ಕುರ್ಚಿ ಉಳಿಸಿಕೊಳ್ಳಲು ಸಿಎಂ ಆರ್ ಎಸ್ಎಸ್ ಹೊಗಳುತ್ತಿದ್ದಾರೆ: ಸಿದ್ದರಾಮಯ್ಯ
Team Udayavani, Oct 16, 2021, 10:23 AM IST
ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆರ್ ಎಸ್ಎಸ್ ನವರು ಅಲ್ಲ. ಅವರ ತಂದೆ ಎಸ್.ಆರ್.ಬೊಮ್ಮಾಯಿ ಆರ್ ಎಸ್ಎಸ್ ನಲ್ಲಿ ಇದ್ದರಾ? ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿಎಂ ಆರ್ ಎಸ್ಎಸ್ ಹೊಗಳುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಣಕ್ಯ ವಿವಿ ಆರ್ ಎಸ್ಎಸ್ ಪ್ರೇರಿತವಾಗಿದ್ದು, ಅದಕ್ಕೆ ಕೆಐಎಡಿಬಿ ಭೂಮಿ ನೀಡಲಾಗುತ್ತಿದೆ. ಸಾವಿರ ಕೋಟಿ ಬೆಲೆಯ ಭೂಮಿಯನ್ನು 50 ಕೋಟಿಗೆ ನೀಡಲು ಹೊರಟಿದ್ದಾರೆ ಎಂದರು.
ಭಾರತ ಹಸಿವಿನ ಸೂಚ್ಯಂಕದಲ್ಲಿ 94 ರಿಂದ 101ನೇ ಸ್ಥಾನಕ್ಜೆ ಜಿಗಿದಿದೆ. ದೇಶದಲ್ಲಿ ನಿರುದ್ಯೋಗ, ಹಸಿವನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ನರೇಂದ್ರ ಮೋದಿಯವರ ಅಚ್ಚೇ ದಿನ್ ಕೊಡುಗೆ ಎಂದು ಟೀಕಿಸಿದರು.
ಮಾಜಿ ಸಂಸದ ವಿಎಸ್.ಉಗ್ರಪ್ಪ ಯಾರ ಶಿಷ್ಯ ಅಲ್ಲ. ಅವರು ಲೀಡರ್. ಕಮಿಷನ್ ವಿಚಾರದಲ್ಲಿ ವಿಶ್ವನಾಥ, ಬಸನಗೌಡ ಯತ್ನಾಳಗೆ ನಾನು ಹೇಳಿಕೊಟ್ಟಿದ್ನಾ ಎಂದರು.
ಅನ್ನ ಭಾಗ್ಯದಿಂದ ಜನರು ಸೋಮಾರಿಗಳಾಗುತ್ತಿದ್ದಾರೆ ಎಂಬುದು ಹೊಟ್ಟೆ ತುಂಬಿದವರು ಆಡುವ ಮಾತು. ಉಚಿತ ಅಕ್ಕಿ ಬಗ್ಗೆ ಬಡವರನ್ನು ಕೇಳಿ. ಹೊಟ್ಟೆ ತುಂಬಿದವರನ್ನಲ್ಲ. ಎಚ್.ಡಿ. ಕುಮಾರಸ್ವಾಮಿ ಮಾತಿಗೆ ಕಿಮ್ಮತ್ತು ಕೊಡಲ್ಲ. ಅವರ ಮಾತು ವೇದವಾಕ್ಯವಲ್ಲ ಎಂದರು.
ಇದನ್ನೂ ಓದಿ:ಅಲ್ಪಸಂಖ್ಯಾತ ನಾಯಕರ ʼರಾಜಕೀಯ ನರಮೇಧʼಕ್ಕೆ ಯಾರು ಕಾರಣವೆಂದು ಜನರಿಗೆ ಗೊತ್ತಾಗಲಿ: ಎಚ್ ಡಿಕೆ
ಟಿಪ್ಪು ಬಗ್ಗೆ ಸಿಎಂ ಇಬ್ರಾಹಿಂ ಗೆ ಗೊತ್ತಿಲ್ಲ ಅನ್ಸುತ್ತೆ. ನನ್ನನ್ನು ಭೇಟಿಯಾದರೆ ಟಿಪ್ಪು ಬಗ್ಗೆ ಇನ್ನೊಮ್ಮೆ ಓದಿಕೊಳ್ಳಲು ಹೇಳುತ್ತೇನೆ ಎಂದರು.
ಬಿಎಸ್ ಯಡಿಯೂರಪ್ಪ ಹಾಗೂ ನಾನು ಭೇಟಿ ಮಾಡಿದ್ದು ಅಪ್ಪಟ ಸುಳ್ಳು. ಅವರು ಆರ್ ಎಸ್ಎಸ್ ನಿಂದ ಬಂದವರು. ನಾನು ಆರ್ ಎಸ್ಎಸ್ ವಿರೋಧಿ. ಅವರನ್ನು ಭೇಟಿಯಾಗಿದ್ದು ದೃಢಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ. ಯಾವುದೇ ಹೊಸ ರಾಜಕೀಯ ಚಿಂತನೆ, ಮನ್ವಂತರ ಇಲ್ಲ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ಹಾಗೂ ದಲಿತರು ಸೇರಿದಂತೆ ಯಾರನ್ನಾದರೂ ಸಿಎಂ ಮಾಡಲಿ ಅದಕ್ಕೆ ನನ್ನ ಅಭ್ಯಂತರವಿಲ್ಲ. ಅದು ಪಕ್ಷದ ಹೈಕಮಾಂಡ್ ಮತ್ತು ಎಂಎಲ್ ಎಗಳು ಬಿಟ್ಟ ವಿಚಾರ ಎಂದು ಸಿದ್ದರಾಮಯ್ಯ ಹೇಳಿದರು.
ಜಾತಿ ಸಮೀಕ್ಷೆ 2015 ರಲ್ಲಿ ತಯಾರಾಗಿದ್ದರೆ ನಾನು ಅದನ್ನ ಅನುಷ್ಠಾನಕ್ಕೆ ತರುತ್ತಿದ್ದೆ. ಆದರೆ ಕುಮಾರಸ್ವಾಮಿ ಇದ್ದಾಗ ಸಮೀಕ್ಷೆ ವರದಿ ಬಂತು. ಅವರು ಅನುಷ್ಠಾನ ಮಾಡಲಿಲ್ಲ. ಜಗದೀಶ ಶೆಟ್ಟರಗೆ ಈ ಬಗ್ಗೆ ಗೊತ್ತಿಲ್ಲ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.