ಜನ-ವಾಹನ ಸಂಚಾರ ವಿರಳ; ಕರ್ಫ್ಯೂ ಅನುಸರಣೆ ಸರಳ
Team Udayavani, Apr 25, 2021, 12:10 PM IST
ಕಲಘಟಗಿ: ಕೋವಿಡ್ ಎರಡನೇ ಅಲೆ ಹರಡದಂತೆ ತಡೆಗಟ್ಟಲುಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂಗೆ ತಾಲೂಕಿನಾದ್ಯಂತ ಶನಿವಾರಉತ್ತಮ ಬೆಂಬಲ ವ್ಯಕ್ತವಾಗಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಜನಸಂಚಾರವಿಲ್ಲದೇ ಬೀದಿಗಳು ಬಿಕೋ ಎನ್ನುತ್ತಿದ್ದವು. ಯಾವುದೇ ಸಾರಿಗೆಸಂಪರ್ಕವಿಲ್ಲದೇ ಇಲ್ಲಿನ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.
ಮುಂಜಾನೆ10 ಗಂಟೆಯ ನಂತರ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಬಂದ್‌ಮಾಡಲಾಗಿತ್ತು. ಪ್ರಯಾಣಿಕರಿಲ್ಲದಿರುವುದರಿಂದ ಇಲ್ಲಿಂದ ಯಾವುದೇಬಸ್ ರಸ್ತೆಗಿಳಿಸದಿದ್ದರೂ ಹೊರ ಜಿಲ್ಲೆಗಳ ಕೆಲ ಬಸ್‌ಗಳು ಸಂಚರಿಸುತ್ತಿದ್ದುದುಕಂಡುಬಂತು.
ತಿಂಗಳುಗಳ ಹಿಂದೆಯೇ ನಿಗದಿಯಾಗಿದ್ದ ಮದುವೆಯನ್ನುಕೊರೊನಾ ಮಾರ್ಗಸೂಚಿಯನ್ವಯ ಸರಳವಾಗಿ ಆಚರಿಸುವಂತೆ ಅರಿವುಮೂಡಿಸಲಾಗಿದೆ. ಪಟ್ಟಣ ಹಾಗೂ ತಾಲೂಕಿನಾದ್ಯಂತ ಪೊಲೀಸ್, ಆರೋಗ್ಯಇಲಾಖೆ, ಪಪಂ ಹಾಗೂ ಗ್ರಾಪಂ ಅ ಧಿಕಾರಿಗಳು ಹಾಗೂ ಸಿಬ್ಬಂದಿ ಜನಜಾಗೃತಿಮೂಡಿಸುತ್ತಿದ್ದಾರೆ. ಇನ್ಸ್‌ಪೆಕ್ಟರ್ ಪ್ರಭು ಸೂರಿನ್, ಪಪಂ ಮುಖ್ಯಾಧಿ ಕಾರಿವೈ.ಜಿ. ಗದ್ದಿಗೌಡರ ಸಿಬ್ಬಂದಿಯೊಂದಿಗೆ ಸಂಚರಿಸಿ ಮಾರ್ಗಸೂಚಿಗಳನ್ನುಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು. ಕಾನೂನು ಉಲ್ಲಂಘಿಸಿದಲ್ಲಿಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.