ಅಜಾತಶತ್ರು ನಿಧನಕ್ಕೆ ಸಂತಾಪ
Team Udayavani, Aug 17, 2018, 5:43 PM IST
ಕೊಪ್ಪಳ: ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ಅನಾರೋಗ್ಯದಿಂದ ಗುರುವಾರ ನಿಧನರಾದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ರಾಜೀವ ಬಾಕಳೆ ಅವರ ನಿವಾಸದಲ್ಲಿ ವಾಜಪೇಯಿ ಅವರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿದ್ದಲ್ಲದೇ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಸಂಸದ ಸಂಗಣ್ಣ ಕರಡಿ, ಮುಖಂಡರಾದ ವಿ.ಎಂ. ಭೂಸನೂರಮಠ, ಈಶಪ್ಪ ಮಾದಿನೂರು, ಅಮರೇಶ ಕರಡಿ, ಕೆ.ಜಿ. ಕುಲಕರ್ಣಿ, ಸಿ.ವಿ. ಚಂದ್ರಶೇಖರ, ಬಸವರಾಜ ಬೋವಿ, ರಾಜೀವ ಬಾಕಳೆ, ತೋಟಪ್ಪ ಕಾಮನೂರು, ಚಂದ್ರಕಾಂತ ನಾಯಕ, ಗಣೇಶ ವರ್ತಟ್ನಾಳ, ದುರಗಪ್ಪ ಅಲ್ಲಾನಗರ ಸೇರಿದಂತೆ ಇತರರಿದ್ದರು.
ಕುಷ್ಟಗಿ: ಭಾರತೀಯ ರಾಜಕೀಯ ಕ್ಷೇತ್ರದಲ್ಲಿ ಅಜಾತಶತ್ರು ಎಂದು ಜನಮಾನಸದಲ್ಲಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಗಲಿಕೆ ದುಃಖಕರ ಸಂಗತಿ. ಶ್ರೇಷ್ಠ ನಾಯಕರಾಗಿ ಸಂಸದೀಯ ಪಟುವಾಗಿ ಅವರ ಸೇವೆ ಎಂದೂ ಮರೆಯಲು ಸಾಧ್ಯವಿಲ್ಲ. ಅವರು ಯುವ ರಾಜಕಾರಣಿಗಳಿಗೆ ಆದರ್ಶಪ್ರಾಯರು.
ಅಮರೇಗೌಡ ಪಾಟೀಲ ಬಯ್ನಾಪುರ,
ಶಾಸಕ.
ವಾಜಪೇಯಿ ಅವರು ಪ್ರಧಾನಿ ಮಾತ್ರವಾಗಿರದೇ ಕವಿ, ಸಂವೇದನಾಶೀಲ ವ್ಯಕ್ತಿತ್ವ ಹೊಂದಿದ್ದರು. ಭಾರತೀಯ ರಾಜಕಾರಣದಲ್ಲಿ ಗೌರವಾನ್ವಿತ, ಮುತ್ಸದ್ದಿ ಎಂದು ರಾಜಕೀಯ ವಿರೋಧಿಗಳಿಂದಲೇ ಕರೆಸಿಕೊಂಡವರು. ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಯಿಂದ ನಮ್ಮ ದೇಶದ ರಸ್ತೆಗಳಿಗೆ ಹೊಸ ಭಾಷ್ಯ ಬರೆದರು. ಭಾರತ ವಿಶ್ವಗುರುವಾಗಲು ಅಟಲ್ ಜೀ ಮುನ್ನುಡಿ ಬರೆದರು.
ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.