Hubli: ಹಳೇಹುಬ್ಬಳ್ಳಿ ಕೇಸು ಹಿಂಪಡೆದ ವಿಚಾರ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ
Team Udayavani, Oct 13, 2024, 2:34 PM IST
ಹುಬ್ಬಳ್ಳಿ: ಸಚಿವ ಸಂಪುಟದ ಉಪ ಸಮಿತಿಯಲ್ಲಿ ಯಾವುದು ಸುಳ್ಳು ಹಾಗೂ ಉದ್ದೇಶಪೂರ್ವಕವಾಗಿ ಮೊಕದ್ದಮೆ ಹಾಕಿದ್ದರೆ, ಹೋರಾಟ ಮಾಡಿದಾಗ ಕೇಸ್ ಹಾಕಿದ್ದರೆ ಅಂತಹ ಕೇಸ್‌ಗಳನ್ನು ವಾಪಸು ಪಡೆಯಲು ಅವಕಾಶವಿದೆ. ಅದೇ ರೀತಿ ಹಳೇಹುಬ್ಬಳ್ಳಿ ಕೇಸನ್ನು ಹಿಂಪಡೆಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಕಾಲದಲ್ಲೂ ಕೇಸ್ ವಾಪಸು ಪಡೆದ ಉದಾಹರಣೆಗಳಿವೆ. ಹಳೇ ಹುಬ್ಬಳ್ಳಿಯದು ಸುಳ್ಳು ಕೇಸ್ ಇದೆ ಎಂಬ ಕಾರಣಕ್ಕೆ ವಾಪಸು ಪಡೆಯಲಾಗಿದೆ. ಪ್ರಕರಣ ಕೋರ್ಟ್ ನಲ್ಲಿದೆ. ಕೋರ್ಟ್ ವಾಪಸು ತೆಗೆದುಕೊಳ್ಳಲು ಅವಕಾಶ ಕೊಟ್ಟರೆ ಮಾತ್ರ ವಾಪಸು ತೆಗೆದುಕೊಳ್ಳುವುದು. ಇಲ್ಲದಿದ್ದರೆ ಇಲ್ಲ ಎಂದರು.
ಜೋಶಿಯವರೇ ಭಯೋತ್ಪಾದಕರು: ಕಾಂಗ್ರೆಸ್‌ನವರು ಭಯೋತ್ಪಾದಕರ ಪರ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಜೋಶಿಯವರೇ ಭಯೋತ್ಪಾದಕ. ಬಿಜೆಪಿಯವರು ಎಲ್ಲಾ ಸುಳ್ಳು ವಿಚಾರಗಳ ಮೇಲೆಯೇ ಪ್ರತಿಭಟನೆ ಮಾಡುವುದು. ಅವರು ಸಹ ಅನೇಕ ಕೇಸ್‌ಗಳನ್ನು ವಿತ್ ಡ್ರಾ ಮಾಡಿದ್ದಾರೆ ಎಂದರು.
ವಿಧ್ವಂಸಕರ ಕೃತ್ಯಗಳಲ್ಲಿ ಭಾಗಿ ಆಗಿಲ್ಲ
ಹಳೇಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ದಾಖಲಾದವರು ಎಲ್ಲಿಯೂ ವಿಧ್ವಂಸಕರ ಕೃತ್ಯಗಳಲ್ಲಿ ಭಾಗಿ ಆಗಿಲ್ಲ ಅಂತ ಸಾಬೀತಾಗಿದೆ. ಹೀಗಾಗಿ ಆ ಪ್ರಕರಣ ಹಿಂಪಡೆಯಲಾಗಿತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಪ್ರತಿ ಹಂತದಲ್ಲೂ ರಾಜಕಾರಣ ಮಾಡುತ್ತಾರೆ. ಅವರು ಎಷ್ಟು ಕೇಸ್ ವಾಪಸು ತೆಗೆದುಕೊಂಡಿದ್ದಾರೆ? ಆರ್‌ಎಸ್‌ಎಸ್, ವಿಎಚ್‌ಪಿ ಭಜರಂಗದವರ ಮೇಲೆ ಸೇರಿದಂತೆ ಎಲ್ಲರ ಕೇಸ್ ವಾಪಸು ಪಡೆದಿದ್ದಾರೆ. ಅದರ ನಾವು ಪಟ್ಟಿ ಕೊಡುತ್ತೇವೆ. ಹಳೇಹುಬ್ಬಳ್ಳಿ ಗಲಭೆಗೆ ಸಂಬಂಧಿಸಿ ರಾಜಕೀಯ ಒತ್ತಡದಲ್ಲಿ ಆಗ ಪೊಲೀಸರು ಅವರ ಮೇಲೆ ಕೇಸ್ ಮಾಡಿದ್ದಾರೆ. ಇದರಲ್ಲಿ ಯಾರು ಭಾಗಿಯಾಗಿಲ್ಲ ಎಂದು ಖಚಿತವಾದ ಮೇಲೆ ನಾವು ಕೇಸ್ ವಾಪಸು ಪಡೆದುಕೊಂಡಿದ್ದೇವೆ. ಇದನ್ನು ರಾಜಕೀಯವಾಗಿ ಅವರು ಮಾಡುತ್ತಿದ್ದಾರೆ. ನಾವು ರಾಜಕಾರಣ ಮಾಡುತ್ತಿಲ್ಲ. ಅವರಿಗೆ ನ್ಯಾಯ ಒದಗಿಸುತ್ತಿದ್ದೇವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.