ಕನ್ನಡದಲ್ಲಿ ವಿಜ್ಞಾನ -ತಂತ್ರಜ್ಞಾನ ಸಮ್ಮೇಳನಕ್ಕೆ ತೆರೆ

Team Udayavani, Nov 25, 2018, 4:06 PM IST

25-november-17.gif

ಧಾರವಾಡ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕವಿವಿ ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ‘ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆ-ಕರ್ನಾಟಕದ ಕೊಡುಗೆ’ ಕುರಿತು ಹಮ್ಮಿಕೊಂಡಿದ್ದ ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಸಮ್ಮೇಳನ ಶನಿವಾರ ಸಮಾರೋಪಗೊಂಡಿತು.

ಕವಿವಿ ಕುಲಪತಿ ಪ್ರೊ| ಪ್ರಮೋದ ಗಾಯಿ ಮಾತನಾಡಿ, ವಿಜ್ಞಾನಿಗಳು, ಸಂಶೋಧಕರು ಹಾಗೂ ವಿವಿ ಪ್ರಾಧ್ಯಾಪಕರು ಕನ್ನಡದಲ್ಲಿ ತಮ್ಮ ಸಂಶೋಧನಾ ಲೇಖನ ಅಥವಾ ಪುಸ್ತಕ ಪ್ರಕಟಿಸಿದರೆ ಈ ಸಮ್ಮೇಳನ ಮಾಡಿದ್ದು ಸಾರ್ಥಕವಾಗುತ್ತದೆ. ಕನ್ನಡದಲ್ಲಿ ಬರೆದಾಗ ಮಾತ್ರವೇ ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚು ಪ್ರಚುರಪಡಿಸಲು ಸಾಧ್ಯವಿದೆ ಎಂದರು.

ಕನ್ನಡದಲ್ಲಿ ಸಂಶೋಧನಾ ಲೇಖನಗಳು ಮತ್ತು ಪ್ರಬಂಧಗಳು ಪ್ರಕಟಣೆಯಾಗಬೇಕು. ವಿಜ್ಞಾನಿಗಳು ತಮ್ಮ ಸಂಶೋಧನೆಯ ಸಾರವನ್ನು ಕನ್ನಡದಲ್ಲಿಯೇ ಪ್ರಕಟಿಸಿದಾಗ ಮಾತ್ರ ಜನಸಾಮಾನ್ಯರಿಗೆ ಅರ್ಥವಾಗಲು ಸಾಧ್ಯ. ವಿಜ್ಞಾನ ವಿಷಯದ ಪ್ರಾಧ್ಯಾಪಕರು ಈ ಕುರಿತು ಅವಲೋಕಿಸಬೇಕು. ವಿಜ್ಞಾನ ಸಾಹಿತಿಗಳು ಕನ್ನಡದಲ್ಲಿ ಹೆಚ್ಚು ಕವನ, ಕಥೆ, ನಾಟಕಗಳನ್ನು ರಚಿಸಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದ ಆಸಕ್ತಿ ಮೂಡಿಸಲು ಸಾಧ್ಯ ಎಂದು ಹೇಳಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ, ಪದ್ಮಶ್ರೀ ಡಾ| ಎಸ್‌.ಕೆ. ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಲೇಖಕ ಸಿ.ಬಿ. ಪಾಟೀಲ ರಚಿಸಿದ 150 ಸಿಂಪಲ್‌ ಸೈನ್ಸ್‌ ಎಕ್ಸ್‌ಪರಿಮೆಂಟ್ಸ್‌ ಪುಸ್ತಕ ಹಾಗೂ ಇದರ ಜೊತೆಗೆ ಸಮ್ಮೇಳನ ಕುರಿತ ಕವಿವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊರತಂದ ವಿದ್ಯಾ ಸಮಾಚಾರ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮುಖ್ಯ ಕಾರ್ಯದರ್ಶಿ ಎ.ಎಂ. ರಮೇಶ, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ| ಕೆ.ಬಿ. ಗುಡಸಿ, ಡಾ| ಸ.ರ. ಸುದರ್ಶನ ಇದ್ದರು.

ಸ್ಪರ್ಧಾ ವಿಜೇತರಿವರು
ಕವಿಗೋಷ್ಠಿಯಲ್ಲಿ ದಿವ್ಯ ಆಚಾರಿ ಪ್ರಥಮ, ಬಸವರಾಜ ಇಂಗಳಗಿ ದ್ವಿತೀಯ, ಡಾ| ಲಿಂಗರಾಜ ರಾಮಾಪುರ ತೃತೀಯ ಸ್ಥಾನ ಪಡೆದರು. ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಭೌತಶಾಸ್ತ್ರ ಹಾಗೂ ರಾಸಾಯನ ಶಾಸ್ತ್ರದಲ್ಲಿ ಸಾತ್ವಿಕ್‌ ಜಾಧವ ಪ್ರಥಮ, ಡಾ| ಯು. ಶಾನವಾಡ ದ್ವಿತೀಯ, ದಿವ್ಯ ಆಚಾರಿ ಹಾಗೂ ವಿಜಯ ಕಟ್ಟಿ ತೃತೀಯ ಸ್ಥಾನ, ಸಚಿನ್‌ ಜಿ.ಆರ್‌, ಮುರುಗೇಶ ಎಂ.ಡಿ. ಸಮಾಧಾನಕರ ಬಹುಮಾನ ಪಡೆದರು. ಭಿತ್ತಿಚಿತ್ರ ಜೀವಶಾಸ್ತ್ರದಲ್ಲಿ ಮೋಹನ ಕುಮಾರ್‌ ಪ್ರಥಮ, ಉಮರ್‌ ಫಾರುಕ್‌ ಹಾಗೂ ಸ್ಮಿತಾ ಹೆಗ್ಡೆ ದ್ವಿತೀಯ, ಬಿ.ಎನ್‌. ನರೇಂದ್ರ ಬಾಬು ತೃತೀಯ ಬಹುಮಾನ ಪಡೆದರು. ವಿಜೇತರಿಗೆ ಪ್ರಥಮ 10,000, ದ್ವಿತೀಯ 7,500 ಹಾಗೂ ತೃತೀಯ 5,000 ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.

ಟಾಪ್ ನ್ಯೂಸ್

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು

Mulki: ಮತ್ತೆ ಚಿರತೆ ಪ್ರತ್ಯಕ್ಷ, ಹೆಚ್ಚಿದ ಭೀತಿ

Mulki: ಮತ್ತೆ ಚಿರತೆ ಪ್ರತ್ಯಕ್ಷ, ಹೆಚ್ಚಿದ ಭೀತಿ

Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು

Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು

Kabaka: ಮನೆಯಿಂದ ಮಾದಕ ವಸ್ತು ವಶ?

Kabaka: ಮನೆಯಿಂದ ಮಾದಕ ವಸ್ತು ವಶ?

Mulki: ರೈಲು ಪ್ರಯಾಣಿಕನ ಹಂತಕ ಅಂತಾರಾಜ್ಯ ಕುಖ್ಯಾತ ಪಾತಕಿMulki: ರೈಲು ಪ್ರಯಾಣಿಕನ ಹಂತಕ ಅಂತಾರಾಜ್ಯ ಕುಖ್ಯಾತ ಪಾತಕಿ

Mulki: ರೈಲು ಪ್ರಯಾಣಿಕನ ಹಂತಕ ಅಂತಾರಾಜ್ಯ ಕುಖ್ಯಾತ ಪಾತಕಿ

Sri Kukke Subrahmanya Temple: ಚಂಪಾಷಷ್ಠಿ ಮಹೋತ್ಸವ ಆರಂಭ

Sri Kukke Subrahmanya Temple: ಚಂಪಾಷಷ್ಠಿ ಮಹೋತ್ಸವ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Udupi: ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ ಸಮಾರೋಪ

Udupi: ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ ಸಮಾರೋಪ

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು

Mulki: ಮತ್ತೆ ಚಿರತೆ ಪ್ರತ್ಯಕ್ಷ, ಹೆಚ್ಚಿದ ಭೀತಿ

Mulki: ಮತ್ತೆ ಚಿರತೆ ಪ್ರತ್ಯಕ್ಷ, ಹೆಚ್ಚಿದ ಭೀತಿ

Sullia: ತಾಲೂಕು ಕಚೇರಿಯಲ್ಲಿ ವೃದ್ಧ ಸಾವು

Sullia: ತಾಲೂಕು ಕಚೇರಿಯಲ್ಲಿ ವೃದ್ಧ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.