ಅನ್‌ಲಾಕ್‌ ಬೇಡ, ಲಾಕ್‌ಡೌನ್‌ ಇರಲಿ

­ಪಾಸಿಟಿವಿಟಿ ದರ ಏರಿಳಿತ! ­ನಗರಕ್ಕೆ ಬಂದು ಕೆಡುವರೇ ಹಳ್ಳಿಗರು ? ಕೊರೊನಾ ಇಳಿಕೆಗೆ ಜಡಿಮಳೆ ವರ

Team Udayavani, Jun 15, 2021, 5:49 PM IST

14hub-dwd1(a)

ವರದಿ: ಬಸವರಾಜ ಹೊಂಗಲ್‌

ಧಾರವಾಡ: ಸಿಹಿ ತಿನಿಸು ತಿಂಡಿಗಳ ಅಂಗಡಿಗಳಿಗೆ ಮುಗಿಬಿದ್ದ ಜನ, ಕಟ್ಟಡ ಕಾರ್ಯಗಳ ಸರಕು ಸರಂಜಾಮುಗಳ ಭರ್ಜರಿ ಖರೀದಿ, ತುಂಬಿ ತುಳುಕಿದ ಕಿರಾಣಿ ವ್ಯಾಪಾರಿಗಳ ಗಲ್ಲಾಪೆಟ್ಟಿಗೆ, ಬೆಳ್ಳಂಬೆಳಗ್ಗೆಯೇ ಮಾರುಕಟ್ಟೆಗಳಲ್ಲಿ ಜನರ ಓಡಾಟ. ಮತ್ತದೇ ಮಾಸ್ಕ್ ಇಲ್ಲದ ಪ್ರಯಾಣ, ಅದಕ್ಕೊಂದಿಷ್ಟು ದಂಡ, ಸರ್ಕಾರದ ಎಚ್ಚರಿಕೆ ಕ್ರಮಗಳಿಗಿಲ್ಲ ಕವಡೆಕಾಸಿನ ಕಿಮ್ಮತ್ತು.

ಹೌದು, ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ ಹಳ್ಳಿಗಳಲ್ಲಿ ಮನೆಗೊಬ್ಬರು ಕೊರೊನಾ ಅಂಟಿಸಿಕೊಂಡು ಅಂತು ಇಂತೂ ಗುಣಮುಖರಾಗಿ ಹೊಲದ ಹಂಗಾಮಿಗೆ ನೇಗಿಲು ಹೊತ್ತಿದ್ದಾರೆ. ಆದರೆ ನಗರ ಪ್ರದೇಶದಲ್ಲಿ ಕಡಿಮೆ ಇದ್ದ ಕೊರೊನಾ ಸೋಂಕು ಮತ್ತೆ ಸದ್ದಿಲ್ಲದೇ ಮೇಲೆರುತ್ತಿದ್ದು, ಈ ಸಂದರ್ಭದಲ್ಲಿ ಲಾಕ್‌ ಡೌನ್‌ ಸಡಿಲಿಕೆ ಜಿಲ್ಲೆಯ ಜನರಿಗೆ ಮತ್ತೂಂದು ಗಂಡಾಂತರ ತಂದೊಡ್ಡುವುದೇ? ಎನ್ನುವ ಸಂಶಯ ಕಾಡುತ್ತಿದೆ.

ಸತತ ಒಂದೂವರೆ ತಿಂಗಳಿನಿಂದ ಕಟ್ಟುನಿಟ್ಟಿನ ಲಾಕ್‌ಡೌನ್‌ ಮಾಡಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ದಿಗ್ಬಂಧನ ಹಾಕುವ ಪ್ರಯತ್ನ ಮಾಡಲಾಗಿದ್ದು, ಈಗ ಒಂದು ಹಂತಕ್ಕೆ ಬಂದಿದೆ. ಆದರೆ ಲಾಕ್‌ಡೌನ್‌ ತೆರವು ಬದಲು ಇನ್ನೊಂದು 15 ದಿನಗಳ ವರೆಗೂ ವಿಸ್ತರಣೆ ಮಾಡಿ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಎರಡಂಕಿಗೆ ಇಳಿದ ಮೇಲೆ ಅನ್‌ಲಾಕ್‌ ಮಾಡುವುದು ಸೂಕ್ತವಿತ್ತು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಪಾಸಿಟಿವಿಟಿ ದರ ಭರತನಾಟ್ಯ: ಜಿಲ್ಲೆಯ ಕೊರೊನಾ ಪಾಸಿಟಿವಿಟಿ ದರ ದಿನಕ್ಕೊಂದು ಸೂಚ್ಯಾಂಕದಲ್ಲಿ ಬಂದು ನಿಲ್ಲುತ್ತಿದೆ. ಏಪ್ರಿಲ್‌ ಮೊದಲ ವಾರದಲ್ಲಿ ಶೇ.5ಕ್ಕಿಂತಲೂ ಹೆಚ್ಚಾಗಿತ್ತು. ಮುಂದೆ ಬರೀ 15 ದಿನಗಳಲ್ಲಿ ಶೇ.20ಕ್ಕಿಂತಲೂ ಅಧಿಕವಾಗಿ ಜನರು ಆಮ್ಲಜನಕಕ್ಕೂ ಪರದಾಟ ನಡೆಸುವಂತಾಯಿತು. ಇದೀಗ ಜಿಲ್ಲೆಯಲ್ಲಿ ಆನ್‌ಲಾಕ್‌ ಮಾಡಿದ್ದರೂ ಅವಳಿ ನಗರದಲ್ಲಿನ ಪಾಸಿಟಿವಿಟಿ ದರ ಶೇ.16ರಷ್ಟಿದೆ. ಕಾರಣ ಇಲ್ಲಿ ಪರೀಕ್ಷೆ ಪ್ರಮಾಣ ಹೆಚ್ಚಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಶೇ.2.9ರಷ್ಟಿದೆ. ಅಲ್ಲದೇ ಪಾಸಿಟಿವಿಟಿ ದರ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಭರತನಾಟ್ಯವಾಡುತ್ತಿದ್ದು, ನಗರದಿಂದ ಹಳ್ಳಿಗೆ, ಹಳ್ಳಿಗಳಿಂದ ನಗರಕ್ಕೆ ಮೇಲಿಂದ ಮೇಲೆ ವ್ಯತ್ಯಾಸವಾಗುತ್ತ ಸಾಗುತ್ತಿದೆ. ಏಪ್ರಿಲ್‌ ತಿಂಗಳಿನಲ್ಲಿ ನಗರಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ ಅಧಿಕವಾಗಿತ್ತು. ಹಳ್ಳಿಗಳಲ್ಲಿ ಕಡಿಮೆ ಇತ್ತು. ಮುಂದೆ ಕೇವಲ 20 ದಿನಗಳಲ್ಲಿ ಹಳ್ಳಿಗಳಲ್ಲಿ ವಿಪರೀತ ಪ್ರಮಾಣದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಏರಿಕೆಯಾಯಿತು. ನಗರಗಳಲ್ಲಿ ಸ್ಥಿರವಾಗಿತ್ತು. ಇದೀಗ ಜೂನ್‌ ಮೊದಲ ವಾರದಲ್ಲಿ ಹಳ್ಳಿಗಳಲ್ಲಿ ಕೊರೊನಾ ಸಂಪೂರ್ಣ ಹಿಡಿತಕ್ಕೆ ಬಂದಿದ್ದು, ನಗರ ಪ್ರದೇಶದಲ್ಲಿಯೇ ಮತ್ತೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಟಾಪ್ ನ್ಯೂಸ್

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

accident

Udupi: ಬೈಕ್‌ ಢಿಕ್ಕಿ; ವ್ಯಕ್ತಿಗೆ ಗಾಯ; ಪ್ರಕರಣ ದಾಖಲು

2

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.