ಒತ್ತುವರಿ ಎತ್ತುವರಿ : ಜಿಲ್ಲಾಧಿಕಾರಿ ನಿತೇಶ್ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ |
Team Udayavani, Mar 15, 2021, 2:49 PM IST
ಹುಬ್ಬಳ್ಳಿ: ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ ರಸ್ತೆ ಹಾಗೂ ಪಾದಚಾರಿಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಬಿಸಿ ಮುಟ್ಟಿಸಿದರು.
ರವಿವಾರ ಸಂಜೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ನೇತೃತ್ವದಲ್ಲಿ ಇಲ್ಲಿನ ದಾಜಿಬಾನಪೇಟೆ, ಪೆಂಡಾರ ಗಲ್ಲಿ, ಬೆಳಗಾಂವ ಗಲ್ಲಿ, ಕಲಾದಗಿ ಓಣಿ ಹಾಗೂ ದುರ್ಗದ ಬಯಲಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಪೊಲೀಸರ ಸಹಕಾರದೊಂದಿಗೆ ರಸ್ತೆ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದ ಅಂಗಡಿಗಳು, ಡಬ್ಟಾ ಅಂಗಡಿಗಳನ್ನು ತೆರವುಗೊಳಿಸಿದರು. ಪಾದಚಾರಿಮಾರ್ಗಗಳಲ್ಲಿ ಇಟ್ಟಿದ್ದ ವಸ್ತುಗಳನ್ನು ಜಪ್ತಿ ಮಾಡಲಾಯಿತು.
ನಗರದ ಪ್ರಮುಖ ರಸ್ತೆಗಳು ಸಾಕಷ್ಟು ಒತ್ತುವರಿಯಾಗಿದ್ದು, ಪಾಲಿಕೆಯಿಂದಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳುತ್ತಿಲ್ಲ ಎನ್ನುವ ದೂರಿನ ಮೇರೆಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಮಹಾನಗರ ಪೊಲೀಸ್ ಆಯುಕ್ತ ಲಾಭೂ ರಾಮ ಹಾಗೂ ಮಹಾನಗರಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಸ್ಥಳ ಪರಿಶೀಲನೆ ಮಾಡಿದ್ದರು. ನಂತರಮಹಾನಗರ ಪಾಲಿಕೆಯಿಂದ ಸ್ವಯಂಪ್ರೇರಣೆಯಿಂದ ತೆರವುಗೊಳಿಸಿಕೊಳ್ಳುವಂತೆಸೂಚನೆ ನೀಡಲಾಗಿತ್ತು. ಪಾಲಿಕೆ ಸೂಚನೆಪಾಲನೆ ಮಾಡದ ಹಿನ್ನೆಲೆಯಲ್ಲಿ ದಿಢೀರ್ ಕಾರ್ಯಾಚರಣೆ ಕೈಗೊಳ್ಳಲಾಯಿತು.ಸಂಗೊಳ್ಳಿ ರಾಯಣ್ಣ ವೃತ್ತದಿಂದದಾಜೀಬಾನ ಪೇಟೆ, ಪೆಂಡಾರ ಗಲ್ಲಿ ಹಾಗೂಬೆಳಗಾಂವ ಗಲ್ಲಿ ಮೂಲಕ ದುರ್ಗದ ಬಯಲಿಗೆ ತೆರಳಿದರು. ರಸ್ತೆಯುದ್ದಕ್ಕೂರಸ್ತೆ ಹಾಗೂ ಪಾದಚಾರಿ ಮಾರ್ಗ ಒತ್ತುವರಿಮಾಡಿಕೊಂಡಿರುವುದನ್ನು ಗುರುತಿಸಿತೆರವುಗೊಳಿಸಿದರು. ಕೆಲವೆಡೆ ಜನರುವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿಪಾಲಿಕೆ ಸಿಬ್ಬಂದಿಯಿಂದ ರಸ್ತೆ ಅಳತೆ ಮಾಡಿಸಿ ತೆರವುಗೊಳಿಸಲಾಯಿತು.
ಪಾಲಿಕೆ ಆಯುಕ್ತ ಡಾ| ಸುರೇಶ್‌ಇಟ್ನಾಳ್, ಉಪ ಪೊಲೀಸ್ ಆಯುಕ್ತಕೆ.ರಾಮರಾಜನ್, ಉಪ ವಿಭಾಗಾಧಿ ಕಾರಿ ಗೋಪಾಲಕೃಷ್ಣ, ತಹಶೀಲ್ದಾರ್ ಶಶಿಧರ ಮಾಡ್ಯಾಳ, ಪಾಲಿಕೆ ವಲಯಾಧಿಕಾರಿ ಎಸ್ .ಸಿ. ಬೇವೂರು, ಪಾಲಿಕೆ ಅಧಿಕಾರಿಗಳು, ಪೊಲೀಸ್ ಹಾಗೂ ಪಾಲಿಕೆ ಸಿಬ್ಬಂದಿ ಉಪಸ್ಥಿತರಿದ್ದರು.
ಹತ್ತೇ ದಿನದಲ್ಲಿ ಮತ್ತೆ ಒತ್ತುವರಿ! :
ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಈ ಹಿಂದೆ ಸ್ಥಳ ಪರಿಶೀಲನೆ ಮಾಡಿ ಸೂಚನೆ ನೀಡಲಾಗಿತ್ತು. ಅಂಗಡಿಯನ್ನು ಗೋದಾಮುಗಳನ್ನು ಮಾಡಿಕೊಂಡು ಪಾದಚಾರಿ ಮಾರ್ಗಗಳನ್ನು ಮಾರಾಟ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ಮಹಾನಗರ ಪಾಲಿಕೆ ರಸ್ತೆಗಳು ದೊಡ್ಡದಾಗಿದ್ದು, ಒತ್ತುವರಿಯಿಂದ ವಾಹನಗಳು, ಜನರು ಓಡಾದಂತಹಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಜನರಿಂದ ಸಾಕಷ್ಟು ದೂರುಗಳು ಬಂದಿದ್ದವು.ಕಳೆದ 10 ದಿನಗಳ ಹಿಂದೆ ಕಲಾದಗಿ ಓಣಿಯಲ್ಲಿ ತೆರವು ಮಾಡಿದ್ದರು. ಪುನಃ ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಮುಲಾಜಿಲ್ಲದೆ ಜಪ್ತಿ : ಸೂಚನೆ ನೀಡಿದ ನಂತರವೂ ತೆರವುಗೊಳಿಸದ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಮಾರಾಟಕ್ಕೆ ಇಟ್ಟಿದ್ದ ವಸ್ತುಗಳನ್ನುಮುಲಾಜಿಲ್ಲದೆ ಪಾಲಿಕೆ ವಾಹನಗಳಿಗೆ ತುಂಬಿದರು. ಇನ್ನೂ ಕೆಲವೆಡೆ ಡಬ್ಟಾ ಅಂಗಡಿ, ತಳ್ಳುವ ಗಾಡಿಗಳನ್ನು ವಶಕ್ಕೆ ಪಡೆದರು. ಹೆಚ್ಚುವರಿಯಾಗಿ ಕಟ್ಟಿದ್ದ ಮೆಟ್ಟಿಲು, ಕಟ್ಟೆಗಳನ್ನು ಜೆಸಿಬಿಯಿಂದ ಕೆಡವಿದರು. ಇನ್ನೂ ಅಂಗಡಿಗಳ ಮುಂಭಾಗದಲ್ಲಿ ಹಾಕಿದ್ದ ತಗಡಿನ ಶೆಡ್‌ಗಳನ್ನು ಕೂಡ ಬೀಳಿಸಿ ವಶಕ್ಕೆ ಪಡೆದರು. ಸುಮಾರು ಆರೇಳು ಟ್ರ್ಯಾಕ್ಟರ್ ಮೂಲಕ ವಸ್ತುಗಳನ್ನು ಜಪ್ತಿ ಮಾಡಲಾಯಿತು. ಜಪ್ತಿ ಮಾಡಿದ ವಸ್ತುಗಳನ್ನು ತುಂಬಲು ವಾಹನಗಳು ಇಲ್ಲದಂತಾಗಿತ್ತು. ಇಂತಹ ಕಾರ್ಯಾಚರಣೆ ಕಾಲಕಾಲಕ್ಕೆ ನಡೆದಿದ್ದರೆ ರಸ್ತೆಗಳು ಇಷ್ಟೊಂದು ಒತ್ತುವರಿಯಾಗುತ್ತಿರಲಿಲ್ಲ ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಯಿತು.
ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಾಲ ಕಾಲಕ್ಕೆ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಪ್ರತಿ ವಾರ ಒಂದೊಂದು ರಸ್ತೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುವುದು. ವಾಹನ ಪಾರ್ಕಿಂಗ್‌ಗಾಗಿ 94 ರಸ್ತೆಗಳನ್ನುಗುರುತಿಸಲಾಗಿದೆ. ಶೀಘ್ರವಾಗಿ ಪೊಲೀಸ್ ಆಯುಕ್ತರು ಅಧಿ ಸೂಚನೆ ಹೊರಡಿಸುವರು.54 ಬೀದಿ ಬದಿ ವ್ಯಾಪಾರಿ ಸ್ಥಳಗಳನ್ನು ಸಹ ಗುರುತಿಸಿ ಅ ಧಿಸೂಚಿಸಲಾಗಿದೆ. ಕೊಪ್ಪಿಕರ್‌ಹಾಗೂ ದಾಜಿಬಾನ್ ಪೇಟೆ ರಸ್ತೆಗಳು 18 ಮೀಟರ್ ಅಗಲವಾಗಿವೆ. ನಕ್ಷೆಯ ಅನುಸಾರ ರಸ್ತೆಯನ್ನು ಅಳೆದು ಒತ್ತುವರಿಯಾಗಿದ್ದರೆ ತೆರವುಗೊಳಿಸಲಾಗುವುದು. – ನಿತೇಶ ಪಾಟೀಲ, ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.