳು, ಸಸಿಗಳು ಹಾಗೂ ಅರಣ್ಯ ಉತ್ಪನ್ನಗಳ ವಸ್ತು ಪ್ರದರ್ಶನವನ್ನು ಸಚಿವರು ವೀಕ್ಷಿಸಿದರು.
ಟಾಪ್ ನ್ಯೂಸ್
![Government scraps ‘no-detention policy’ for Classes 5 and 8 in central schools](https://www.udayavani.com/wp-content/uploads/2024/12/school-1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು](https://www.udayavani.com/wp-content/uploads/2024/12/alnv-150x87.jpg)
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
![ಪ್ರಹ್ಲಾದ ಜೋಶಿ](https://www.udayavani.com/wp-content/uploads/2024/12/pralhad-joshi-150x83.jpg)
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
![hubli-fire-incident-at-ayyappa-camp-nine-devotees-seriously-injured](https://www.udayavani.com/wp-content/uploads/2024/12/ayya-150x87.jpg)
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
![Joshi](https://www.udayavani.com/wp-content/uploads/2024/12/Joshi-2-150x90.jpg)
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
![Battery theft at Dharwad District Collector’s Office](https://www.udayavani.com/wp-content/uploads/2024/12/dc-2-150x87.jpg)
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![Government scraps ‘no-detention policy’ for Classes 5 and 8 in central schools](https://www.udayavani.com/wp-content/uploads/2024/12/school-1-150x83.jpg)
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
![1-biren](https://www.udayavani.com/wp-content/uploads/2024/12/1-biren-150x100.jpg)
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
![Team India; A spinner from the Karnataka coast who joined Team India as a replacement for Ashwin](https://www.udayavani.com/wp-content/uploads/2024/12/teamii-150x87.jpg)
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
![1-cris](https://www.udayavani.com/wp-content/uploads/2024/12/1-cris-150x93.jpg)
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
![Kambli-health](https://www.udayavani.com/wp-content/uploads/2024/12/Kambli-health-150x90.jpg)
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.