ಅತಿಕ್ರಮಣ; 60ಕ್ಕೂ ಅಧಿಕ ಮನೆ-ಅಂಗಡಿಗಳ ತೆರವು
Team Udayavani, Jun 15, 2020, 10:56 AM IST
ಹುಬ್ಬಳ್ಳಿ: ಇಲ್ಲಿನ ಅಮರಗೋಳದಲ್ಲಿ ಅಮರಗೋಳ- ಅಮ್ಮಿನಭಾವಿ ರಾಜ್ಯ ಹೆದ್ದಾರಿ 73ರಲ್ಲಿ ಅತಿಕ್ರಮಣಗೊಂಡಿದ್ದ ಜಾಗೆ ತೆರವುಗೊಳಿಸುವ ಕಾರ್ಯಾಚರಣೆ ಎರಡು ವರ್ಷಗಳ ನಂತರ ರವಿವಾರ ಬೆಳಗಿನ ಜಾವ ಸುಸೂತ್ರವಾಗಿ ನಡೆಯಿತು.
ಲೋಕೋಪಯೋಗಿ ಇಲಾಖೆಗೆ ಸೇರಿದ ಜಿಲ್ಲಾ ಮುಖ್ಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ, ಹು-ಧಾ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಸುಮಾರು ಆರು ಜೆಸಿಬಿ ಯಂತ್ರಗಳ ಮೂಲಕ ರಸ್ತೆ ಅತಿಕ್ರಮಣ ಮಾಡಿನಿರ್ಮಿಸಲಾಗಿದ್ದ 60ಕ್ಕೂ ಅಧಿಕ ಮನೆ, ಅಂಗಡಿಗಳನ್ನು ತೆರವು ಮಾಡಲಾಯಿತು.
ತೆರವು ಕಾರ್ಯಾಚರಣೆ ವೇಳೆ ಕೆಲವರು ಮಳೆಗಾಲದಲ್ಲಿ ತೆರವು ಮಾಡುವುದು ಬೇಡವೆಂದು ಆಕ್ಷೇಪಣೆ ವ್ಯಕ್ತಪಡಿಸಿ ಕಾರ್ಯಾಚರಣೆ ವಿರೋಧಿಸಿದರು. ಆಗಅಧಿಕಾರಿಗಳು ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ ನಂತರ ತೆರವು ಕಾರ್ಯಾಚರಣೆ ಮುಂದುವರಿಸಲಾಯಿತು.
ಅಮರಗೋಳ-ಅಮ್ಮಿನಭಾವಿ ಜಿಲ್ಲಾ ಮುಖ್ಯರಸ್ತೆಯ ಅಮರಗೋಳ ಮುಖ್ಯ ರಸ್ತೆಯ ಎರಡು ಬದಿ ಸುಮಾರು 400 ಮೀಟರ್ ವರೆಗೆ ಅತಿಕ್ರಮಣ ಮಾಡಿ ಮನೆ, ಅಂಗಡಿ ಹಾಗೂ ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಿದ್ದರಿಂದ ರಸ್ತೆ 3.5 ಮೀಟರ್‌ನಷ್ಟಾಗಿ ಇಕ್ಕಟ್ಟಾಗಿತ್ತು. ಇದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಿಡಬ್ಲ್ಯೂಡಿ ಅಧಿಕಾರಿಗಳು ರಸ್ತೆಯನ್ನು 15ಮೀಟರ್ ರಸ್ತೆಯನ್ನಾಗಿ ವಿಸ್ತರಿಸಲು ಮುಂದಾಗಿದ್ದರು. ಅದಕ್ಕಾಗಿ ಅತಿಕ್ರಮಿತ ಜಾಗ ಗುರುತಿಸಿ ಮಾರ್ಕ್ ಮಾಡಿದ್ದರು.ಇದರ ತೆರವು ಕಾರ್ಯಾಚರಣೆ ಕಳೆದ ಎರಡು ವರ್ಷಗಳಿಂದ ಹಾಗೆ ಬಾಕಿ ಉಳಿದಿತ್ತು.
ಶನಿವಾರ ಅಧಿಕಾರಿಗಳು ರಸ್ತೆ ಮಧ್ಯೆ ಭಾಗದಿಂದ ಬಲ ಭಾಗ 7.5 ಮೀಟರ್ ಹಾಗೂ ಎಡಭಾಗ 7.5 ಮೀಟರ್ ಗುರುತು ಹಾಕಿದ್ದರು. ರವಿವಾರ ಬೆಳಗ್ಗೆ ಪೊಲೀಸ್ ಬಂದೋಬಸ್ತ್ನೊಂದಿಗೆ ತೆರವು ಕಾರ್ಯಾಚರಣೆಗೆ ಮುಂದಾಗಿ ಸಂಜೆವರೆಗೆ ಪೂರ್ಣಗೊಳಿಸಿದರು. ಈ ವೇಳೆ ರಸ್ತೆ ಅತಿಕ್ರಮಿಸಿ ನಿರ್ಮಿಸಲಾಗಿದ್ದ ಕೆಲವು ಮನೆ, ಅಂಗಡಿಗಳು ಶೇ.50ಕ್ಕೂ ಅಧಿಕ ಭಾಗ ಹಾಗೂ ಧಾರ್ಮಿಕ ಕೇಂದ್ರ ಸೇರಿದಂತೆ ಕೆಲ ಮನೆ, ಅಂಗಡಿಗಳ ಭಾಗಶಃ ಭಾಗ ತೆರವುಗೊಳಿಸಲಾಯಿತು.
ಕೆಲವರು ಶನಿವಾರವೇ ತಮ್ಮ ಮನೆಗಳಲ್ಲಿನ ಸಾಮಗ್ರಿ ತೆರವು ಮಾಡಿಕೊಂಡಿದ್ದರು. ಇನ್ನು ಕೆಲವರು ಹಾಗೆ ಬಿಟ್ಟಿದ್ದರು. ಅವರೆಲ್ಲ ರವಿವಾರ ಬೆಳಗ್ಗೆ ತೆಗೆದುಕೊಳ್ಳಲು ಮುಂದಾದರು. ಕೆಲವರು ಹಾಗೆ ಬಿಟ್ಟಿದ್ದರಿಂದ ಅವುಗಳನ್ನೆಲ್ಲ ಜೆಸಿಬಿ ಯಂತ್ರಗಳಿಂದ ತೆರವು ಮಾಡಲಾಯಿತು. ಕಾರ್ಯಾಚರಣೆ ವೇಳೆ ಮನೆ, ಅಂಗಡಿ ತೆರವು ಆದ ಸುಮಾರು 95 ಫಲಾನುಭವಿಗಳಿಗೆ ಅಮರಗೋಳದ ಆಶ್ರಯ ಕಾಲೋನಿಯಲ್ಲಿ ಪರಿಹಾರಾರ್ಥವಾಗಿ ಒಂದು ನಿವೇಶನ ಹಾಗೂ ಅವಶ್ಯವುಳ್ಳವರಿಗೆ ರಾಜೀವ ಗಾಂಧಿ ವಸತಿ ಯೋಜನೆಯಡಿ ಮನೆ ಕಟ್ಟಿಸಿಕೊಳ್ಳಲು 2.75ಲಕ್ಷ ರೂ.ಹಣದ ಅವಕಾಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿ ಆಶ್ರಯ ಸಮಿತಿ ಸಭೆಯಲ್ಲಿ ಠರಾವು ಪಾಸ್ ಮಾಡಲಾಗಿತ್ತು. ಕಾರ್ಯಾಚರಣೆ ಸಂದರ್ಭದಲ್ಲಿ ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಹಾಗೂ ಸಿಬ್ಬಂದಿ, ತಹಶೀಲ್ದಾರ್ ಶಶಿಧರ ಮಾಡ್ಯಾಳ, ಡಿಸಿಪಿ ಆರ್.ಬಿ. ಬಸರಗಿ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಸಿಬ್ಬಂದಿ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.