ಸಮ್ಮಿಶ್ರ ಸರ್ಕಾರ ಕೊಡುಗೆ ಶೂನ್ಯ : ತಾರಾ
Team Udayavani, Apr 11, 2019, 11:28 AM IST
ಕುಂದಗೋಳ: ಇಡೀ ವಿಶ್ವವೇ ಭಾರತವನ್ನು ಗೌರವದಿಂದ ಕಾಣುವಂತೆ ಮಾಡಿದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ವಿಪ ಸದಸ್ಯೆ, ನಟಿ ತಾರಾ ಹೇಳಿದರು.
ಪಟ್ಟಣದಲ್ಲಿ ಬುಧವಾರ ಪ್ರಹ್ಲಾದ ಜೋಶಿ ಪರ ಗಾಳಿ ಮರಿಯಮ್ಮ ದೇವಸ್ಥಾನದಿಂದ ರೋಡ್ ಶೋ ನಡೆಸಿ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರದ ಕೊಡುಗೆ ಶೂನ್ಯ. ಮೋದಿಯವರು ದೇಶದ ಸ್ತ್ರೀಯರಿಗೆ ಉಜ್ವಲ ಯೋಜನೆಯಲ್ಲಿ ಉಚಿತವಾಗಿ ಗ್ಯಾಸ್ ವಿತರಿಸುವ ಮೂಲಕ ಮಹಿಳೆಯರ ಆರೋಗ್ಯ ಬಗ್ಗೆ ಕಾಳಜಿ ವಹಿಸಿದ್ದಾರೆ.
ಬಡವರಿಗಾಗಿ ಮುದ್ರಾ ಯೋಜನೆ ಮೂಲಕ ಆರ್ಥಿಕ ಸಾವಲಂಬನೆಗೆ ಸಾಕಷ್ಟು ನೆರವು ನೀಡಿದ್ದು ರೈತರಿಗೆ ಪ್ರತಿ ವರ್ಷ 6000 ಸಾವಿರ ರೂಪಾಯಿ ಖಾತೆಗೆ ಹಾಕಿ ಕೃಷಿಗೆ ಉತ್ತೇಜನ ನೀಡಿದ್ದಾರೆ ಎಂದರು.
ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ, ಮುಖಂಡ ಎಮ್.ಆರ್.ಪಾಟೀಲ್ ಮಾತನಾಡಿ, ಜೋಶಿಯವರು ಈ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದು, ಜೋಶಿಯವರ ಸಾಧನೆ, ಮೋದಿಯವರ ಕೊಡುಗೆಯನ್ನು ಮನೆ-ಮನೆಗೆ ಮುಟ್ಟಿಸಿ ಬಿಜೆಪಿ ಪರ ಮತ ಹಾಕಿಸಲು ಕಾರ್ಯಕರ್ತರು ಶ್ರಮಿಸಬೇಕೆಂದರು.
ಜಿಲ್ಲಾ ಅಧ್ಯಕ್ಷ ಈರಣ್ಣ ಜಡಿ, ಜಿಪಂ ಸದಸ್ಯರಾದ ಭರಮಣ್ಣಾ ಮುಗಳಿ, ಎನ್.ಎನ್.ಪಾಟೀಲ್, ಮಾಲತೇಶ ಶ್ಯಾಗೋಟಿ, ಪೃಥ್ವಿರಾಜ ಕಾಳೆ, ಮಲ್ಲಿಕಾರ್ಜುನ ಕಿರೇಸೂರ, ರಾಜು ಶಿವಳ್ಳಿ, ಈಶ್ವರಪ್ಪ ಗಂಗಾಯಿ, ನಾಗರಾಜ ಬೂದಿಹಾಳ, ಗುರು ಪಾಟೀಲ್, ಬಸನಗೌಡ ಕರಿಹೊಳ್ಳಲಪ್ಪಗೌಡ್ರ,ನಾಗರಾಜ ಸುಬರಗಟ್ಟಿ, ಸುನೀತಾ ನಲವಾಲ, ಬಸುರಾಜ ಕೊಪ್ಪದ, ಬಸುರಾಜ ಗಂಗಾಯಿ, ಲಿಂಗರಾಜ ಕುನ್ನೂರ, ಮಲ್ಲಣ್ಣ ಮಾರಡಗಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.