ಸಿಎಂ ಆವೇಶದ ಹೇಳಿಕೆ: ಸಚಿವ ಡಿ.ಸಿ. ತಮ್ಮಣ್ಣ
Team Udayavani, Jul 30, 2018, 6:20 AM IST
ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸುವುದು ಸೂಕ್ತವಲ್ಲ, ಸಮಗ್ರ ಕರ್ನಾಟಕ ಅಭಿವೃದ್ಧಿ ನಮ್ಮೆಲ್ಲರ ಉದ್ದೇಶವಾಗಬೇಕು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ಕರ್ನಾಟಕದ ಏಕೀಕಣಕ್ಕಾಗಿ ನಡೆದ ಹೋರಾಟದ ಕೇಂದ್ರ ಬಿಂದು ಧಾರವಾಡ ಜಿಲ್ಲೆ. ಇಲ್ಲಿನ ಅನೇಕರ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣಗೊಂಡಿದೆ. ನಮ್ಮ ಸರ್ಕಾರ ಉತ್ತರ, ದಕ್ಷಿಣ ಕರ್ನಾಟಕ ಎಂಬ ಭೇದ ಮಾಡುವುದಿಲ್ಲ. ನಂಬಿದವರು ಕೈಕೊಟ್ಟಿದ್ದರಿಂದ ಯಾವುದೋ ಆವೇಶದಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಅವರು ಸಮಗ್ರ ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡುತ್ತಾರೆ. ರಾಜ್ಯವನ್ನು ಒಡೆಯುವ ಬಗ್ಗೆ ಮಾತು ಬೇಡ. ಅಖಂಡ
ಕರ್ನಾಟಕವಾಗಿ ಉಳಿಯಬೇಕು ಎಂದರು.