ಅಪ್ಪ-ಅಮ್ಮ ಆಸ್ಪತ್ರೆಯಲ್ಲಿ : ಮಕ್ಕಳಿಗೆ ಅಗತ್ಯ ಸಾಮಗ್ರಿ ಪೂರೈಸಿದ ಕೋವಿಡ್ ಕಾರ್ಯಪಡೆ
Team Udayavani, May 28, 2021, 7:14 PM IST
ಧಾರವಾಡ: ತಂದೆ ಕಿಮ್ಸನಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಆಸರೆಯಾಗಿ ತಾಯಿಯೂ ಅಲ್ಲೇ ಇದ್ದಾರೆ. ಹೀಗಾಗಿ ಈ ಸಂಕಷ್ಟ ಸಮಯದಲ್ಲಿ ದಿನಸಿ ಸಾಮಗ್ರಿ ಹಾಗೂ ತರಕಾರಿ ಇಲ್ಲದೇ ತೊಂದರೆ ಆಗಿದ್ದು, ದಯವಿಟ್ಟು ಸಹಾಯ ಮಾಡುವಂತೆ ಮಾಡಿದ ಮಗಳ ಕೋರಿಕೆಗೆ ಫಲ ಸಿಕ್ಕಿದ್ದು, ಮನೆಗೆ ಅಗತ್ಯ ಸಾಮಗ್ರಿ ದೊರೆತಿದೆ.
ಮುಮ್ಮಿಗಟ್ಟಿ ಗ್ರಾಮದ ಟೋಪೋಜಿ ದೇವರ್ ಅವರು ಕೊರೊನಾ ಸೋಂಕಿತರಾಗಿ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೆಂಡತಿಯೂ ಅವರಿಗೆ ಆಸರೆಯಾಗಿ ಹುಬ್ಬಳ್ಳಿ ಕಿಮ್ಸನಲ್ಲಿಯೇ ಇದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಮುಮ್ಮಿಗಟ್ಟಿ ಮನೆಯಲ್ಲಿ ಇದ್ದಾರೆ. ಗ್ರಾಮದಲ್ಲಿ ಇವರಿಗೆ ಯಾರೂ ಸಂಬಂಧಿಕರಿಲ್ಲ. ವಿಕಲಚೇತನರಾಗಿರುವ 14 ವರ್ಷದ ಮಗಳು ಕವಿತಾ, ಮನೆಯ ಮುಖ್ಯಸ್ಥರಿಬ್ಬರು ಆಸ್ಪತ್ರೆಯಲ್ಲಿರುವುದರಿಂದ ಮಕ್ಕಳಿಗೆ ಊಟ, ಉಪಹಾರಕ್ಕೆ ದಿನಸಿ, ತರಕಾರಿ ಮತ್ತು ಆಹಾರ ಸಾಮಗ್ರಿಗಳ ಕೊರತೆ ಉಂಟಾಗಿದೆ. ದಯವಿಟ್ಟು ಸಹಾಯ ಮಾಡುವಂತೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಕೋರಿದ್ದಳು. ಇದಕ್ಕೆ ತಕ್ಷಣ ಸ್ಪಂದಿಸಿದ ಮುಮ್ಮಿಗಟ್ಟಿ ಗ್ರಾಪಂ ಕೋವಿಡ್ ಕಾರ್ಯಪಡೆ ಅಗತ್ಯವಿರುವ ದಿನಸಿ, ತರಕಾರಿ, ಆಹಾರ ಸಾಮಗ್ರಿಗಳನ್ನು ಪೂರೈಸಲು ಕ್ರಮ ಕೈಗೊಂಡಿದೆ.
ತಹಶೀಲ್ದಾರ್ ಸಂತೋಷ ಬಿರಾದಾರ ಹಾಗೂ ತಾಪಂ ಇಒ ಎಸ್.ಎಸ್. ಖಾದ್ರೋಳಿ ಅವರ ನಿರ್ದೇಶನದ ಮೇರೆಗೆ ಟೋಪೋಜಿ ದೇವರ್ ಅವರ ಮನೆಗೆ ಪಿಡಿಒ ಜಿ.ಎನ್.ಗಣಾಚಾರಿ, ಗ್ರಾಮ ಲೆಕ್ಕಾ ಧಿಕಾರಿ ಬಸವರಾಜ ಕುಲಾವಿ ಹಾಗೂ ಗ್ರಾಪಂ ಕಾರ್ಯಪಡೆಯ ಸದಸ್ಯರು ಭೇಟಿ ನೀಡಿ ಅವಶ್ಯಕ ದಿನಸಿ, ಆಹಾರ ಸಾಮಗ್ರಿ ಮತ್ತು ತರಕಾರಿ ಪೂರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.