ಗ್ರಾಮೀಣ ಪ್ರದೇಶಕ್ಕೂ ಕಾರ್ಪೋರೆಟ್ ಕಂಪನಿಗಳ ಸೇವೆ
Team Udayavani, Mar 7, 2017, 1:21 PM IST
ಧಾರವಾಡ: ನಗರದ ಪ್ರದೇಶಕ್ಕೆ ಸೀಮಿತವಾಗಿದ್ದ ಕಾರ್ಪೋರೆಟ್ ಕಂಪನಿಗಳ ಸಾಮಾಜಿಕ ಸೇವೆ ಇದೀಗ ತಮ್ಮ ವಿಶೇಷ ಆಸಕ್ತಿಯ ಮೂಲಕ ಗ್ರಾಮೀಣ ಪ್ರದೇಶಗಳಿಗೂ ಲಗ್ಗೆ ಇಟ್ಟಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ತಾಲೂಕಿನ ಮರೇವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಡೆಸ್ಕ್ ವಿತರಿಸಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಸೂಚನೆ ಮೇರೆಗೆ ದೇಶದಲ್ಲಿನ ವಿವಿಧ ಕಾರ್ಪೋರೆಟ್ ಕಂಪನಿಗಳು ಸಾಮಾಜಿಕ ಕಾರ್ಯಗಳಿಗೆ ಮೀಸಲಿಟ್ಟ ಶೇ.2ರಷ್ಟು ಹಣದಿಂದ ನಡೆಸುವ ಸಾಮಾಜಿಕ ಸೇವೆ ಈ ಮೊದಲು ನಗರ ಪ್ರದೇಶಕ್ಕೆ ಸಿಮೀತಗೊಂಡಿದ್ದು, ಇದೀಗ ಗ್ರಾಮೀಣ ಭಾಗಕ್ಕೂ ವಿಸ್ತರಿಸುವ ಕಾರ್ಯ ನಡೆದಿದೆ. ಸದ್ಯ ಎಚ್‌ಪಿಸಿಎಲ್ ಕಂಪನಿ ತಮ್ಮ ಕ್ಷೇತ್ರಕ್ಕೆ 4.30 ಕೋಟಿ ಖರ್ಚು ಮಾಡಿದೆ.
ಕಲಘಟಗಿಯಲ್ಲಿ 28, ಶಿಗ್ಗಾವಿ-ಸವಣೂರಿನಲ್ಲಿ 25 ಸೇರಿದಂತೆ ಒಟ್ಟು 3.17 ಕೋಟಿ ವೆಚ್ಚದಲ್ಲಿ 57 ಗುಣಮಟ್ಟದಹೈಟೆಕ್ ಸೇರಿ ಒಟ್ಟು 150 ಶೌಚಾಯಲಗಳನ್ನು ನಿರ್ಮಿಸಲಾಗಿದೆ. ವಿವಿಧ ಶಾಲೆಗಳಿಗೆ 1,800 ಡೆಸ್ಕ್ ವಿತರಣೆಗೆ ಮುಂದಾಗಿದೆ. ಮೊದಲ ಹಂತವಾಗಿ 750 ಡೆಸ್ಕ್ ವಿತರಿಸಲಾಗುತ್ತಿದೆ. ಒಂದು ಡೆಸ್ಕ್ 4000 ಸಾವಿರ ಮೌಲ್ಯದ ಗುಣಮಟ್ಟ ಹೊಂದಿದೆ.
ಕುಂದಗೋಳದಲ್ಲಿ 25ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿದೆ. ಎಚ್‌ಪಿಸಿಎಲ್ ಸಂಸ್ಥೆ ತಮ್ಮ ಕ್ಷೇತ್ರದಲ್ಲಿ 4.30 ಕೋಟಿ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ದತ್ತು ಗ್ರಾಮ ಹಾರೋಬೆಳವಡಿಯನ್ನು ಸೋಲಾರ್ ವಿಲೇಜ್ ಮಾಡಲು ಮುಂದಾಗಿದ್ದು, ಕಾರ್ಪೋರೆಟ್ ಕಂಪನಿಸಹಕಾರದಲ್ಲಿ ಗ್ರಾಪಂನಿಂದ ನಾಲ್ಕು ಕೋಟಿ ಸೋಲಾರ್ ಪ್ಲಾಂಟ್ ಹಾಕಲಾಗುತ್ತಿದೆ.
ಸೋಲಾರ್ ಪ್ಲಾಂಟ್‌ನಿಂದ ಹೆಸ್ಕಾಂಗೆ ವಿದ್ಯುತ್ ಮಾರಾಟ ಮಾಡುವುದರಿಂದ ಗ್ರಾಪಂಗೆ 1ರಿಂದ2 ಲಕ್ಷ ಆದಾಯ ಬರಲಿದ್ದು, ಈ ಹಣವನ್ನು ಗ್ರಾಮದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ. ಈ ಕಾರ್ಯ ಯಶಸ್ವಿಯಾದ ನಂತರ ಇದನ್ನು ಹಂತ-ಹಂತವಾಗಿ ತಮ್ಮಕ್ಷೇತ್ರದ ಪ್ರಮುಖ ಗ್ರಾಮಗಳಿಗೆ ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ. 32 ಶಾಲೆಗೆ ಗೇಲ್ ಕಂಪನಿಯಿಂದ ಸ್ಮಾರ್ಟ್‌ಬೋರ್ಡ್ ವಿತರಿಸಿದೆ ಎಂದರು.
ಎಚ್‌ಪಿಸಿಎಲ್ ಕಂಪನಿ ವ್ಯವಸ್ಥಾಪಕ ನಂದನ ಘಜಪೇ ಮಾತನಾಡಿ, ಎಚ್‌ಪಿಸಿಎಲ್ ದೇಶದಲ್ಲಿ 1,500 ಬಂಕ್ ಹೊಂದಿದೆ. ಈ ಕಂಪನಿಯಿಂದ ಸಾಮಾಜಿಕ ಕಾರ್ಯಗಳಿಗೆ ಉತ್ತರ ಕರ್ನಾಟಕದ12 ಜಿಲ್ಲೆಗಳಲ್ಲಿ 2015-16 ರಲ್ಲಿ 18 ಶಾಲೆಗಳಿಗೆ 50 ಲಕ್ಷ, 2016-17ನೇ ಸಾಲಿನಲ್ಲಿ 65 ಲಕ್ಷದ ಉಪಕರಣ ಒದಗಿಸಿದೆ.
71 ಶಾಲೆಗೆ ಸೋಲಾರ್ ಅಳವಡಿಸಿದೆ ಎಂದರು.ಮಾಜಿ ಶಾಸಕಿ ಸೀಮಾ ಮಸೂತಿ, ಜಿಪಂ ಸದಸ್ಯೆ ರತ್ನಾ ಪಾಟೀಲ, ಮಾಜಿ ಸದಸ್ಯ ತವನಪ್ಪ ಅಷ್ಟಗಿ, ತಾಪಂ ಸದಸ್ಯೆ ಮಮತಾ ಅಂಕಲಗಿ,ಬಿಜೆಪಿ ಮುಖಂಡರಾದ ಅಮೃತ್ ದೇಸಾಯಿ, ನಾಗರಾಜ ಗಾಣಿಗೇರ, ಸುನೀಲ ಗುಡಿ, ಬಸವರಾಜ ಸಲಕಿ, ಗ್ರಾಮೀಣ ಬಿಇಒ ಶ್ರೀಶೈಲ ಕರಿಕಟ್ಟಿ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.