ಯುಗಾದಿ ಸಂಭ್ರಮಕ್ಕೆ ಕರಿನೆರಳು


Team Udayavani, Mar 25, 2020, 1:19 PM IST

ಯುಗಾದಿ ಸಂಭ್ರಮಕ್ಕೆ ಕರಿನೆರಳು

ಹುಬ್ಬಳ್ಳಿ: ಹಿಂದೂ ಪರಂಪರೆಯಲ್ಲಿ ಯುಗಾದಿ ಎಂದರೆ ಹೊಸವರ್ಷದ ಆರಂಭ. ಹಬ್ಬದ ಸಂಭ್ರಮದ ಜತೆಗೆ ಕೆಲ ರಾಜ್ಯಗಳಲ್ಲಿ ಕೃಷಿಗೆ ಸಾಂಕೇತಿ ಕವಾಗಿ ಚಾಲನೆ ನೀಡಲಾಗುತ್ತದೆ. ಆದರೆ, ಈ ಬಾರಿ ಭಾರತ ಸೇರಿದಂತೆ ವಿಶ್ವದಾದ್ಯಂತ ಹಬ್ಬಿರುವ ಕೋವಿಡ್ 19 ಕರಿನೆರಳು ಯುಗಾದಿ ಸಂಭ್ರಮವನ್ನು ಕುಗ್ಗಿಸುವಂತೆ ಮಾಡಿದೆ.

ಯುಗಾದಿ ದೇಶದ ವಿವಿಧ ದೇಶಗಳಲ್ಲಿ ಆಚರಣೆ ಮಾಡಲಾಗುತ್ತಿದೆ ಯಾದರು, ವಿಶೇಷವಾಗಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಹೊಸವರ್ಷದ ಆರಂಭವೆಂದೇ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೊಡ್ಡ ಹಬ್ಬ ಎಂದೇ ಕರೆಯಲ್ಪಡುವ ಯುಗಾದಿಯನ್ನು ಎಲ್ಲ ವರ್ಗದವರೂ ಕೈಲಾದ ಮಟ್ಟಿಗೆ ಆಚರಿಸುತ್ತಾರೆ. ಆದರೆ, ಈ ಬಾರಿ ಯುಗಾದಿ ಆಚರಣೆ ಕಳೆಗುಂದುವ ಎಲ್ಲ ಲಕ್ಷಣ ಗೋಚರಿಸುತ್ತಿದೆ.

ಕೊರೊನಾ ಹೊಡೆತದಿಂದ ದೇಶಾದ್ಯಂತ ಯುಗಾದಿ ಆಚರಣೆ ಲಯ ತಪ್ಪಿದೆ. ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವುದಕ್ಕೂ ಅವಕಾಶ ಇಲ್ಲದಂತೆ ಕೋವಿಡ್ 19 ದಿನದಿಂದ ದಿನಕ್ಕೆ ಸೂಕ್ಷ್ಮ ಹಾಗೂ ಅಪಾಯಕಾರಿ ಸ್ಥಿತಿ ಸೃಷ್ಟಿಸಿತೊಡಗಿದೆ.

ಕಳೆಗುಂದಿದ ಯುಗಾದಿ: ಯುಗಾದಿ ಹಬ್ಬವೆಂದರೆ ಹೊಸ ಬಟ್ಟೆ ಖರೀದಿ, ಪ್ರವಚನ, ಜಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯು ತ್ತವೆ. ಪಂಚಾಂಗ ಪಠಣ, ವರ್ಷದ ಭವಿಷ್ಯ ಕೇಳುವುದು, ಪುಟಾಣಿ ಪುಡಿ ಸಹಿತ ಬೇವು-ಬೆಲ್ಲ, ಬೇವು-ಬೆಲ್ಲದ ಪಾನಕ ಪರಸ್ಪರ ಹಂಚಿಕೆ ನಡೆಯುತ್ತದೆ. ಹಿಂದೂ ಪರಂಪರೆಯ ಕ್ಯಾಲೆಂಡರ್‌ ಆರಂಭವಾಗುವುದೇ ಯುಗಾದಿಯಿಂದ. ಆರ್ಥಿಕ ಹಿಂಜರಿಕೆ ಜನಜೀವನದ ಮೇಲೆ ಪರಿಣಾಮ ಬೀರಿದ ಬೆನ್ನಿಗೇ ಹೆಮ್ಮಾರಿಯಂತೆ ಬಂದೆರಗಿದ ಕೋವಿಡ್ 19 ಯುಗಾದಿ ಹಬ್ಬದ ಸಡಗರವನ್ನೇ ನುಂಗಿ ಹಾಕಿದೆ.

ಯುಗಾದಿ ಅಮವಾಸ್ಯೆ ನಂತರದಲ್ಲಿ ಪಾಡ್ಯದ ದಿನವನ್ನು ಶುಭ ಮುಹೂರ್ತದ ದಿನವೆಂದೇ ಭಾವಿಸಲಾಗುತ್ತದೆ. ಗೃಹ ಪ್ರವೇಶ, ಮನೆ ನಿರ್ಮಾಣಕ್ಕೆ ಬುನಾದಿ ಹಾಕುವುದಕ್ಕೆ ಪೂಜೆ ಸಲ್ಲಿಕೆ, ನಿರ್ಮಾಣ ಹಂತದ ಮನೆಗೆ ಬಾಗಿಲು ಇರಿಸುವುದು, ಹೊಸ ವಾಹನ ಖರೀದಿ ನಡೆದರೆ, ಗ್ರಾಮೀಣ ಸೇರಿದಂತೆ ವಿವಿಧೆಡೆ ಜಾತ್ರೆ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಕೋವಿಡ್ 19 ಭೀತಿಯಿಂದಾಗಿ ನಗರ ಪ್ರದೇಶದ ಬಹುತೇಕ ದೇವಸ್ಥಾನ, ಮಂದಿರಗಳನ್ನು ಬಂದ್‌ ಮಾಡಲಾಗಿದೆ. ಜಾತ್ರೆ, ಸಂತೆ, ಪ್ರವಚನಗಳನ್ನು ನಿಷೇಧಿಸಲಾಗಿದೆ. ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರವಚನ ಸುಮಾರು 16 ವರ್ಷಗಳ ನಂತರದಲ್ಲಿ ಹುಬ್ಬಳ್ಳಿಗೆ ಸಿಕ್ಕಿತ್ತು. ಈ ವರ್ಷದ ಯುಗಾದಿ ಹಬ್ಬವನ್ನು ಸಿದ್ಧೇಶ್ವರ ಸ್ವಾಮೀಜಿಯವರು ನಮ್ಮ ನಗರದಲ್ಲೇ ಆಚರಿಸುತ್ತಾರೆ. ನಮ್ಮೆಲ್ಲರ ಪುಣ್ಯ ಎಂದೇ ಅನೇಕರು ಭಾವಿಸಿದ್ದರು. ಕೊರೊನಾ ಕಾರಣದಿಂದ ಶ್ರೀಗಳ ಪ್ರವಚನ ಸಹ ಪೂರ್ಣವಾಗದ ನೋವು ಭಕ್ತರಲ್ಲಿದೆ.

ಹಬ್ಬದ ಖರೀದಿಗೆ ಮುಂದಾದರೂ ನಗರಗಳಲ್ಲಿ ಅಷ್ಟೇ ಅಲ್ಲದೆ, ಅರೆ ಪಟ್ಟಣ ಪ್ರದೇಶದಲ್ಲೂ ಬಟ್ಟೆ ಅಂಗಡಿ, ಸಂತೆಗಳನ್ನು ಬಂದ್‌ ಮಾಡಿದ್ದರಿಂದ ಖರೀದಿ ಸಾಧ್ಯವಾಗುತ್ತಿಲ್ಲ. ಹಣ್ಣು, ಪೂಜಾ ಸಾಮಗ್ರಿ ಖರೀದಿಗೂ ಅವಕಾಶ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಇನ್ನು ಯುಗಾದಿ ಪಾಡ್ಯದ ದಿನದಂದು ಬೇವು-ಬೆಲ್ಲವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ತಿಳಿಸಲಾಗುತ್ತದೆ. ಉತ್ತರ ಕರ್ನಾಟಕದ ಕೆಲವೊಂದು ಜಿಲ್ಲೆಗಳಲ್ಲಿ ಪಾನಕ ರೂಪದ ಬೇವು ತಯಾರಿಸಿ ನೆರೆ ಹೊರೆಯವರಿಗೆ ನೀಡಲಾಗುತ್ತದೆ. ಕೋವಿಡ್  ಭೀತಿ ಪರಸ್ಪರ ವಿನಿಮಯಕ್ಕೂ ಅಡ್ಡಿಯುಂಟು ಮಾಡಿದೆ.

ಹಬ್ಬಕ್ಕೂ ಹೋಗದ ಸ್ಥಿತಿ: ಗ್ರಾಮೀಣದಿಂದ ನಗರ ಪ್ರದೇಶಕ್ಕೆ ವಲಸೆ ಬಂದವರು ಯಾವುದೇ ಹಬ್ಬಕ್ಕೆ ಹೋಗದಿದ್ದರೂ ಯುಗಾದಿ ಹಬ್ಬಕ್ಕೆ ತಮ್ಮ ಗ್ರಾಮಗಳಿಗೆ ಹೋಗುತ್ತಿದ್ದರು. ಆದರೆ ಬೆಂಗಳೂರು, ಮಂಗಳೂರು, ಗೋವಾ, ಪುಣೆ, ಮುಂಬಯಿ ಇನ್ನಿತರ ಕಡೆಗಳಲ್ಲಿರುವ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಜನರು ಈ ಬಾರಿ ಹಬ್ಬಕ್ಕೂ ತಮ್ಮ ಸ್ವಗ್ರಾಮಗಳಿಗೆ ಬಾರದ ಸ್ಥಿತಿ ನಿರ್ಮಾಣಗೊಂಡಿದೆ. ಬೆಂಗಳೂರು ಇನ್ನಿತರ ಕಡೆಗಳಿಂದ ಬರಬೇಕೆಂದರೆ ದುಡಿಯುವ ವರ್ಗ ಸಾರಿಗೆ ಸಂಸ್ಥೆ ಬಸ್‌ ಹಾಗೂ ರೈಲುಗಳನ್ನೇ ನಂಬಿಕೊಂಡಿದೆ. ಕೋವಿಡ್ 19 ಹೊಡೆತದಿಂದ ಸರಕಾರ ಇಡೀ ರಾಜ್ಯವನ್ನೇ ಬಂದ್‌ ಮಾಡಿದ್ದು, ಮಾ. 31ರ ವರೆಗೆ ಬಸ್‌, ರೈಲು ಸಂಚಾರವನ್ನು ಸಂಪೂರ್ಣ ರದ್ದುಗೊಳಿಸಿದ್ದರಿಂದ ಗ್ರಾಮೀಣಕ್ಕೆ ಜನರು ಬಾರದಂತಾಗಿದ್ದು, ಹಬ್ಬದಿಂದ ದೂರ ಉಳಿಯಬೇಕಾಗಿದೆ.

 

-ಅಮರೇಗೌಡ ಗೋನವಾರ

ಟಾಪ್ ನ್ಯೂಸ್

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.