ಶ್ರೀನಗರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿ ವಿವಾದ
ಮುಖಂಡರು-ಪಾಲಿಕೆ ಆಯುಕ್ತರ ಮಧ್ಯೆ ವಾಗ್ವಾದ
Team Udayavani, Apr 4, 2022, 1:05 PM IST
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಮುಖ್ಯ ಪ್ರವೇಶ ದ್ವಾರದ ಎದುರಿನ ಶ್ರೀನಗರ ವೃತ್ತದಲ್ಲಿ ಇದೀಗ ಬಸವೇಶ್ವರ ಪುತ್ಥಳಿಯ ವಿವಾದ ಶುರುವಾಗಿದ್ದು, ಪಾಲಿಕೆ ಹಾಗೂ ಬಸವಾಭಿಮಾನಿಗಳ ಮಧ್ಯೆ ತಿಕ್ಕಾಟ ಆರಂಭಗೊಂಡಿದೆ.
ರಸ್ತೆ ಅಗಲೀಕರಣಕ್ಕಾಗಿ ಈಗಿದ್ದ ಬಸವರಾಜ ಕಟ್ಟೀಮನಿ ವೃತ್ತವನ್ನು ಪಾಲಿಕೆ ತೆರವು ಮಾಡಿತ್ತು. ಇದಾದ ಬಳಿಕ ಶುಕ್ರವಾರ ಅಲ್ಲಿ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆ ಕಂಡಿತ್ತು. ಹೊಸದಾಗಿ ಪುತ್ಥಳಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ ಎಂಬ ನಿಯಮವೊಡ್ಡಿ ಪಾಲಿಕೆ ವಲಯ ಕಚೇರಿ-1ರ ಅಧಿಕಾರಿಗಳು ಶನಿವಾರ ಪುತ್ಥಳಿ ತೆರವು ಮಾಡಿ, ಕಚೇರಿಗೆ ತೆಗೆದುಕೊಂಡು ಹೋಗಿದ್ದರು.
ಇದರಿಂದ ಕೆರಳಿದ ಸ್ಥಳೀಯ ನಿವಾಸಿಗಳು ಹಾಗೂ ಬಸವಾಭಿಮಾನಿಗಳು ಪಾಲಿಕೆಗೆ ಕಚೇರಿಗೆ ತೆರಳಿ, ಮುಚ್ಚಳಿಕೆ ಕೊಟ್ಟು ಪುತ್ಥಳಿ ಅಲ್ಲಿಂದ ತಂದಿದ್ದರು. ಇದೀಗ ಮತ್ತೆ ಆ ಸ್ಥಳದಲ್ಲಿಯೇ ಬಸವೇಶ್ವರ ಪುತ್ಥಳಿ ಮರು ಪ್ರತಿಷ್ಠಾಪನೆ ಮಾಡಲಾಗಿದೆ. ಸುದ್ದಿ ತಿಳಿದು ಪಾಲಿಕೆ ಆಯುಕ್ತ ಡಾ| ಗೋಪಾಲಕೃಷ್ಣ ಕೂಡ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರಿಗೆ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ಸಮಾಜದ ಮುಖಂಡರು ಹಾಗೂ ಪಾಲಿಕೆ ಆಯುಕ್ತರ ಮಧ್ಯೆ ವಾಗ್ವಾದ ನಡೆಯಿತು. ವೃತ್ತದಲ್ಲಿ ಮೊದಲು ಬಸವಣ್ಣನವರ ಮೂರ್ತಿ ಇತ್ತು ಎಂದು ಪಾಲಿಕೆ ಆಯುಕ್ತರಿಗೆ ಮನವರಿಕೆ ಮಾಡಲು ಮುಖಂಡರು ಮುಂದಾದರು. ಮೂರ್ತಿ ತೆರವುಗೊಳಿಸಲು ನಿರಾಕರಿಸಿದರು. ಇದಕ್ಕೆ ಒಪ್ಪದ ಪಾಲಿಕೆ ಆಯುಕ್ತರು, ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಸೋಮವಾರ ಸಂಜೆವರೆಗೆ ಕಾಲಾವಕಾಶ ನೀಡಿ ತೆರಳಿದರು. ಸದ್ಯ ಶ್ರೀನಗರ ವೃತ್ತದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಹೊಸದಾಗಿ ಸ್ಥಾಪನೆ ಮಾಡಿಲ್ಲ: ಹುಣಸೀಮರದ ಶ್ರೀನಗರ ವೃತ್ತದಲ್ಲಿ ಹೊಸದಾಗಿ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆ ಮಾಡಿಲ್ಲ. ಈ ಹಿಂದೆ ಪ್ರತಿಷ್ಠಾಪಿಸಿದ್ದ ಪುತ್ಥಳಿ ಮಣ್ಣಿನಲ್ಲಿ ಮುಚ್ಚಿ ಹೋಗಿತ್ತು. ಇದಾದ ಬಳಿಕ ಬಸವರಾಜ ಕಟ್ಟೀಮನಿ ವೃತ್ತ ಎಂಬ ನಾಮಕರಣ ಮಾಡಲಾಗಿತ್ತು. ಮೊನ್ನೆ ಈ ವೃತ್ತ ತೆರವು ಮಾಡುವಾಗ ಪುತ್ಥಳಿ ಸಿಕ್ಕಿದ್ದು, ಕೆಲ ಯುವಕರು ಅದಕ್ಕೆ ಹೊಸದಾಗಿ ಬಣ್ಣ ಮಾಡಿಸಿ ಶುಕ್ರವಾರ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಆದರೆ ಶನಿವಾರ ಪಾಲಿಕೆ ಅಧಿಕಾರಿಗಳು ಬಂದು ಪುತ್ಥಳಿ ತೆಗೆದುಕೊಂಡು ಹೋಗಿದ್ದರು. ಇದೀಗ ಪಾಲಿಕೆಯಿಂದ ಪುತ್ಥಳಿ ಮರಳಿ ತಂದ ಯುವಕರು ಮತ್ತೆ ಅಲ್ಲಿಯೇ ರವಿವಾರ ಪ್ರತಿಷ್ಠಾಪನೆ ಮಾಡಿದ್ದಾರೆ. ವಿನಾಕಾರಣ ವಿವಾದ ಮಾಡದೇ ಪುತ್ಥಳಿ ಅಲ್ಲಿಯೇ ಇರುವಂತೆ ಮಾಡಬೇಕು ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.